Site icon Vistara News

CM Siddaramaiah: ಪಿಟಿಐ ನೂತನ ಅಧ್ಯಕ್ಷ ಕೆ.ಎನ್‌. ಶಾಂತಕುಮಾರ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

CM Siddaramaiah and KN Shanth Kumar

ಬೆಂಗಳೂರು: ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ (ಪಿಟಿಐ) ಸುದ್ದಿ ಸಂಸ್ಥೆ ನಿರ್ದೇಶಕರ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ನಿರ್ದೇಶಕ ಕೆ.ಎನ್‌. ಶಾಂತಕುಮಾರ್‌ ಅವರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಅವರು, ಪ್ರಜಾವಾಣಿ ಸಂಸ್ಥೆಯ ನಿರ್ದೇಶಕ ಹಾಗೂ ಸಂಪಾದಕರೂ ಆಗಿರುವ ಅವರು ತಮ್ಮ ಸುದೀರ್ಘ ಅನುಭವ ಮತ್ತು ಕಾರ್ಯದರ್ಕ್ಷತೆಯಿಂದ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

ಒಂದು ವರ್ಷದ ಅವಧಿಗೆ ಆಯ್ಕೆ

ಪಿಟಿಐ ಸುದ್ದಿಸಂಸ್ಥೆಯ ವಾರ್ಷಿಕ ಮಹಾಸಭೆ ನಂತರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳ ಪ್ರಕಾಶನ ಸಂಸ್ಥೆಯಾದ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ನಿರ್ದೇಶಕ ಕೆ.ಎನ್‌. ಶಾಂತಕುಮಾರ್‌ ಅವರನ್ನು ಪಿಟಿಐ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದೆ. ಹಿಂದುಸ್ಥಾನ್‌ ಟೈಮ್ಸ್‌ನ ಸಿಇಒ ಪ್ರವೀಣ್‌ ಸೋಮೇಶ್ವರ್‌ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಅವೀಕ್‌ ಸರ್ಕಾರ್‌ ಅವರು ಸತತ ಎರಡು ಅವಧಿಗೆ ಪಿಟಿಐ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ | Cauvery Water Dispute: ನೀರಾವರಿ ಸಂಬಂಧ ಪರಿಣತರ ಸಲಹಾ ಸಮಿತಿ ರಚಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಕೆ.ಎನ್. ಶಾಂತಕುಮಾರ್‌ ಅವರು ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ 1983ರಿಂದಲೂ ತೊಡಗಿಸಿಕೊಂಡಿದ್ದಾರೆ. ಅವರು ಆಡಿಟ್‌ ಬ್ಯೂರೋ ಆಫ್‌ ಸರ್ಕ್ಯುಲೇಷನ್‌ನ (ಎಬಿಸಿ) ಅಧ್ಯಕ್ಷರಾಗಿ, ಭಾರತೀಯ ವೃತ್ತ ಪತ್ರಿಕಾ ಸಂಘದ (ಐಎನ್‌ಎಸ್‌) ಸಮೂಹದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು 2013ರಿಂದ 2014ರ ಅವಧಿಯಲ್ಲೂ ಪಿಟಿಐ ಅಧ್ಯಕ್ಷರಾಗಿದ್ದರು.

ಪಿಟಿಐ ನಿರ್ದೇಶಕ ಮಂಡಳಿಯ ಇತರ ಸದಸ್ಯರು

ವಿಜಯ್ ಕುಮಾರ್ ಚೋಪ್ರಾ (ಪಂಜಾಬ್ ಕೇಸರಿ), ವಿನೀತ್ ಜೈನ್ (ಟೈಮ್ಸ್ ಆಫ್ ಇಂಡಿಯಾ), ಎನ್. ರವಿ (ದಿ ಹಿಂದೂ), ವಿವೇಕ್ ಗೋಯಂಕಾ (ಎಕ್ಸ್‌ಪ್ರೆಸ್ ಸಮೂಹ), ಮಹೇಂದ್ರ ಮೋಹನ್‌ ಗುಪ್ತ (ದೈನಿಕ್ ಜಾಗರಣ್), ರಿಯಾದ್ ಮ್ಯಾಥ್ಯೂ (ಮಲಯಾಳ ಮನೋರಮ), ಎಂ.ವಿ. ಶ್ರೇಯಾಂಸ್ ಕುಮಾರ್‌ (ಮಾತೃಭೂಮಿ).

ಎಲ್. ಆದಿಮೂಲಂ (ದಿನಮಲಾ‌ರ್), ಹೊರ್ಮುಸ್ಜಿ ಎನ್. ಕಾಮಾ (ಬಾಂಬೆ ಸಮಾಚಾರ್), ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ದೀಪಕ್ ನಯ್ಯರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್, ಹಿರಿಯ ಪತ್ರಕರ್ತ ಟಿ.ಎನ್. ನೈನನ್ ಮತ್ತು ಟಾಟಾ ಸನ್ಸ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಗೋಪಾಲಕೃಷ್ಣನ್.

Exit mobile version