Site icon Vistara News

VISTARA TOP 10 NEWS : ಬರದ ನಡುವೆ ಸಿಎಂ ಮನೆ ನವೀಕರಣ, ಪ್ರತಿಮಾ ಕೊಲೆಗಾರ ಅರೆಸ್ಟ್​ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news

1. ಬರ ಸಂಕಷ್ಟದ ನಡುವೆ ಸಿಎಂ ನಿವಾಸದ ನವೀಕರಣಕ್ಕೆ ಕೋಟಿ ಕೋಟಿ ಖರ್ಚು! ಬೇಕಿತ್ತಾ ದುಂದು ವೆಚ್ಚ?
ಬೆಂಗಳೂರು: ರಾಜ್ಯದಲ್ಲಿ ಬರಗಾಲ (Drought in Karnataka) ತಾಂಡವವಾಡುತ್ತಿದೆ. ಮಳೆ ಇಲ್ಲದೆ ಜನರು ಕಂಗಾಲಾಗಿದ್ದಾರೆ. ರೈತರಿಗೆ ದಿಕ್ಕು ತೋಚದಂತೆ ಆಗಿದೆ. ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಎಲ್ಲ ಬೆಳವಣಿಗೆ ನಡುವೆ ರಾಜ್ಯ ಸರ್ಕಾರ ದುಂದು ವೆಚ್ಚವನ್ನು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬರಗಾಲದ ಈ ಸಂಕಷ್ಟದ ಸಮಯದಲ್ಲಿ ಸಿಎಂ ನಿವಾಸದ ವೈಭವಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಅವಶ್ಯಕತೆ ಇತ್ತೇ ಎಂದು ಜನ ಪ್ರಶ್ನೆ ಮಾಡುವಂತಾಗಿದೆ. ಅಲ್ಲದೆ, ತುರ್ತು ಬರ, ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಅನುದಾನಗಳ ಬಳಕೆಗೆ ನೀಡಲಾಗುವ 4G ವಿನಾಯಿತಿಯನ್ನು ಸಹ ಇದಕ್ಕೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಇದಕ್ಕೆಲ್ಲ ಕಡಿವಾಣ ಹಾಕಬಹುದಿತ್ತು ಎಂಬ ಮಾತುಗಳು ಕೇಳಿಬಂದಿವೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

2. ರೈತರ ಪಂಪ್‌ಸೆಟ್‌ಗೆ ವಿದ್ಯುತ್‌ ಬೇಕಾದರೆ ಇನ್ನು 2 ಲಕ್ಷ ರೂ. ಖರ್ಚು!
ಬೆಂಗಳೂರು: ಇನ್ನು ಮುಂದೆ ರೈತರ ಪಂಪ್ ಸೆಟ್‍ಗಳಿಗೆ (Farmers pumpset) ವಿದ್ಯುತ್ ಪಡೆಯಬೇಕಾದರೆ (Power Connection) ಸ್ವಂತ ಖರ್ಚಿನಲ್ಲಿ ಟ್ರಾನ್ಸ್‌ಫಾರ್ಮರ್‌, ಕಂಬ ಮತ್ತು ತಂತಿ ಸೇರಿದಂತೆ ವಿದ್ಯುತ್ ಗೆ ಸಂಬಂಧಪಟ್ಟ ವಸ್ತುಗಳನ್ನು ರೈತರೇ ಖರೀದಿಸಬೇಕೆಂದು ಸರ್ಕಾರ ಆದೇಶ ಮಾಡಿದೆ. ಇದೊಂದು ರೈತ ವಿರೋಧಿ (Anti farmer rules) ನಿಲುವಾಗಿದ್ದು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಹಿಂದೆ ಒಂದು ಪಂಪ್‌ಸೆಟ್‌ಗೆ ವಿದ್ಯುತ್‌ ಪಡೆಯಬೇಕಾದರೆ ರೈತರಿಗೆ 24 ಸಾವಿರ ರೂ. ಖರ್ಚಾಗುತ್ತಿದ್ದರೆ ಈಗ ಅದು 2 ಲಕ್ಷ ರೂ.ಗಳಿಗೆ ಏರಲಿದೆ ಎಂದು ಅದು ಹೇಳಿದೆ ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Three phase power : ರೈತರಿಗೆ ಗುಡ್‌ ನ್ಯೂಸ್‌; ಇನ್ನು ಪ್ರತಿ ದಿನ ಏಳು ತಾಸು ವಿದ್ಯುತ್‌ ಪೂರೈಕೆ

