Site icon Vistara News

CM Siddaramaiah: ನಿಗಮ-ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ನೇಮಿಸಲು ಸಮಿತಿ ರಚಿಸಿದ ಸಿಎಂ

CM Siddaramaiah

ಬೆಂಗಳೂರು: ರಾಜ್ಯದ ವಿವಿಧ ನಿಗಮ, ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಇದೀಗ ನಿರ್ದೇಶಕರು, ಸದಸ್ಯರನ್ನು ನೇಮಕ ಮಾಡಲು ಸಮಿತಿಯೊಂದನ್ನು ರಚನೆ ಮಾಡಿ ಸಿಎಂ ಸಿದ್ದರಾಮಯ್ಯ (CM Siddaramaiah) ಆದೇಶ ಹೊರಡಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಇದರಲ್ಲಿ ಸಚಿವರು, ಶಾಸಕರು, ರಾಜ್ಯಸಭಾ ಸದಸ್ಯರು ಸೇರಿ 10 ಸದಸ್ಯರು ಇದ್ದಾರೆ.

ಸಮಿತಿಯಲ್ಲಿ ಯಾರಿದ್ದಾರೆ?

ಅಧ್ಯಕ್ಷರು: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

ಸದಸ್ಯರು:
1.ಸಚಿವ ರಾಮಲಿಂಗಾರೆಡ್ಡಿ
2.ಸಚಿವ ಕೆ.ಜೆ. ಜಾರ್ಜ್
3.ಸಚಿವ ಸತೀಶ್ ಜಾರಕಿಹೊಳಿ
4.ಸಚಿವ ಸಂತೋಷ್ ಎಸ್. ಲಾಡ್
5.ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್
6.ರಾಜ್ಯ ಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್
7.ಕೆಜಿಎಫ್‌ ಶಾಸಕಿ ಡಾ. ರೂಪಕಲಾ ಎಂ.
8.ಶಿವಾಜಿನಗರ ಶಾಸಕ ರಿಜ್ಞಾನ್ ಅರ್ಷದ್
9.ವಿಧಾನ ಪರಿಷತ್ ಮಾಜಿ ಅಧ್ಯಕ್ಷ ವಿ.ಆರ್. ಸುದರ್ಶನ್
10.ಮಾಜಿ ಎಂಎಲ್‌ಸಿ ಕೆ. ಹರೀಶ್‌ಕುಮಾರ್

Dengue cases: ಡೆಂಗ್ಯೂ ತಡೆಗೆ ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ

ಅನರ್ಹ ಬಿಪಿಎಲ್‌ ಕಾರ್ಡ್ ರದ್ದು; 20 ಲಕ್ಷಕ್ಕೂ ಅಧಿಕ ಪಡಿತರದಾರರಿಗೆ ಶಾಕ್, ಯಾರ ಕಾರ್ಡ್‌ ರದ್ದಾಗುತ್ತೆ?

ಬೆಂಗಳೂರು: ಅನರ್ಹ ಬಿಪಿಎಲ್‌ ಕಾರ್ಡ್ (Ineligible BPL card) ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅನರ್ಹ ಕಾರ್ಡ್ ರದ್ದತಿಗೆ ತಯಾರಿ ನಡೆಯುತ್ತಿದೆ. ಬಡತನ ರೇಖೆಗಿಂತ ಮೇಲಿರುವ ಹಲವರು ಸೌಲಭ್ಯ ಪಡೆಯುತ್ತಿರುವುದರಿಂದ ಅರ್ಹರಿಗೆ ಸೌಲಭ್ಯ ತಲುಪುತ್ತಿಲ್ಲ. ಹೀಗಾಗಿ ಅನರ್ಹ ಬಿಪಿಎಲ್‌ ಕಾರ್ಡ್ ರದ್ದು ಮಾಡಲು ಇಲಾಖೆ ಮುಂದಾಗಿದ್ದು, ಇದರಿಂದ 20 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ದಾರರಿಗೆ ಶಾಕ್ ಫಿಕ್ಸ್‌ ಎನ್ನಲಾಗಿದೆ.

