Site icon Vistara News

Communal harmony : ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು, ಅನಾಥೆಗೆ ಗೌರವದ ಅಂತ್ಯ ಸಂಸ್ಕಾರ

Hindu muslim harmony

#image_title

ಚಾಮರಾಜನಗರ: ಎಲ್ಲೆಡೆ ಹಿಂದು-ಮುಸ್ಲಿಂ ದ್ವೇಷ, ಅಸಹಿಷ್ಣುತೆಯ ಕಥೆಗಳೇ ಹೆಚ್ಚುತ್ತಿರುವ ಕಾಲದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಯ ಮಾನವೀಯ ಕಥೆಯೊಂದಕ್ಕೆ (Communal harmony) ಚಾಮರಾಜ ನಗರ ಜಿಲ್ಲೆಯ ಪುಟ್ಟ ಊರು ಸಾಕ್ಷಿಯಾಗಿದೆ.

ಚಾಮರಾಜ ನಗರದ ಅಹಮದ್‌ ನಗರದಲ್ಲಿ ವಾಸವಾಗಿದ್ದು ಮಂಜಮ್ಮ ಎಂಬ ಹಿಂದು ಮಹಿಳೆ ಸೋಮವಾರ ಮೃತಪಟ್ಟಿದ್ದರು. ಯಾರೂ ಇಲ್ಲದೆ ಒಂಟಿಯಾಗಿದ್ದ ಆಕೆಯ ಅಂತ್ಯ ಸಂಸ್ಕಾರಕ್ಕೆ ಆ ಭಾಗದ ಹಿಂದುಗಳು ಯಾರೂ ಮುಂದೆ ಬಾರದೆ ಇದ್ದಾಗ ಅಲ್ಲಿನ ಮುಸ್ಲಿಂ ಯುವಕರೇ ನೆರವಿಗೆ ನಿಂತರು.

ಮುಸ್ಲಿಂ ಹುಡುಗರಿಗೆ ಹಿಂದುಗಳ ಅಂತ್ಯ ಸಂಸ್ಕಾರ ಹೇಗೆ ನಡೆಯುತ್ತದೆ, ವಿಧಿ ವಿಧಾನಗಳೇನು ಎನ್ನುವುದು ಅರಿವಿಲ್ಲದಿದ್ದರೂ ಗೊತ್ತಿದ್ದದವರಿಂದ ತಿಳಿದು ದಫನ ಮಾಡುವ ಮೂಲಕ ಮಾನವೀಯತೆ ಮೆರೆದರು

ಯಾರೂ ಇಲ್ಲದ ಮಂಜಮ್ಮ ಅವರ ಶವ ಸಂಸ್ಕಾರಕ್ಕೆ ಯಾರೂ ಮುಂದಾಗದ ಹಿನ್ನೆಲೆಯಲ್ಲಿ ಕೊನೆಗೆ ನಂಜಮ್ಮನ ಶವಯಾತ್ರೆಗೆ ಮುಸ್ಲಿಂ ಯುವಕರು ಹೆಗಲು ಕೊಟ್ಟರು. ಹಿಂದೂ ಸಂಪ್ರದಾಯದಂತೆ ಬೇಕಾದ ಅಳತೆಯಲ್ಲಿ ಗುಂಡಿ ತೆಗೆದು ಮಣ್ಣು ಮಾಡಿದರು. ದೀಪ ಧೂಪ ಹಚ್ಚಿ, ಹೂವು ಹಾಕಿ ಅಂತ್ಯ ಸಂಸ್ಕಾರ ಮಾಡಿ ಧನ್ಯತೆಯನ್ನು ಅನುಭವಿಸಿದರು.

ಅಂತ್ಯ ಸಂಸ್ಕಾರ ನಡೆಸುತ್ತಿರುವ ಮುಸ್ಲಿಂ ಯುವಕರು

ಸಾಮರಸ್ಯ ಮೆರೆದ ಮುಸ್ಲಿಂ ಯುವಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ನಾವೆಲ್ಲ ಒಂದೇ, ಹಿಂದು- ಮುಸ್ಲಿಂ ಇಬ್ಬರಲ್ಲೂ ಹರಿಯುತ್ತಿರುವುದು ಒಂದೇ ರಕ್ತ ಎನ್ನುತ್ತಿರುವ ಮುಸ್ಲಿಂ ಯುವಕರ ಕಾರ್ಯ ಊರಿನಲ್ಲಿ ಆಶಾಭಾವವನ್ನು ಮೂಡಿಸಿದೆ.

ಇದನ್ನೂ ಓದಿ : Communal harmony | ಭಾವೈಕ್ಯದ ಸಾಕ್ಷಿಯಾದ ಗಂಗಾವತಿ ಜಾತ್ರೆ, ಮುಸ್ಲಿಮರಿಂದ ಬೃಹತ್‌ ಹಾರಾರ್ಪಣೆ

Exit mobile version