ಕೊಡಗು: ಸಾಮಾಜಿಕ ಜಾಲತಾಣದಲ್ಲಿ ಮಾತೆ ಕಾವೇರಿ, ಕೊಡವ ಜನಾಂಗ, ಕೊಡವ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮೊಹಮದ್ ಅಸ್ಫಕ್ ಎಂಬ ಅಪರಿಚಿತ ವ್ಯಕ್ತಿಯ ಮೇಲೆ ಮಡಿಕೇರಿ, ವೀರಾಜಪೇಟೆ ಠಾಣೆಯಲ್ಲಿ ದೂರು ನೀಡಲಾಗಿದೆ.
Ijvbkoggklvy ಎಂಬ ಇನ್ಸ್ಟಾಗ್ರಾಂ ಖಾತೆ ಮೂಲಕ ಕೊಡವ ಜನಾಂಗಕ್ಕೆ ಅವಮಾನ ಮಾಡಲಾಗಿದೆ. ಈಗಾಗಲೇ ಮಡಿಕೇರಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇದೇ ವಿಚಾರವಾಗಿ ಬೆಂಗಳೂರು ಕೊಡವ ಸಮಾಜದಿಂದಲೂ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದಿಷ್ಟೇ ಅಲ್ಲದೆ ಅಖಿಲ ಕೊಡವ ಸಮಾಜದಿಂದ ಕ್ರೈಂ ಬ್ರಾಂಚ್ನಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಪೋಸ್ಟ್ ಹಾಕಿದ್ದು, ಕೊಡವ ಯುವತಿಯರ ಬಗ್ಗೆಯೂ ಕೀಳಾಗೆ ಮಾತನಾಡಲಾಗಿದೆ. ಇದಕ್ಕೆ ವಿವಿಧ ಸಂಘಟನೆ ಹಾಗೂ ಬಿಜೆಪಿಯಿಂದಲೂ ತೀವ್ರ ಖಂಡನೆ ವ್ಯಕ್ತವಾಗಿದ್ದು, ಕೂಡಲೇ ಆರೋಪಿಯನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ.
ಇದನ್ನು ಓದಿ| Rain News | ಕೊಡಗಿನಲ್ಲಿ ಮಳೆ ಅವಾಂತರ: ಮನೆಯ ಗೋಡೆ ಬಿದ್ದು ವೃದ್ಧೆಗೆ ಗಂಭೀರ ಗಾಯ