ಬೆಂಗಳೂರು: ವಿಸ್ತಾರ ಮೀಡಿಯಾದ ಬಹು ನಿರೀಕ್ಷಿತ ಟಿವಿ ಚಾನೆಲ್ ಉದ್ಘಾಟನೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ವಿಸ್ತಾರ ಮೀಡಿಯಾದ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಸಂಸ್ಥೆಯ ಚೇರ್ಮನ್ ಮತ್ತು ಎಂಡಿ ಎಚ್ ವಿ ಧರ್ಮೇಶ್ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮೊದಲ ಆಹ್ವಾನಪತ್ರ ನೀಡಿ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು. ಟಿವಿ ಚಾನೆಲ್ನ ರೂಪುರೇಷೆ ಮತ್ತು ವಿಭಿನ್ನವಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಮಾಹಿತಿಯನ್ನು ಇವರು ಬೊಮ್ಮಾಯಿ ಅವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಚಿವ ಡಾ. ಅಶ್ವತ್ಥ ನಾರಾಯಣ್ ಇದ್ದರು.
ವಿಸ್ತಾರ ಟಿವಿ ಚಾನೆಲ್ಗೆ ಸಿಎಂ ಬೊಮ್ಮಾಯಿ ಅವರು ಶುಭ ಹಾರೈಸಿದರು. ಟಿವಿ ಚಾನೆಲ್ಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನವೆಂಬರ್ ೬ರಂದು ಸಿಎಂ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ……
ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್ ಸಿದ್ಧತೆಗೆ ಮೆಚ್ಚುಗೆ