Site icon Vistara News

Drug Supply | ಚಿಕನ್‌ ಪೀಸ್‌ನೊಳಗೆ ಗಾಂಜಾ, ಜೈಲಿಗೆ ಸಾಗಿಸಲು ಖದೀಮರ ಹೊಸ ತಂತ್ರ!

ವಿಜಯಪುರ: ಜೈಲಿನಲ್ಲಿರುವ ಕೈದಿಗಳಿಗೆ ಸಂಬಂಧಿಕರು, ಆಪ್ತರಿಗೆ ಊಟ, ಅವರಿಗೆ ಬೇಕಾಗುವ ನಿತ್ಯೋಪಯೋಗಿ ವಸ್ತುಗಳನ್ನು ತೆಗೆದುಕೊಂಡು ಹೋಗಿ ಕೊಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ವಿಜಯಪುರ ನಗರದ ದರ್ಗಾ ಜೈಲಿನಲ್ಲಿ ಕೈದಿಯೊಬ್ಬರಿಗೆ ಚಿಕನ್‌ ಪೀಸ್‌ನೊಳಗೆ ಗಾಂಜಾ ಇಟ್ಟು ಅಕ್ರಮವಾಗಿ ಸಾಗಣೆ (Drug Supply) ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಶಾರುಕ್‌ಬಾನ್‌ ತೆಗರತಿಪ್ಪಿ ಕೈದಿಗೆ ಪ್ರಜ್ವಲ್‌ ಲಕ್ಷ್ಮಣ ಮಾಬರುಖಾನೆ ಎಂಬುವವರು ಗಾಂಜಾ ಪೂರೈಸಲು ಮುಂದಾಗಿದ್ದರು. ದೊಡ್ಡ ದೊಡ್ಡ ಚಿಕನ್‌ ಪೀಸ್‌ನ ಮಧ್ಯದಲ್ಲಿ ತಲಾ ಎರಡು ಗ್ರಾಂ ಗಾಂಜಾ ಪ್ಯಾಕೆಟ್ ಇಟ್ಟು ಹೊಲಿದಿದ್ದರು. ದೊಡ್ಡ ಬಾಕ್ಸ್‌ನಲ್ಲಿ ಚಿಕನ್‌ ಪೀಸ್‌ಗಳನ್ನು ಇಟ್ಟುಕೊಂಡು, ಕೈದಿಗೆ ಸರಬರಾಜು ಮಾಡಲು ಯತ್ನಿಸಿದಾಗ ಪ್ರಜ್ವಲ್‌ ಲಕ್ಷ್ಮಣ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಲಾ ಎರಡು ಗ್ರಾಂ ಗಾಂಜಾ ಇರುವ ಒಟ್ಟು ೧೮ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದೊಂದೇ ಚಿಕನ್‌ ಪೀಸ್‌ ಅನ್ನು ಬಿಡಿಸಿ ನೋಡಿದಾಗ ಒಳಗೆ ಗಾಂಜಾ ಇರುವುದು ಗೊತ್ತಾಗಿದೆ. ಗಾಂಜಾ ಸಾಗಿಸಲು ಮುಂದಾಗಿದ್ದ ಪ್ರಜ್ವಲ್‌ ಲಕ್ಷ್ಮಣ ಮಾಬರುಖಾನೆ ವಿರುದ್ಧ ಆದರ್ಶ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ 12 ವಿದ್ಯಾರ್ಥಿಗಳ ಸೆರೆ

Exit mobile version