ಯಾದಗಿರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಸೋಮವಾರ ರೋಡ್ ಶೋ ನಡೆಸಿ, ಮತಯಾಚನೆ ನಡೆಸಿದರು.
ಕ್ಷೇತ್ರದ ಮೈಲಾಪುರ ಅಗಸಿಯಿಂದ ಗಾಂಧಿ ವೃತ್ತದವರಗೆ ಬೃಹತ್ ತೆರೆದ ವಾಹನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು ರೋಡ್ ಶೋ ನಡೆಸಿ, ಚುನಾವಣಾ ಪ್ರಚಾರ ನಡೆಸಿದರು.
ಇದನ್ನೂ ಓದಿ: IPL 2023: ತವರಿಗೆ ಮರಳಿದ ಮಾರ್ಕ್ ವುಡ್; ಲಕ್ನೋ ತಂಡಕ್ಕೆ ಹಿನ್ನಡೆ
ಭರ್ಜರಿ ಪ್ರಚಾರ
ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಕ್ಷೇತ್ರದಲ್ಲಿ ಅಪಾರ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು. ಮತದಾರರ ಬಳಿ ತೆರಳಿ ಕ್ಷೇತ್ರದ ಅಭಿವೃದ್ಧಿಗಾಗಿ ಮತ ಹಾಕುವಂತೆ ಮನವಿ ಮಾಡಿದರು.
ಮಾದರಿ ಕ್ಷೇತ್ರ ಮಾಡಲು ಆಶೀರ್ವದಿಸಿ
ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು, ಯಾದಗಿರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಕನಸನ್ನು ಕಟ್ಟಿಕೊಂಡಿದ್ದು, ಮಾದರಿ ಕ್ಷೇತ್ರ ಮಾಡಲು ಜನರು ಆಶೀರ್ವಾದ ಮಾಡಬೇಕು. ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: SSLC Result 2023 : ಎಸ್‌ಎಸ್‌ಎಲ್‌ಸಿ ನಂತರ ಏನು ಓದುವಿರಿ; ಇಲ್ಲಿದೆ ಪಠ್ಯ ಸಂಯೋಜನೆಯ ವಿಷಯಗಳ ಮಾಹಿತಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದ ಅವರು, ಈ ಚುನಾವಣೆಯಲ್ಲಿ 35 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಪಾಲ್ಗೊಂಡಿದ್ದರು.