Site icon Vistara News

Self Harming : ದಾವಣಗೆರೆ ವಿಭಾಗದ ಸ್ಲಂ ಬೋರ್ಡ್ ಎಂಜಿನಿಯರ್ ಆತ್ಮಹತ್ಯೆ; ನಕಲಿ ಹಕ್ಕುಪತ್ರ ಹಗರಣ ಕಾರಣ?

Engineer Ends life

ಚಿತ್ರದುರ್ಗ: ಹೊಸದುರ್ಗ ಪುರಸಭೆಯಲ್ಲಿ ಎಂಜಿನಿಯರ್‌ (Hosadurga Engineer) ಆಗಿರುವ ವೀರೇಶ್‌ ಬಾಬು ಎಂಬವರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಪುರಸಭೆಯಲ್ಲಿ ಇತ್ತೀಚೆಗೆ ನಕಲಿ ಹಕ್ಕುಪತ್ರ ಆರೋಪ ಕೇಳಿಬಂದಿತ್ತು. ಇದರಿಂದ ಒತ್ತಡಕ್ಕೆ ಒಳಗಾಗಿ ಅವರು ಪ್ರಾಣ ಕಳೆದುಕೊಂಡಿರಬೇಕು ಎಂದು ಸಂಶಯಿಸಲಾಗಿದೆ.

ಇವರು ದಾವಣಗೆರೆ ವಿಭಾಗದ ಸ್ಲಂ ಬೋರ್ಡ್‌ನ ಎಂಜಿನಿಯರ್‌ ಆಗಿದ್ದು ಹೊಸದುರ್ಗ ಪುರಸಭೆಯಲ್ಲಿದ್ದರು. ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ ವಾಸ ಮಾಡ್ತಿದ್ದ ವೀರೇಶ್ ಬಾಬು ಅವರು ತಮ್ಮ ಮನೆಯಲ್ಲೇ ಫ್ಯಾನ್‌ಗೆ ನೇಣು ಬಿಗಿದು ಪ್ರಾಣ ಕಳೆದುಕೊಂಡಿದ್ದಾರೆ.

ಹೊಸದುರ್ಗ ಪುರಸಭೆಯಲ್ಲಿ ನಕಲಿ ಹಕ್ಕುಪತ್ರ ನೀಡಿರುವ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಈ ವಿಷಯವಾಗಿ ಮಂಗಳವಾರ ಪುರಸಭೆಯಲ್ಲಿ ಗಲಾಟೆ ನಡೆದಿತ್ತು. ಈ ವಿಚಾರದಲ್ಲಿ ಕೌನ್ಸಿಲರ್ ಹಾಗೂ ವೀರೇಶ್ ಬಾಬು ನಡುವೆ ಗಲಾಟೆ ಆಗಿತ್ತು ಎಂಬ ಆರೋಪದ ಬಗ್ಗೆ ಚರ್ಚೆ ನಡೆದಿತ್ತು.

ಪುರಸಭೆ ಅಧಿಕಾರಿಗಳು 3000 ಸಾವಿರ ರೂ. ಹಣ ವಸೂಲಿ ಮಾಡಿ ನಕಲಿ ಹಕ್ಕುಪತ್ರ ನೀಡಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ನಕಲಿ ಹಕ್ಕು ಪತ್ರ ನೀಡಿರುವ ಬಗ್ಗೆ ಶಾಸಕ ಬಿ.ಜಿ ಗೋವಿಂದಪ್ಪ ತನಿಖೆ ನಡೆಸುವಂತೆ ಸೂಚಿಸಿದ್ದರು. ಈ ಎಲ್ಲಾ ವಿಷಯವಾಗಿ ಒತ್ತಡಕ್ಕೆ ಒಳಗಾಗಿದ್ದ ಎಂಜಿನಿಯರ್ ವೀರೇಶ್ ಬಾಬು ಒತ್ತಡಕ್ಕೆ ಒಳಗಾಗಿದ್ದರು.

