Site icon Vistara News

CN Ashwathanarayana | ಬೆಂಗಳೂರಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಸಿಸಿಟಿವಿ ಸಂಖ್ಯೆ ಹೆಚ್ಚಿಸಲು ಕ್ರಮ ಎಂದ ಸಚಿವರು

CC Tv camera

ಬೆಂಗಳೂರು: ರಾಜಧಾನಿಯಲ್ಲಿ ಅತ್ಯಾಚಾರ ಪ್ರಕರಣಗಳು ಏಕಾಏಕಿಯಾಗಿ ಹೆಚ್ಚುತ್ತಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಎರಡು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚು ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥ ನಾರಾಯಣ (CN Ashwathanarayana) ಹೇಳಿದ್ದಾರೆ. ಅದೇ ಹೊತ್ತಿಗೆ ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ದೇಶದಲ್ಲೇ ಅತ್ಯಂತ ಸುರಕ್ಷಿತ ನಗರವೆಂದು ಗುರುತಿಸಲ್ಪಟ್ಟಿರುವ ಬೆಂಗಳೂರಿನಲ್ಲಿ ಇಂಥ ಘಟನೆಗಳು ನಡೆಯುತ್ತಿರುವುದು ಅತ್ಯಂತ ವಿಷಾದನೀಯ. ನಾನು ಈ ಘಟನೆಗಳನ್ನು ಖಂಡಿಸುತ್ತೇನೆ. ಇದನ್ನು ತಡೆಯಲು ನಮ್ಮ ಸರಕಾರ ಹೆಚ್ಚು ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗುವುದು. ಯಾವ ನಾಗರಿಕರಿಗೂ ಸುರಕ್ಷತೆಯಿಲ್ಲದೆ ಸಂಕಷ್ಟಕ್ಕೆ ಗುರಿಯಾಗಬಾರದು, ನರಳಬಾರದು ಎನ್ನುವ ಉದ್ದೇಶದೊಂದಿಗೆ ಕೆಲಸ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

ನವೆಂಬರ್‌ ೨೫ರಂದು ಕೇರಳ ಮೂಲದ ೨೩ ವರ್ಷದ ಯುವತಿಯೊಬ್ಬಳನ್ನು ರ‍್ಯಾಪಿಡೊ ಚಾಲಕ ಸೇರಿದಂತೆ ಇಬ್ಬರು ಅತ್ಯಾಚಾರ ಮಾಡಿದ್ದರು. ಇನ್ನೊಂದು ಘಟನೆ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ನಡೆದಿತ್ತು. ಖಾಸಗಿ ಶಾಲಾ ಬಸ್‌ ಚಾಲಕನೊಬ್ಬ ಮಕ್ಕಳನ್ನು ಮನೆಗೆ ಬಿಟ್ಟು ಬರುವ ದಾರಿಯಲ್ಲಿ ಕಂಡ ಮಹಿಳೆಯನ್ನು ಡ್ರಾಪ್‌ ಕೊಡುವ ಭರವಸೆ ನೀಡಿ ಬಸ್ಸಿಗೆ ಏರಿಸಿಕೊಂಡು ಬಳಿಕ ಅತ್ಯಾಚಾರ ಮಾಡಿದ್ದ. ಶಿವಕುಮಾರ್‌ ಎಂಬ ಈ ದುಷ್ಟ ಚಾಲಕ ಮಹಿಳೆಯ ಮೇಲೆ ತೀವ್ರ ಹಲ್ಲೆಯನ್ನೂ ನಡೆಸಿದ್ದ.

ಇದನ್ನೂ ಓದಿ | Sexual assault | ಶಾಲಾ ಬಸ್‌ನಲ್ಲೇ ಮಹಿಳೆಯ ಅತ್ಯಾಚಾರ: ಡ್ರಾಪ್‌ ಕೊಡುವ ನೆಪದಲ್ಲಿ ಕರೆದೊಯ್ದು ಕಿರಾತಕ ಕೃತ್ಯ

Exit mobile version