3. ಇವನೇ ನೋಡಿ ಭೂವಿಜ್ಞಾನಿ ಪ್ರತಿಮಾ ಕೊಲೆಗಾರ, ಯಾರನ್ನು ನಂಬುವುದು ಹೇಳಿ?
ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ (Mines and Geology) ಇಲಾಖೆಯ ಹಿರಿಯ ಭೂವಿಜ್ಞಾನಿ (Senior Scientist) ಪ್ರತಿಮಾ (45) ಅವರನ್ನು ಕುತ್ತಿಗೆಗೆ ಹಗ್ಗಬಿಗಿದು ಕತ್ತು ಕೊಯ್ದು ಕೊಲೆ (Murder Case) ಮಾಡಿದವನು ಅವರದೇ ಕಾರಿನ ಚಾಲಕ ಕಿರಣ್‌ (30) ಎನ್ನುವುದು ಸ್ಪಷ್ಟವಾಗಿದೆ. ಕೊಲೆಯಾದ ನವೆಂಬರ್‌ ನಾಲ್ಕರಿಂದಲೇ ತಲೆಮರೆಸಿಕೊಂಡಿದ್ದ ಆತನನ್ನು ಮಲೆ ಮಹದೇಶ್ವರ ಬೆಟ್ಟದ ಸಮೀಪ (Driver Kiran Arrested) ಬಂಧಿಸಲಾಗಿದೆ. ಪ್ರತಿಮಾ ಕೊಲೆ ಬಳಿಕ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಮೂಲಕ ತಮಿಳುನಾಡಿನ ಕಡೆಗೆ ಹೊರಟಿದ್ದಾನೆ ಎನ್ನುವ ಮಾಹಿತಿಯನ್ನು ಪಡೆದ ಪೊಲೀಸರು ಎಲ್ಲೆಡೆ ಅಲರ್ಟ್‌ ಮಾಡಿದ್ದರು. ಇದೀಗ ಆತನನ್ನು ಬಂಧಿಸಿ ತಲ್ಲಘಟ್ಟಪುರ ಪೊಲೀಸ್ ಠಾಣೆಗೆ ತರಲಾಗಿದೆ. ಕೊಲೆಯ ಸಂಪೂರ್ಣ ವಿವರವನ್ನು ಪಡೆದ ಬಳಿಕ ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Murder Case : ಸರ್ಕಾರಿ ಕೆಲಸ ಇಲ್ಲವೇ ಪ್ರತಿಮಾಳ ಕೊಲೆ; ನಿರ್ಧರಿಸಿಯೇ ಬಂದಿದ್ದ ಹಂತಕ ಕಿರಣ್‌

4. ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಟರ್‌ ‘ಟೈಮ್ಡ್‌ ಔಟ್‌’; ಏನಿದು ನಿಯಮ?
ನವದೆಹಲಿ: ಬಾಂಗ್ಲಾದೇಶ ವಿರುದ್ಧ ಸಾಗುತ್ತಿರುವ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ಏಂಜೆಲೊ ಮ್ಯಾಥ್ಯೂಸ್‌(Angelo Mathews) ಅವರು ಬ್ಯಾಟಿಂಗ್​ ನಡೆಸದೆಯೇ ಔಟ್​ ಆಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಬ್ಯಾಟಿಂಗ್​ ನಡೆಸಲು ತಡ ಮಾಡಿದ ಕಾರಣದಿಂದ ಅವರು ಟೈಮ್ಡ್‌ ಔಟ್‌(timed out) ಆಗಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿ ಔಟಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: ICC World Cup 2023 : ಭಾರತದ್ದು ಮೋಸದ ಕ್ರಿಕೆಟ್ ಎಂದ ಪಾಕ್​ನ ಮಾಜಿ ಕ್ರಿಕೆಟಿಗ; ಬೆಂಡೆತ್ತಿದ ನೆಟ್ಟಿಗರು
ಈ ಸುದ್ದಿಯನ್ನೂ ಓದಿ: Virat Kohli : ಐಷಾರಾಮಿ ಅವಕಾಶ ತ್ಯಜಿಸಿ ಎಕಾನಮಿ ಕ್ಲಾಸ್​​ನಲ್ಲಿ ಪ್ರಯಾಣಿಸಿದ ಕಿಂಗ್ ಕೊಹ್ಲಿ

