ಬೆಂಗಳೂರು: ಕೊಳದ ಮಠ ಮಹಾಸಂಸ್ಥಾನಕ್ಕೆ ಪೀಠಾಧ್ಯಕ್ಷರ ಆಯ್ಕೆ ಹಿನ್ನಲೆಯಲ್ಲಿ ತಮಗೆ ಜೀವಬೆದರಿಕೆ ಇದೆ ಎಂದು ಹಿಂದಿನ ಸ್ವಾಮೀಜಿಯ ಕುಟುಂಬದವರು ಆರೋಪಿಸಿದ್ದು, ಕೂಡಲೇ ಸರ್ಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿಯವರು ಏಪ್ರಿಲ್ 30ರಂದು ನಿಧನರಾಗಿದ್ದರು. ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ವಿಚಾರ ಇದೀಗ ತಾರಕಕ್ಕೇರಿದೆ.
ಸ್ವಾಮೀಜಿಯವರ ಅಣ್ಣನ ಮಗನ ಪುತ್ರನನ್ನು ನೇಮಕ ಮಾಡಬಾರದು ಎಂದು ಅಣ್ಣನ ಮಗಳು ಆಗ್ರಹಿಸಿದ್ದಾರೆ. ಕೊಳದ ಮಠ ವಂಶಪಾರಂಪಾರಿಕವಾಗಿ ಬಂದಿರುವ ಮಠವಾಗಿದ್ದು, ಸರ್ಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು. ತಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು. ಮಠದ ಒಟ್ಟಾರೆ ಆಸ್ತಿ ₹800 ರಿಂದ ₹1.000 ಕೋಟಿ ಇದ್ದು, ಪ್ರತಿ ತಿಂಗಳು ₹10 ರಿಂದ ₹12 ಲಕ್ಷ ಬಾಡಿಗೆ ಬರುತ್ತದೆ. ಇಷ್ಟು ವರ್ಷ ಶಾಂತವೀರ ಸ್ವಾಮೀಜಿಯ ಅಣ್ಣನ ಮಗ ಹರ್ಷ ಆಸ್ತಿ ನೋಡಿಕೊಳ್ಳುತ್ತಿದ್ದರು. ಸ್ವಾಮೀಜಿ ದೈವಾಧೀನರಾದ ಬಳಿಕ ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿವೆ. ಹರ್ಷ ತನ್ನ ಮಗನನ್ನ ಮಠದ ಪೀಠಾಧಿಪತಿಯನ್ನಾಗಿ ಮಾಡುವ ಯತ್ನ ಮಾಡ್ತಿದ್ದಾರೆ. ಇದಕ್ಕೆ ಮುರುಘಾ ಶ್ರೀಗಳ ಬೆಂಬಲ ಪಡೆಯುವ ಹುನ್ನಾರ ಮಾಡುತ್ತಾ ಇದ್ದಾರೆ. ಹರ್ಷರ ಮಗನನ್ನ ಪೀಠಾಧಿಪತಿಯನ್ನಾಗಿ ಮಾಡಿದರೆ ಮಠ ಹಾಳಾಗುತ್ತದೆ ಎಂದು ಹರ್ಷ ಅಕ್ಕ ಸುಜಾತಾ ಆರೋಪಿಸಿದ್ದಾರೆ.
ಇದನ್ನೂ ಓದಿ | ಈಡಿಗ, ಬಿಲ್ಲವ ಸಮುದಾಯಕ್ಕೆ ನ್ಯಾಯಕ್ಕೆ ಉಪವಾಸ ಎಂದ ಪ್ರಣವಾನಂದ ಸ್ವಾಮೀಜಿ
ಈ ಕುರಿತಂತೆ ಕೊಳದ ಮಠದ ರುದ್ರಾರಾಧ್ಯ ಅವರು ಮಾಥನಾಡಿ, ಈ ಹಿಂದೆ ಈ ಮಠಕ್ಕೆ ಪೀಠಾಧ್ಯಕ್ಷರನ್ನ ಆಯ್ಕೆ ಮಾಡುತ್ತೇವೆ ಎಂದು ಚಿತ್ರದುರ್ಗ ಮುರುಘರಾಜೇಂದ್ರ ಮಠದ ಸ್ವಾಮೀಜಿ ಹೇಳಿದ್ದರು. ಆದರೆ ಅದರ ಅಗತ್ಯ ಈ ಮಠಕ್ಕೆ ಇಲ್ಲ. ಕೊಳದ ಮಠಕ್ಕೆ ನಾವೇ ಪೀಠಾಧ್ಯಕ್ಷರನ್ನ ಆಯ್ಕೆ ಮಾಡುತ್ತೆವೆ. ನಮ್ಮ ವಂಶಸ್ಥರೇ ಈ ಮಠಕ್ಕೆ ಪೀಠಾಧ್ಯಕ್ಷರಾಗಿ ನೇಮಕ ಆಗುತ್ತಾರೆ. ಚಿತ್ರದುರ್ಗದ ಮುರುಘಾ ಮಠಕ್ಕೂ , ಕೊಳದ ಮಠಕ್ಕೂ ಯಾವುದೇ ಸಂಬಂಧ ಇಲ್ಲ. ಕೊಳದ ಮಠದ ಆಸ್ತಿ ಕಬಳಿಸಲು ಮುರುಘಾ ಮಠದ ಸ್ವಾಮಿಜಿ ಯತ್ನಿಸುತ್ತಿದ್ದಾರೆ.
ಈ ರೀತಿ ಮುರುಘಾ ಮಠದವರು ಕೊಳದ ಮಠಕ್ಕೆ ಮಧ್ಯ ಪ್ರವೇಶ ಮಾಡುವುದು ತಪ್ಪು. ಕೊಳದ ಮಠ, ಮುರುಘಾ ಮಠದ ಶಾಖಾ ಮಠ ಅಲ್ಲ. ಈ ಸಂಬಂಧ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಈಡಿಗ, ಬಿಲ್ಲವ ಸಮುದಾಯಕ್ಕೆ ನ್ಯಾಯಕ್ಕೆ ಉಪವಾಸ ಎಂದ ಪ್ರಣವಾನಂದ ಸ್ವಾಮೀಜಿ