Site icon Vistara News

Karnataka Election: ಹಗರಣ ಇಲ್ಲದೆ ಶಿಕ್ಷಕರ ನೇಮಕ, ಶಾಲಾ ಕೊಠಡಿಗಳ ನಿರ್ಮಾಣ: ಸಿಎಂ ಬೊಮ್ಮಾಯಿ

farmer cm basavaraj bommai lashes out over karnataka cm siddaramaiah

karnataka-election: LIngayata vedike an imaginary organization says Bommai

ತುಮಕೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ಯಾವುದೇ ಹಗರಣ ಮಾಡದೇ 17,000 ಶಿಕ್ಷಕರ ನೇಮಕ ಹಾಗೂ 8,000 ಶಾಲಾ ಕೊಠಡಿ ನಿರ್ಮಾಣ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕದವರಿಗೂ ಶಿಕ್ಷಕರನ್ನಾಗಿ ನೇಮಕ ಮಾಡಿ ಭ್ರಷ್ಟಾಚಾರ ಮಾಡಲಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ಬಿಜೆಪಿ ಅಭ್ಯರ್ಥಿ ಬಿ.ಸಿ. ನಾಗೇಶ್ ಪರ ರೋಡ್ ಶೋ ನಡೆಸಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಹಾಸಿಗೆ ದಿಂಬಿನಲ್ಲಿಯೂ ಲಂಚಾವತಾರ ಮಾಡಿದರು. ಪೊಲಿಸ್ ನೇಮಕಾತಿಯಲ್ಲಿಯೂ ಹಗರಣ ಮಾಡಿದರು ಎಂದು ಹೇಳಿದರು.

ತಿಪಟೂರು ಕಲ್ಪವೃಕ್ಷದ ನಾಡು, ಇಲ್ಲಿನ ಜನರು ಒಳ್ಳೆಯದನ್ನು‌ ಬೆಂಬಲಿಸುತ್ತಾರೆ. ಬಿ.ಸಿ. ನಾಗೇಶ್ ಅವರು ತಿಪಟೂರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ಹೊನ್ನಳ್ಳಿ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದು ಕಟ್ಟ ಕಡೆಯ ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭಾಗ್ಯ ಲಕ್ಷ್ಮಿ ಯೊಜನೆ ಜಾರಿಗೆ ತಂದರು. ಇದರಿಂದ ಶೇ 30 ರಷ್ಟು ಅಲ್ಪ ಸಂಖ್ಯಾತ ಮಹಿಳೆಯರಿಗೆ ಅನುಕೂಲವಾಗಿದೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ಯಡಿಯೂರಪ್ಪ ಅವರು 4000 ರೂ. ಸೇರಿಸಿ ರೈತರಿಗೆ ಕೊಡುವ ಕೆಲಸ ಮಾಡಿದ್ದಾರೆ. ರೈತ ವಿದ್ಯಾನಿಧಿ, ಎಸ್‌ಸಿ ಎಸ್‌ಟಿ ಸಮುದಾಯಕ್ಕೆ 75 ಯುನಿಟ್ ಉಚಿತ ವಿದ್ಯುತ್, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಬಿ.ಸಿ. ನಾಗೇಶ್ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡು ಬರಬೇಕು. ಅವರು ಹೇಮಾವತಿ ನೀರು ತರುವ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಮನೆಮನೆಗೆ ನಲ್ಲಿ ನೀರು ಕೊಡುವ ಕೆಲಸವಾಗುತ್ತಿದೆ. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿರುವ ನಾಗೇಶ್‌ ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಮತ್ತೆ‌ ಕಮಲ ಅರಳಿಸಬೇಕು ಎಂದು ಜನರಿಗೆ ಮನವಿ ಮಾಡಿದರು.

ಕಾಂಗ್ರೆಸ್‌ನವರ ಗ್ಯಾರಂಟಿ ಬರೀ ಗಳಗಂಟಿ

ಕಾಂಗ್ರೆಸ್‌ನವರು 10 ಕೆಜಿ ಅಕ್ಕಿ ಕೊಡುತ್ತೇವೆ ಎನ್ನುತ್ತಾರೆ. ಹೆಣ್ಣು ಮಕ್ಕಳಿಗೆ 2000 ರೂ. ಕೊಡುವುದಾಗಿ ಹೇಳುತ್ತಾರೆ. 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇನೆ ಎಂದು ಗ್ಯಾರಂಟಿ ಕೊಡುತ್ತಿದ್ದಾರೆ. ಅದರ ಮೇಲೆ ನಂಬಿಕೆ‌ ಇದೆಯಾ?
ಕಾಂಗ್ರೆಸ್‌ನವರ ಗ್ಯಾರಂಟಿ ಬರೀ ಗಳಗಂಟಿ ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದವರು. ಒಂದು ಸಮುದಾಯ ಭ್ರಷ್ಟಾಚಾರದಲ್ಲಿ ತೊಡಗಿದೆ ಅಂತ ನೇರವಾಗಿ ಆರೋಪ ಮಾಡಿದ್ದಾರೆ. ಎಷ್ಟೇ ಸಣ್ಣ ಸಮುದಾಯಗಳಿಗೂ ಗೌರವ ಕೊಡಬೇಕು. ಇಂತಹವರು ಸಾರ್ವಜನಿಕ ಜೀವನದಲ್ಲಿ ಇರಬೇಕಾ? ಮೊದಲು ಲಿಂಗಾಯತ ಸಮುದಾಯದವರೆಲ್ಲ ಅಂತ ಹೇಳಿದರು. ಮತ್ತೆ ಸಮಜಾಯಿಷಿ ನೀಡಿ ನನ್ನ ಮೇಲೆ ಆರೋಪ ಮಾಡಿದರು. ಸಿದ್ದರಾಮಯ್ಯ ಅವರೇ ನಿಮ್ಮ ಅವಧಿಯಲ್ಲಿ ಬಿಡಿಎನಲ್ಲಿ 8000 ಕೋಟಿ ರೂ. ಹಗರಣ ಮಾಡಿದ್ದರು ಎಂದು ಸಿಎಂ ಆರೋಪಿಸಿದರು.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮೇಲೆ ಕಾಂಗ್ರೆಸ್‌ನವರು ಆರೋಪ ಮಾಡಿದ್ದಾರೆ. ನಾಗೇಶ್ ಮೇಲೆ ಮಾಡಿರುವ ಆರೋಪ ದೇವರ ಮೇಲೆ ಮಾಡಿದಂತೆ. ಅವರ ಕಾಲದಲ್ಲಿ ನಡೆದ ಶಿಕ್ಷಕರ ಹಗರಣ ತನಿಖೆ ನಡೆಸಿದಾಗ 72 ಜನರನ್ನು ತೆಗೆದು ಹಾಕಲಾಯಿತು ಎಂದು ಹೇಳಿದರು.

Also read this: https://vistaranews.com/karnataka/karnataka-election-hijab-halal-are-no-more-election-issues-said-cm-basavaraj-bommai/299259.html

Exit mobile version