Site icon Vistara News

Twin murder | ಹೊಸದುರ್ಗ ಪಟ್ಟಣದಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ

twin murder

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆಯಾಗಿದೆ. ವಿನಾಯಕ‌ ಬಡಾವಣೆಯಲ್ಲಿನ ನಿವಾಸದಲ್ಲಿಯೇ (Twin murder) ದಂಪತಿ ಹತ್ಯೆಗೀಡಾಗಿದ್ದಾರೆ.

ಪ್ರಭಾಕರ ಶೆಟ್ರು(75) ಹಾಗೂ ಪತ್ನಿ ವಿಜಯ ಲಕ್ಷ್ಮೀ(65) ಅವರನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ.

ಮನೆಯಲ್ಲಿ ಇಬ್ಬರೇ ವೃದ್ಧ ದಂಪತಿ ವಾಸವಾಗಿದ್ದರು. ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಈ ತನಕ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹತ್ಯೆಗೀಡಾದ ದಂಪತಿ
Exit mobile version