5. ರಶ್ಮಿಕಾ ಮಂದಣ್ಣ ವಿಡಿಯೊ ವೈರಲ್‌; ಕಾನೂನು ಕ್ರಮ ಕೈಗೊಳ್ಳಿ ಎಂದ ಅಮಿತಾಭ್‌!
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಹೆಸರಿನಲ್ಲಿ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಬೇರೆ ಯುವತಿಯ ವಿಡಿಯೊದೊಂದಿಗೆ ರಶ್ಮಿಕಾ ಮುಖ ಮಾರ್ಫ್‌ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಮಾಡಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಅನೇಕರು ಇದು ಫೇಕ್‌ ಎಂದು ಕರೆಯಲು ಶುರು ಮಾಡಿದರು. ಅಸಲಿಯಾಗಿ ಆ ವಿಡಿಯೊದಲ್ಲಿ ಇರುವುದು ಜಾರಾ ಪಟೇಲ್. ಆದರೆ ಇದರಲ್ಲಿ ಆ ಹುಡುಗಿ ಬಹಳ ಹಾಟ್‌ ಆಗಿ ಕಾಣಿಸಿಕೊಂಡಿದ್ದು, ರಶ್ಮಿಕಾಗೆ ಕಳಂಕ ತರಲು ಈ ರೀತಿ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಬಾಲಿವುಡ್‌ ನಟ ಅಮಿತಾಭ್‌ ಕೂಡ ಸಾಥ್‌ ಕೊಟ್ಟಿದ್ದು, ʻಕಾನೂನಾತ್ಮಕವಾಗಿ ಬಲವಾದ ಪ್ರಕರಣವಾಗಿದೆʼ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ವೈರಲ್‌ ಡೀಪ್‌ಫೇಕ್‌ ವಿಡಿಯೋ ಅಪಾಯಕಾರಿ ಎಂದ ಕೇಂದ್ರ ಸಚಿವ; ಮೂಲ ವಿಡಿಯೋ ಇಲ್ಲಿದೆ

6. ಬೆಂಗಳೂರಲ್ಲಿ ಭರ್ಜರಿ ವರ್ಷಧಾರೆ; ನಾಳೆಯೂ ಇದೆ ಮಳೆರಾಯನ ಗುಡುಗು
ಬೆಂಗಳೂರು: ನ.6ರಂದು ಬೆಂಗಳೂರು, ದಾವಣಗೆರೆ, ಗದಗ ಸೇರಿದಂತೆ ವಿಜಯಪುರದಲ್ಲಿ ಗುಡುಗು, ಮಿಂಚು ಸಹಿತ ಭಾರಿ (Karnataka Weather Forecast) ಮಳೆಯಾಗಿದೆ. ಬೆಂಗಳೂರಿನ ಮೆಜಸ್ಟಿಕ್‌, ಶಿವಾಜಿನಗರ, ವಿಧಾನಸೌಧ, ಕಾರ್ಪೋರೇಷನ್‌ ಸೇರಿದಂತೆ ಹಲವೆಡೆ ಸಂಜೆ ವೇಳೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ (Rain News) ಸುರಿದಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

7. ಹಾಸನಾಂಬೆ ‌ದರ್ಶನ ಪಡೆದ ಮುಸ್ಲಿಂ ಕುಟುಂಬ; 4ನೇ ದಿನ ಹೇಗಿತ್ತು ಭಕ್ತರ ದಂಡು?
ಹಾಸನ: ವರ್ಷಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಅಧಿದೇವತೆ ಹಾಸನಾಂಬೆಯ (Hasanamba Temple) ಗರ್ಭಗುಡಿ ಬಾಗಿಲನ್ನು ನ.2ರಂದು ತೆರೆಯಲಾಗಿದ್ದು, 4ನೇ ದಿನವೂ ಭಕ್ತ ಸಾಗರವೇ ಆಗಮಿಸಿತ್ತು. ಮುಸ್ಲಿಂ ಕುಟುಂಬವೊಂದು ಹಾಸನಾಂಬೆಯ ದರ್ಶನ ಪಡೆದು ದೇವನೊಬ್ಬ ನಾಮ ಹಲವು ಎಂಬ ಸಂದೇಶ ಸಾರಿದರು. ಹಜೀರ ಎಂಬುವವರು ಕುಟಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿದರು. ಹಾಸನಾಂಬೆ ಮೇಲೆ ನಮಗೆ ನಂಬಿಕೆ ಇದೆ. ಹಲವು ವರ್ಷಗಳಿಂದ ದೇವರ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದೇವು. ಈ ಬಾರಿ ದರ್ಶನಕ್ಕೆ ಬರುವ ಅವಕಾಶ ಸಿಕ್ಕಿದೆ ಎಂದು ಹಜೀರ ಹರ್ಷ ವ್ಯಕ್ತಪಡಿಸಿದರು. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