ಮಂಗಳವಾರ ಗಲಾಟೆ ನಡೆದ ಬಳಿಕ ಮನೆಗೆ ಬಂದ ವೀರೇಶ್‌ ಬಾಬು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆಯ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Live Self Harming : ನಂಗೆ ಅವಳ ಜತೆ ಸಂಬಂಧ ಇಲ್ಲ ಇಲ್ಲ ಇಲ್ಲ; Liveನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕಾಲೇಜು ಪ್ರಿನ್ಸಿಪಾಲ್‌ ಕಾಲೇಜಿನಲ್ಲೇ ನೇಣಿಗೆ ಶರಣು

ಬಾಗಲಕೋಟೆ: ಸೋಮವಾರ ರಾತ್ರಿಯವರೆಗೂ ಬ್ಯುಸಿಯಾಗಿ ಓಡಾಡುತ್ತಿದ್ದ ಸರ್ಕಾರಿ ಕಾಲೇಜ್ ಪ್ರಿನ್ಸಿಪಾಲ್ (College principal suicide) ಒಬ್ಬರು ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾರೆ, ಅದೂ ಕಾಲೇಜಿನಲ್ಲೇ.

ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ (Hunagunda Government College) ಪ್ರಿನ್ಸಿಪಾಲ್‌ ಅಗಿರುವ ನಾಗರಾಜ್‌ ಮುದ್ಗಲ್‌ (50) ಎಂಬವರೇ ಕಾಲೇಜಿನ ಸ್ಟೇರ್‌ಕೇಸ್‌ನ ಗ್ರಿಲ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಈ ಕಾಲೇಜಿನಲ್ಲಿ ಮಂಗಳವಾರ ಜನಪದ ಸಂಸ್ಕೃತಿ ಕಾರ್ಯಕ್ರಮ ಆಯೋಜನೆಯಾಗಿದೆ. ತಮ್ಮ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಬೇಕು ಎಂಬ ಕಾರಣಕ್ಕಾಗಿ ಅವರು ಸೋಮವಾರ ದಿನವಿಡೀ ಓಡಾಡಿದ್ದರು. ರಾತ್ರಿಯವರೆಗೂ ವ್ಯವಸ್ಥೆಯ ಮೇಲ್ವಿಚಾರಣೆ ನೋಡಿಕೊಂಡಿದ್ದ ಅವರು ಬಳಿಕ ಮನೆಗೆ ಹೋಗಿದ್ದರು.

ರಾತ್ರಿ ಒಂದು ಗಂಟೆ ಸುಮಾರಿಗೆ ಮತ್ತೆ ಕಾಲೇಜಿನಲ್ಲಿ ಕೆಲಸವಿದೆ ಎಂದು ಹೇಳಿ ಬೈಕ್‌ನಲ್ಲಿ ಕಾಲೇಜಿಗೆ ಬಂದಿದ್ದರು. ಬೆಳಗ್ಗೆ ಆರು ಗಂಟೆಗೆ ಮನೆಗೆ ಬಂದಿದ್ದ ಅವರು ಶೌಚ ಮುಗಿಸಿ ಮತ್ತೆ ಕಾಲೇಜಿಗೆ ಬಂದಿದ್ದರು. ಬೆಳಗ್ಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಾಲೇಜಿಗೆ ಬಂದಿರುವ ನಾಗರಾಜ್‌ ಪತ್ನಿ ಮತ್ತು ಪುತ್ರನ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಲೇಜಿನಲ್ಲಿ ಕೆಲಸದ ಒತ್ತಡ ಇದೆ ಎಂದು ಕೆಲವೊಮ್ಮೆ ಹೇಳಿದ್ದು ಬಿಟ್ಟರೆ ಬೇರೆ ಯಾವ ವಿಷಯವನ್ನು ಹೇಳುತ್ತಿರಲಿಲ್ಲ. ಏನೇ ಸಮಸ್ಯೆ ಇದ್ದರೂ ಬಗೆಹರಿಸಬಹುದಿತ್ತು. ಪ್ರಾಣ ಕಳೆದುಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಪತ್ನಿ ಕಣ್ಣೀರು ಹಾಕುತ್ತಿದ್ದಾರೆ.

Exit mobile version