Site icon Vistara News

CM Bommai : 1.14 ಲಕ್ಷ ಒಬಿಸಿ ಫಲಾನುಭವಿಗಳಿಗೆ 900 ಕೋಟಿ ರೂ. ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

CM Bommai

#image_title

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರು ಹಿಂದುಳಿದ ವರ್ಗಗಳ ವಿವಿಧ ನಿಗಮಗಳ ವತಿಯಿಂದ 1.14 ಲಕ್ಷ ಫಲಾನುಭವಿಗಳಿಗೆ 900 ಕೋಟಿ ರೂ.ಗಳನ್ನು ಶನಿವಾರ ಬಿಡುಗಡೆ ಮಾಡಿದರು. ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ವಿವಿಧ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸವಲತ್ತುಗಳನ್ನು ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಜನರಿಂದ ಸ್ಥಾಪಿತವಾಗಿದ್ದು, ಇದರ ಅರಿವನ್ನು ಹೊತ್ತು ಈ ವಿಧಾನಸೌಧದಲ್ಲಿ ಕೆಲಸ ಮಾಡಬೇಕು. ನ್ಯಾಯ ಕೊಡುವ ಭ್ರಮೆ ಹುಟ್ಟಿಸುವುದರಿಂದ ಬದುಕು ಬಂಗಾರವಾಗುವುದಿಲ್ಲ. ಹುಸಿ ಭರವಸೆಯನ್ನ ಕೊಟ್ಟು ನ್ಯಾಯವನ್ನು ನೀಡಲಾಗದು. ವಸ್ತುನಿಷ್ಠವಾಗಿ ಬದುಕಿನಲ್ಲಿ
ಸ್ವಾಭಿಮಾನಿ ಬದುಕನ್ನು ಬದುಕಲು ಸಾಧ್ಯವೆಂದು ಮನಗಂಡು ಸರ್ಕಾರ ಕಾರ್ಯಕ್ರಮ ರೂಪಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು.

ವಿಧಾನಸೌಧದ ಮುಂಭಾಗದಲ್ಲಿ ನಡೆದ ಫಲಾನುಭವಿಗಳಿಗೆ ಹಣ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು.

ಸ್ಪಂದನಾಶೀಲ ಸರ್ಕಾರ

ʻʻಫಲಾನುಭವಿಗಳಿಗೆ ಈಗ ನೀಡಲಾಗುತ್ತಿರುವ ಸೌಲಭ್ಯಗಳನ್ನು 75 ವರ್ಷಗಳಿಂದ ಮಾಡಿದ್ದರೆ ಜನರ ಬದುಕು ಇನ್ನಷ್ಟು ಸುಧಾರಿಸುತ್ತಿತ್ತು. ಉನ್ನತ ಶಿಕ್ಷಣಕ್ಕೆ ದೊಡ್ಡ ಅನುದಾನ ಬಳಕೆ ಮಾಡಬಹುದಿತ್ತು. ಎಲ್ಲರಿಗೂ ಸೂರು ಸಿಕ್ಕಿದ್ದರೆ ಮನೆ ಕಟ್ಟುವ ಅವಕಾಶವಿರುತ್ತಿರಲಿಲ್ಲ. ಸ್ವಯಂ ಉದ್ಯೋಗ ಸಿಕ್ಕಿದ್ದಾರೆ ಇತರರಿಗೆ ಸಹಾಯ ಮಾಡಬಹುದಿತ್ತು. ಇದ್ಯಾವುದು ಆಗಲಿಲ್ಲ. ಇನ್ನು ಮುಂದಾದರೂ ಬದಲಾವಣೆಯಾಗಬೇಕುʼʼ ಎಂದು ಹೇಳಿದರು.

ಐದು ತಿಂಗಳಲ್ಲಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ

ʻʻಗಂಗಾ ಕಲ್ಯಾಣ ಯೋಜನೆಯಡಿ 19 ಸಾವಿರ ಫಲಾನುಭವಿಗಳಿಗೆ ಬೇರೆ ಬೇರೆ ನಿಗಮಗಳ ವತಿಯಿಂದ ಕೊಳವೆ ಬಾವಿ ಮಂಜೂರು ಮಾಡಲಾಗಿದೆ. ಪಂಚವಾರ್ಷಿಕ ಯೋಜನೆಯಂತೆ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದರು. ಐದು ತಿಂಗಳಲ್ಲಿ ಆಗೋದನ್ನು ಐದು ವರ್ಷ ಮಾಡುತ್ತಿದ್ದರು. ನಾವು ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನವನ್ನು ವರ್ಗಾಯಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಗುತ್ತಿಗೆದಾರನಿಗೆ ಸಹಾಯ ಮಾಡೋ ಕೆಲಸ ನಾವು ಮಾಡಿಲ್ಲ. ಒಬ್ಬ ಗುತ್ತಿಗೆದಾರ ಸಾವಿರಾರು ಜನರ ಬದುಕನ್ನು ಮುಷ್ಟಿಯಲ್ಲಿ ಇಟ್ಟಿಕೊಳ್ಳೋದು ಯಾವ ನ್ಯಾಯ? ಅದಕ್ಕಾಗಿ ನಾವು ಡಿಬಿಟಿ ಜಾರಿಗೆ ತಂದು, ಮೊದಲ ಕಂತಿನಲ್ಲಿ 75 ಸಾವಿರ ಹಣವನ್ನು ನೇರವಾಗಿ ಖಾತೆಗಳಿಗೆ ವರ್ಗಾಯಿಸಿದ್ದೇವೆʼʼ ಎಂದರು.

ವಿಧಾನ ಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ದೇವರಾಜ ಅರಸು ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು

ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ

ಗಂಗಾ ಕಲ್ಯಾಣ, 50 ಕನಕದಾಸ ಹಾಸ್ಟೆಲ್, ಸ್ವಯಂ ಉದ್ಯೋಗ, ಹೊಲಿಗೆ ತರಬೇತಿ ಸೇರಿದಂತೆ ಹಲವು ವಿತರಣೆ
ವಿದ್ಯಾಸಿರಿ ಯೋಜನೆ ಹಾಗೂ ಹಾಸ್ಟೆಲ್ ಮೂಲಕ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಹಳ್ಳಿಗಳಲ್ಲಿ ಹಿಂದುಳಿದ ವರ್ಗದವರಿಗೆ ಕಾಯಕ ಕಾರ್ಯಕ್ರಮದ ಮೂಲಕ 50 ಸಾವಿರದವರೆಗೂ ನೀಡಲಾಗುತ್ತಿದೆ. ಅವಶ್ಯಕತೆಗೆ ಅನುಸಾರವಾಗಿ 33 ಸಾವಿರ ಮಕ್ಕಳಿಗೆ ವಿದ್ಯಾರ್ಥಿನಿಲಯದ ಸೌಕರ್ಯ ಕಲ್ಪಿಸಲಾಗಿದೆ. ಈ ವರ್ಷ ಹೆಚ್ಚುವರಿಯಾಗಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು ಬಸವರಾಜ ಬೊಮ್ಮಾಯಿ.

ಇದನ್ನೂ ಓದಿ : Haveri News: ಕಿರಾಣಿ ಅಂಗಡಿಗಳು ನೀಡುವ ಸೇವೆ ಮಾಲ್‌ಗಳೂ ನೀಡುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Exit mobile version