Site icon Vistara News

ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಡೆದ ಯಲ್ಲಾಪುರ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್

vishwadarshan school

ಯಲ್ಲಾಪುರ: ಯಲ್ಲಾಪುರದ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ 2021-2022ನೆ ಸಾಲಿನ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಭಾರತ ಸರ್ಕಾರದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಡೆಸುವ ಸ್ವಚ್ಛ ವಿದ್ಯಾಲಯ ಸರ್ವೆಯಲ್ಲಿ ಉತ್ತರ ಕನ್ನಡ ಮಟ್ಟದಲ್ಲಿ ವಿಶ್ವದರ್ಶನ ಸೆಂಟ್ರಲ್‌ ಸ್ಕೂಲಿಗೆ ಈ ಪುರಸ್ಕಾರ ದೊರೆತಿದೆ. ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಶಾಲೆಯ ಶಿಕ್ಷಕರಾದ ಗಣೇಶ ಭಟ್ ಪಡೆದುಕೊಂಡರು.

ರಾಷ್ಟ್ರ ಮಟ್ಟದಲ್ಲಿ ಸ್ವಚ್ಛ ವಿದ್ಯಾಲಯಗಳ ಸರ್ವೆಯನ್ನು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸಿ ಶಾಲೆಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡುತ್ತದೆ. ಉತ್ತರ ಕನ್ನಡ ಜಿಲ್ಲೆಯ ಒಟ್ಟು 38 ಶಾಲೆಗಳಿಗೆ ಇದುವರೆಗೆ ಈ ಪ್ರಶಸ್ತಿ ಲಭ್ಯವಾಗಿದೆ. ಮುಖ್ಯವಾಗಿ ಶಾಲೆಯ ಪರಿಸರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸ್ವಚ್ಛತಾ ಕಾರ್ಯ ಹಾಗೂ ಅವುಗಳ ನಿರ್ವಹಣೆ ಇವುಗಳನ್ನು ಆಧರಿಸಿ ಪುರಸ್ಕಾರ ನೀಡಲಾಗುತ್ತದೆ. ಈ ಮಾನದಂಡಗಳಲ್ಲಿ ವಿಶ್ವದರ್ಶನ ಸೆಂಟ್ರಲ್‌ ಸ್ಕೂಲ್‌ ಅತ್ಯುತ್ತಮ ಸಾಧನೆ ಮಾಡಿದ್ದು, ಶಾಲೆಯ ಪರಿಶ್ರಮಕ್ಕೆ ಪುರಸ್ಕಾರ ದೊರೆತಿರುವುದಕ್ಕೆ ಆಡಳಿತ ಮಂಡಳಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Weather Report: ಉತ್ತರಕನ್ನಡ ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಣೆ: ಸಮುದ್ರಕ್ಕೆ ಇಳಿಯದಂತೆ ವಾರ್ನಿಂಗ್‌

Exit mobile version