Site icon Vistara News

Cricket Tournament: ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿ ಲಾಂಛನ ಅನಾವರಣ ಮಾಡಿದ ಸಿಎಂ

KUWJ Cricket Tournament logo

ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲ್ಯೂಜೆ ) ಜನವರಿ 5 ರಿಂದ 7ರವರೆಗೆ 3 ದಿನಗಳ ಕಾಲ ಮಂಗಳೂರು ಆಡ್ಯಾರ್ ಸಹ್ಯಾದ್ರಿ ಮೈದಾನದಲ್ಲಿ ಏರ್ಪಡಿಸಿರುವ ಕೆಯುಡಬ್ಲ್ಯೂಜೆ ‘ಬ್ರ್ಯಾಂಡ್ ಮಂಗಳೂರು ರೋಹನ್ ಕಪ್ -2024’ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯ (Cricket Tournament) ಲಾಂಛನವನ್ನು ಸಿಎಂ ಸಿದ್ದರಾಮಯ್ಯ ಅವರು ನಗರದಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಿ.5ರಂದು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಯಿತು. ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ 35ನೇ ರಾಜ್ಯ ಸಮ್ಮೇಳನವನ್ನು ಸಂಘಟಿಸಲಾಗಿದ್ದು, ಈಗ ರಾಜ್ಯ ಮಟ್ಟದ ಕ್ರಿಕೆಟ್ ಕ್ರೀಡಾಕೂಟವನ್ನು ಸಂಘಟಿಸಲಾಗುತ್ತಿದೆ ಎಂಬುವುದನ್ನು ಅವರ ಗಮನಕ್ಕೆ ತರಲಾಯಿತು.

ಇದನ್ನೂ ಓದಿ | Bengaluru Traffic : ಆಂಬ್ಯುಲೆನ್ಸ್‌ಗೆ NO ಟ್ರಾಫಿಕ್‌ ಕಿರಿಕ್‌; ಬರಲಿದೆ ದಾರಿ ತೋರುವ ಆ್ಯಪ್‌!

ಲಾಂಛನ ಅನಾವರಣ ಸಂದರ್ಭದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪಂದ್ಯಾವಳಿಯ ಪ್ರಧಾನ ಸಂಚಾಲಕ ಅನ್ನು ಮಂಗಳೂರು, ಉಪಾಧ್ಯಕ್ಷ ಭಾಸ್ಕರ್ ರೈ. ಕೆ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಪದಾಧಿಕಾರಿಗಳಾದ, ರಾಜೇಶ್ ದಡ್ಡಂಗಡಿ, ರಾಜೇಶ್ ಶೆಟ್ಟಿ, ಸಂದೇಶ ಜಾರ ಉಪಸ್ಥಿತರಿದ್ದರು.

ಡಿ.14ರಿಂದ 17ರವರೆಗೆ ಕರುನಾಡ ಸಂಭ್ರಮ-2023; ರಮೇಶ್ ಅರವಿಂದ್‌ಗೆ ಕನ್ನಡ ಕಲಾಭೂಷಣ ಪ್ರಶಸ್ತಿ

ಬೆಂಗಳೂರು: ಕರುನಾಡ ಸಂಭ್ರಮ-2023ಕ್ಕೆ (Karunada Sambrama) ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 14ರಿಂದ 17ರವರೆಗೆ ನಡೆಯುತ್ತಿರುವ ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಜಿಕೆಜಿಎಸ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರತಿ ವರ್ಷ ನಡೆಯುತ್ತಿರುವ ಈ ಕಾರ್ಯಕ್ರಮ ಈ ಬಾರಿ 12ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾಕಷ್ಟು ವಿಶೇಷತೆ ಹಾಗೂ ಕಲರ್ ಫುಲ್ ಆಗಿ ಕರುನಾಡ ಸಂಭ್ರಮ ಕೂಡಿರಲಿದೆ.

ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನದಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ವರುಣ್ ಸ್ಟುಡಿಯೋಸ್, ರಾಜ್ ಇವೆಂಟ್ಸ್ ಜತೆಗೂಡಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಟ ರಮೇಶ್ ಅರವಿಂದ್ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ | Rishabh Pant: ಕೊನೆಗೂ ಪಂತ್ ಕಮ್​ಬ್ಯಾಕ್​ಗೆ ವೇದಿಕೆ ಸಿದ್ಧ; ನಾಯಕನಾಗಿ ಕಣಕ್ಕೆ

ಕರುನಾಡ ಸಂಭ್ರಮ ಅಂದ್ರೇನೆ ಕಲರ್ ಫುಲ್ ಕಾರ್ಯಕ್ರಮ, ಚಂದನವನದ ತಾರೆಗಳ ಸಮಾಗಮ, ಸ್ಟಾರ್ ಗಾಯಕರ ಹಾಡು, ನಟ, ನಟಿಯರ ಡಾನ್ಸ್. ಈ ಬಾರಿಯೂ ಈ ಸಂಭ್ರಮ ಇನ್ನಷ್ಟು ರಂಗಿನಿಂದ ಕೂಡಿರಲಿದೆ. ಕಾರ್ಯಕ್ರಮದಲ್ಲಿ ಗುರುಕಿರಣ್, ರಾಜೇಶ್ ಕೃಷ್ಣನ್, ನವೀನ್ ಸಜ್ಜು ಅವರ ಗಾಯನ ಕಾರ್ಯಕ್ರಮದ ಮೆರಗು ಹೆಚ್ಚಿಸಲಿದೆ. ರಮೇಶ್ ಅರವಿಂದ್, ನೀನಾಸಂ ಸತೀಶ್, ಅಜಯ್ ರಾವ್, ವಿಜಯ್ ರಾಘವೇಂದ್ರ, ಚಿಕ್ಕಣ್ಣ ಸೇರಿದಂತೆ ಹಲವು ಕನ್ನಡ ತಾರೆಯರು ಕರುನಾಡ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version