ರಾಜ್ಯದಲ್ಲಿ ಹಾಲಿ 1,27,35,786 ಬಿಪಿಎಲ್ ಕಾರ್ಡ್‌ಗಳಿದ್ದು, 4,36,84,635 ಜನರು ಸೌಲಭ್ಯ ಪಡೆಯುತ್ತಿದ್ದಾರೆ. ಹೊಸದಾಗಿ ಬಿಪಿಎಲ್ ಕಾರ್ಡ್‌ಗಾಗಿ 3 ಲಕ್ಷ ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಇದೀಗ ಅನರ್ಹ ಕಾರ್ಡ್‌ ರದ್ದು ಮಾಡಲು ಆಹಾರ ಇಲಾಖೆಗೆ ನಾಲ್ಕು ಇಲಾಖೆಗಳು ಸಾಥ್ ನೀಡುತ್ತಿವೆ.

ಬಿಪಿಎಲ್‌ ಕಾರ್ಡುದಾರರ ಹೆಸರಿನಲ್ಲಿ ವಾಹನಗಳು ಇದೆಯಾ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡುತ್ತಿದ್ದು, ಫಲಾನುಭವಿಗಳ ಹೆಸರಲ್ಲಿ ಭೂಮಿ ಎಷ್ಟಿದೆ ಎಂಬ ಮಾಹಿತಿಯನ್ನು ಕಂದಾಯ ಇಲಾಖೆ ನೀಡುತ್ತಿದೆ. ಇನ್ನು ಐಟಿ ಪಾವತಿ ಬಗ್ಗೆ ಐಟಿ ಇಲಾಖೆಯಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಸರ್ಕಾರಿ ನೌಕರಿ, ಸರ್ಕಾರಿ ಪ್ರಾಯೋಜಿತ ಇಲಾಖೆ, ನಿಗಮ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

ರಾಜ್ಯದಲ್ಲಿ ಎಷ್ಟು ಕಾರ್ಡ್ ರದ್ದಾಗುತ್ತೆ?

ಬಿಪಿಎಲ್ ಕಾರ್ಡ್‌ ಹೊಂದಿರುವವರಲ್ಲಿ ಹಲವರು ಜೀವನೋಪಾಯಕ್ಕಾಗಿ ಒಂದು ವಾಣಿಜ್ಯ ವಾಹನ ಹೊರತುಪಡಿಸಿ ಅದಕ್ಕಿಂತ ಹೆಚ್ಚು ವಾಹನ ಹೊಂದಿರುವುದು ಕಂಡುಬಂದಿದೆ. ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಆದಾಯ, ಭೂಮಿ ಹೊಂದಿರುವವರು ಕೂಡ ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ. ಅಂತಹ 20 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | PM Modi Russia Visit : ಭಾರತ-ರಷ್ಯಾ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಯಾರ ಕಾರ್ಡ್‌ ರದ್ದಾಗುತ್ತೆ?

  1. ವೈಟ್ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಇದ್ದರೆ ಕಾರ್ಡ್ ರದ್ದು
  2. ಐಟಿ ರಿಟರ್ನ್ಸ್ ಮಾಡುತ್ತಿದ್ದರೆ ಬಿಪಿಎಲ್ ಕಾರ್ಡ್‌ ರದ್ದು
  3. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಇದ್ದವರ ಕಾರ್ಡ್ ರದ್ದು
  4. ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವವರ ಕಾರ್ಡ್‌ ರದ್ದು
  5. ಪ್ರತಿ ಮಾಹೆ 150 ಯುನಿಟ್‌ಗಳಿಂಗಿತಲೂ ಹೆಚ್ಚಿನ ವಿದ್ಯುಚ್ಛಕ್ತಿಯನ್ನು ಬಳಕೆ ಮಾಡುವ ಕುಟುಂಬದ ಕಾರ್ಡು ರದ್ದು.
  6. ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷಕ್ಕಿಂತಲೂ ಹೆಚ್ಚಿದ್ದರೆ ಕಾರ್ಡು ರದ್ದು
Exit mobile version