Site icon Vistara News

ಮುರುಘಾಶ್ರೀ ಪ್ರಕರಣ | ಕೇಸ್‌ನಿಂದ ಹಿಂದೆ ಸರಿಯಲು ಹಣದ ಆಮಿಷ ಹೇಳಿಕೆ; ಒಡನಾಡಿ ಪರಶುರಾಮ್‌ಗೆ ಡಿವೈಎಸ್‌ಪಿ ನೋಟಿಸ್‌

ಮುರುಗಾಶ್ರೀ ಪ್ರಕರಣ

ಮೈಸೂರು: ಮುರುಘಾಶ್ರೀ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಾನೂನು ಹೋರಾಟದಿಂದ ಹಿಂದೆ ಸರಿಯಲು ಒಡನಾಡಿ ಸಂಸ್ಥೆಗೆ 3 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿತ್ತು ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಒಡನಾಡಿ ನಿರ್ದೇಶಕ ಪರಶುರಾಮ್ ಅವರಿಗೆ ಚಿತ್ರದುರ್ಗ ಡಿವೈಎಸ್‌ಪಿ ಲೋಕೇಶ್ ನೋಟಿಸ್‌ ನೀಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರಕರಣದಿಂದ ಹಿಂದೆ ಸರಿಯಲು 3 ಕೋಟಿ ಆಮಿಷ ಒಡ್ಡಿರುವುದನ್ನು ಪರಶುರಾಮ್‌ ಬಹಿರಂಗಪಡಿಸಿದ್ದರು. ಹೀಗಾಗಿ ವಿಚಾರಣೆಗಾಗಿ ಸೂಕ್ತ ಸಾಕ್ಷ್ಯಗಳೊಂದಿಗೆ ಹಾಜರಾಗಲು ಚಿತ್ರದುರ್ಗ ಡಿವೈಎಸ್‌ಪಿಯಿಂದ ಒಡನಾಡಿ ನಿರ್ದೇಶಕ ಪರಶುರಾಮ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಮುರುಘಾಮಠದ ಹಾಸ್ಟೆಲ್‌ನ ಕೆಲ ಬಾಲಕಿಯರ ಮೇಲೆ ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಒಡನಾಡಿ ಸಂಸ್ಥೆಯಿಂದ ಮೈಸೂರಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ನಂತರ ಮುರುಘಾಶ್ರೀ ಸೇರಿ ಹಲವು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಇದರ ಬೆನ್ನಲ್ಲೇ ಸ್ವಾಮೀಜಿ ವಿರುದ್ಧ 2ನೇ ಪೋಕ್ಸೊ ಪ್ರಕರಣ ಕೂಡ ದಾಖಲಾಗಿತ್ತು. ಈ ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

ಇದನ್ನೂ ಓದಿ | False Complaint | ಮಾಡೆಲ್‌ ಕೊಟ್ಟ ಸುಳ್ಳು ರೇಪ್‌ ಕೇಸ್‌ನಿಂದ ರ‍್ಯಾಪಿಡೊ ಚಾಲಕನ ಲೈಫೇ ಬರ್ಬಾದ್; ಮನೆಗೂ ಸೇರಿಸುತ್ತಿಲ್ಲ, ಕೆಲಸವೂ ಇಲ್ಲ

Exit mobile version