8. ಬೆಂಗಳೂರಿನಲ್ಲಿ ಈ ವರ್ಷದ ಅಂತ್ಯದಲ್ಲಿ ಓಡಾಡಲಿವೆ ಡಬಲ್‌ ಡೆಕ್ಕರ್‌ ಬಸ್ಸುಗಳು!
ಬೆಂಗಳೂರು: ಒಂದು ಕಾಲದಲ್ಲಿ, ಭಾರತದ ಮಹಾನಗರಗಳಲ್ಲಿ ಭವ್ಯವಾಗಿ ಓಡಾಡುತ್ತಿದ್ದ ಡಬಲ್ ಡೆಕ್ಕರ್‌ ಬಸ್ಸುಗಳು (Double- Decker Bus) ಮರಳಿ ತಮ್ಮ ವೈಭವ ಕಂಡುಕೊಳ್ಳಲಿವೆ ಎಂಬ ನಿರೀಕ್ಷೆ ಮೂಡಿದೆ. ಈ ವರ್ಷದ ಅಂತ್ಯದಲ್ಲಿ ಬೆಂಗಳೂರಿನ ಕೆಲವು ಮಾರ್ಗಗಳಲ್ಲಿ ಡಬಲ್‌ ಡೆಕ್ಕರ್‌ ಓಡಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

9. ದೆಹಲಿಯಲ್ಲಿ ಉಸಿರಾಡಲೂ ಕಷ್ಟ; ಸಮ-ಬೆಸ ನಿಯಮ ಮತ್ತೆ ಜಾರಿ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣವು (Delhi Air Pollution) ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ, ಮಕ್ಕಳು, ಹಿರಿಯರು ಉಸಿರಾಡಲು ಕೂಡ ಪರದಾಡುವಂತಾಗಿದೆ. ಹಾಗಾಗಿ, ದೆಹಲಿ ಸರ್ಕಾರವು (Delhi Government) ನವೆಂಬರ್‌ 13ರಿಂದ 20ರವರೆಗೆ ಸಮ-ಬೆಸ ಸಂಖ್ಯೆಯ ವಾಹನಗಳ ಸಂಚಾರ ನಿಯಮ ಜಾರಿಗೆ ತರಲು ನಿರ್ಧರಿಸಿದೆ. ವಾಹನಗಳ ಓಡಾಟ ನಿಯಂತ್ರಣದ ಮೂಲಕ ವಾಯುಮಾಲಿನ್ಯ ತಗ್ಗಿಸುವುದು ಸರ್ಕಾರದ ಗುರಿಯಾಗಿದೆ ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

10. Snake world : ನಾಗರಹಾವನು ನಾಗರ ಹಾವೇ ನುಂಗಿತ್ತಾ.. ನೋಡವ್ವಾ ತಂಗಿ!
ಗದಗ: ಹೆಬ್ಬಾವು ಮನುಷ್ಯರನ್ನು, ಪ್ರಾಣಿಗಳನ್ನು ನುಂಗುವುದನ್ನು ಕೇಳಿದ್ದೇವೆ. ಬೇರೆ ಹಾವುಗಳು ಕೂಡಾ ಇತರ ಪ್ರಾಣಿಗಳನ್ನು ತಿನ್ನುವುದನ್ನು ಗಮನಿಸಿದ್ದೇವೆ. ಆದರೆ, ಹಾವೊಂದು ತನ್ನದೇ ಜಾತಿಯ ಹಾವನ್ನು (Snake world) ನುಂಗುವುದನ್ನು ಹೆಚ್ಚಿನವರು ಗಮನಿಸಿರಲಿಕ್ಕಿಲ್ಲ (Snake eating Snake itself). ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version