Site icon Vistara News

Road Accident: ಸಚಿವರ ಪಿಎ ಕಾರು ಡಿಕ್ಕಿ, ಬೈಕ್‌ ಸವಾರ ಸಾವು

car hit bike rider death

ಚಿತ್ರದುರ್ಗ: ಇಲ್ಲಿಗೆ ಸಮೀಪದ ಮಲ್ಲಾಡಿಹಳ್ಳಿ ಕ್ರಾಸ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ (Road accident) ಬೈಕ್ ಸವಾರರೊಬ್ಬರು ಸಾವಿಗೀಡಾಗಿದ್ದಾರೆ. ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿ ಕ್ರಾಸ್ ಬಳಿಯ NH-369ನಲ್ಲಿ ಘಟನೆ ನಡೆದಿದೆ. ಇದು ಸಚಿವ ಕೃಷ್ಣಬೈರೇಗೌಡರ ಪಿಎ ಕಾರು ಎಂದು ತಿಳಿದುಬಂದಿದೆ.

ಚಿತ್ರದುರ್ಗ (chitradurga news) ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕುನಗಲಿ ಗ್ರಾಮದ ಬಸವರಾಜಪ್ಪ (45) ಮೃತ ಬೈಕ್ ಸವಾರ. ಹೊಳಲ್ಕೆರೆ ಕಡೆಯಿಂದ ಕುನಗಲಿಗೆ ತೆರಳುತ್ತಿದ್ದ ಬೈಕ್ ಸವಾರನಿಗೆ ಶಿವಮೊಗ್ಗ ಕಡೆಯಿಂದ ಹೊಳಲ್ಕೆರೆ ಮಾರ್ಗವಾಗಿ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಗಾಯಗೊಂಡ ಬಸವರಾಜಪ್ಪ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.

ತಾಯಿಗೆ ಸಾವಿಗೆ ನೊಂದು ಆತ್ಮಹತ್ಯೆ

ಹುಬ್ಬಳ್ಳಿ: ತಾಯಿಯ ಸಾವಿನಿಂದ ಮನನೊಂದು ಯುವತಿಯೊಬ್ಬರು ಆತ್ಮಹತ್ಯೆ (self harm) ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ (hubli news) ಗೋಕುಲ ರಸ್ತೆಯ ಲೋಹಿಯಾ ನಗರದಲ್ಲಿ ಘಟನೆ ನಡೆದಿದೆ. ಸುಮಿತ್ರಾ ಗೋನಾಳ (19) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.

ಇವರ ತಾಯಿ ಸುಮಿತ್ರಾ ತಾಯಿ 15 ದಿನಗಳ ಹಿಂದೆ ಮೃತಪಟ್ಟಿದ್ದರು. ತಾಯಿಯ ಸಾವಿನಿಂದ ಖಿನ್ನತೆಗೆ ಒಳಗಾಗಿ ಸುಮಿತ್ರಾ ನೇಣಿಗೆ ಶರಣಾಗಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇತುವೆಗೆ ಕಾರು ಡಿಕ್ಕಿ ಹೊಡೆದು ಇಬ್ಬರ ಸಾವು

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಮಹಿಳೆಗೆ ಗಂಭೀರ ಗಾಯಗಳಾಗಿವೆ.

ಚಿಕ್ಕಮಗಳೂರು (chikkamagaluru news) ತಾಲೂಕಿನ ಕಣಿವೆ ಕ್ರಾಸ್ ಬಳಿ ಘಟನೆ ನಡೆದಿದೆ. ನಿರಂಜನ್(42), ಚೆನ್ನಮ್ಮ(67) ಮೃತ ದುರ್ದೈವಿಗಳು. ಚಿಕ್ಕಮಗಳೂರಿನಿಂದ ಕಡೂರಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಕಾರಿನಲ್ಲಿ ಸಿಲುಕಿದ್ದ ನಿರಂಜನ್ ರಕ್ಷಣೆಗೆ ಸ್ಥಳೀಯರು ಹರಸಾಹಸಪಟ್ಟರು. ದುರದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವಾಗ ನಿರಂಜನ್ ಸಾವಿಗೀಡಾದರು. ಗಂಭೀರ ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆ ನಿವಾಸಿಗಳು ಎಂದು ತಿಳಿದುಬಂದಿದೆ. ನಿರಂಜನ್ ಖಾಸಗಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Road Accident : ಚಿಕ್ಕೋಡಿ ಬಳಿ ಭೀಕರ ಅಪಘಾತ; ಕಾರು- ಸ್ಕೂಟರ್‌ ಡಿಕ್ಕಿಯಾಗಿ ಅಣ್ಣ-ತಂಗಿ ಸ್ಥಳದಲ್ಲೇ ದುರ್ಮರಣ

Exit mobile version