ಸಿಂಗಾಪುರ: ಹಿಂದಿ ಕಿರುತೆರೆಯ ಖ್ಯಾತ ನಿರ್ಮಾಪಕ, ಟಿವಿ ಕ್ರೈಂ ಖ್ಯಾತ ಧಾರಾವಾಹಿ ‘ಸಿಐಡಿ’ ನಿರ್ಮಾಪಕ, ಕರಾವಳಿ ಮೂಲದ ಪ್ರದೀಪ್ ಉಪ್ಪೂರು (Pradeep Uppoor) ಅವರು ಸೋಮವಾರ (ಮಾರ್ಚ್ 13) ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಿಂಗಾಪುರದಲ್ಲಿಯೇ ನಿಧನರಾಗಿದ್ದಾರೆ.
ಖ್ಯಾತ ಟಿವಿ ಶೋನಲ್ಲಿ ಎಸಿಪಿ ಪಾತ್ರ ನಿರ್ವಹಿಸುತ್ತಿದ್ದ ನಟ ಶಿವಾಜಿ ಸತಮ್ ಅವರು ಉಪ್ಪೂರು ನಿಧನದ ಕುರಿತು ಮಾಹಿತಿ ನೀಡಿದ್ದಾರೆ. “ಸಿಐಡಿಯ ಬುನಾದಿ, ನಿರ್ಮಾಕಪ ಪ್ರದೀಪ್ ಉಪ್ಪೂರು ನಮ್ಮನ್ನು ಅಗಲಿದ್ದಾರೆ. ನಗು ಮುಖದ, ನಿಷ್ಠಾವಂತ, ಪರಿಶ್ರಮಿ ಅಗಲಿಕೆಯಿಂದ ನನ್ನ ಜೀವನದ ಬಹುದೊಡ್ಡ ಅಧ್ಯಾಯ ಇಂದು ಕೊನೆಯ ಹಂತಕ್ಕೆ ಬಂದಿದೆ, ಲವ್ ಯೂ” ಎಂದು ಪೋಸ್ಟ್ ಮಾಡಿದ್ದಾರೆ. ಪ್ರದೀಪ್ ಉಪ್ಪೂರು ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Satish Kaushik: ಬಾಲಿವುಡ್ ನಟ ಸತೀಶ ಕೌಶಿಕ್ ನಿಧನ
ಕರಾವಳಿಯವರಾದ ಪ್ರದೀಪ್ ಉಪ್ಪೂರು ಮುಂಬೈನಲ್ಲಿ ನೆಲೆಸಿದ್ದರು. ಸಿಂಗಾಪುರದಿಂದ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸಿಐಡಿ ಕ್ರೈಂ ಶೋ, 1998ರಿಂದ 2018ರವರೆಗೆ ಸತತವಾಗಿ ಪ್ರಸಾರವಾಗಿದೆ. ಉಪ್ಪೂರು ಅವರ ಫೈರ್‌ವರ್ಕ್ಸ್ ಪ್ರೊಡಕ್ಷನ್ ಸಂಸ್ಥೆಯಡಿಯಲ್ಲಿ ಸಿಐಡಿ ಪ್ರಸಾರವಾಗಿತ್ತು. ಇದರ ಜತೆಗೆ ಹಲವು ಧಾರಾವಾಹಿಗಳಿಗೆ ಉಪ್ಪೂರು ನಿರ್ಮಾಪಕರಾಗಿದ್ದರು.