ಗಂಗಾವತಿ: ಕಾಂಗ್ರೆಸ್ ಪಕ್ಷದಲ್ಲಿ ವರ್ಚಸ್ಸಿನ ನಾಯಕರ ಮುಖಗಳಿಲ್ಲ. ಹೀಗಾಗಿ ಯಾವ ಮುಖ ಇರಿಸಿಕೊಂಡು ಜನರ ಬಳಿಗೆ ಚುನಾವಣೆಗೆ (Karnataka election 2023) ಹೋಗಬೇಕು ಎಂದು ದಿಕ್ಕು ತೋಚದೆ ಹತಾಶವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ಸಿಗರು ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಶಾಸಕರು ತಾವು ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಲಾಗದೆ ಮೋದಿ ಅವರ ಮುಖವಿಟ್ಟುಕೊಂಡು ಹೋಗುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಮಾಡಿದ್ದ ಆರೋಪಕ್ಕೆ ಶಾಸಕ ಪರಣ್ಣ ಪ್ರತಿಕ್ರಿಯೆ ನೀಡಿ, “ಕಾಂಗ್ರೆಸ್ ಪಕ್ಷದಲ್ಲಿ ಹೇಳಿಕೊಳ್ಳುವಂತಹ ವರ್ಚಸ್ಸಿನ ಒಂದೇ ಒಂದು ನಾಯಕರ ಮುಖಗಳಿಲ್ಲ. ಹೀಗಾಗಿ ಚುನಾವಣೆಯಲ್ಲಿ ಸೋಲುವ ಹತಾಶ ಭಾವದಿಂದ ಕಾಂಗ್ರೆಸ್ಸಿಗರಿಗೆ ದಿಕ್ಕು ತೋಚದಂತಾಗಿದೆ. ಹೀಗಾಗಿ ಮೋದಿಯನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಾರೆ” ಎಂದರು.
ಇದನ್ನೂ ಓದಿ: Karnataka Election 2023: ಕನ್ನಡಿಗರು ತಮಿಳಿಗರಿಂದ ರಾಜಕೀಯ ಕಲಿಯಬೇಕು ಎಂದ ಮಾಜಿ ಪ್ರಧಾನಿ ದೇವೇಗೌಡ
ಮೋದಿ ಇಡೀ ವಿಶ್ವ ಮೆಚ್ಚಿದ ನಾಯಕ
ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ವಿಶ್ವ ಮೆಚ್ಚಿದ ನಾಯಕ. ನಮ್ಮ ಪಕ್ಷದ ನಾಯಕರಾಗಿರುವ ಮೋದಿ ಅವರನ್ನು ನಾವು ಸಹಜವಾಗಿ ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ. ನಮ್ಮ ಪಕ್ಷದ ನಾಯಕನಲ್ಲದೆ ಬೇರೆ ನಾಯಕರನ್ನು ಮುಂದಿಟ್ಟುಕೊಂಡು ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮೋದಿ ಮಾತ್ರವಲ್ಲ, ನಮ್ಮ ಪಕ್ಷದ ನಾಯಕರಾದ ಅಮಿತ್ ಶಾ, ಜೆ.ಪಿ. ನಡ್ಡಾ ಅವರಂತ ಮಹಾನ್ ನಾಯಕರಿದ್ದಾರೆ. ಅವರು ನಮ್ಮ ನಾಯಕರು. ಅವರನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋದರೆ ನಿಮಗೇಕೆ ಸಮಸ್ಯೆ ಎಂದು ಕಾಂಗ್ರೆಸ್ಸಿಗರಿಗೆ ಪರಣ್ಣ ಮುನವಳ್ಳಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: IPL 2023 : ವರುಣನ ಅವಕೃಪೆ; ಚೆನ್ನೈ, ಲಕ್ನೊ ಪಂದ್ಯ ರದ್ದು
ನಮ್ಮ ನಾಯಕರ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ
ನಿಮ್ಮಲ್ಲಿ ನಾಯಕರೇ ಇಲ್ಲ. ಹೀಗಾಗಿ ಯಾವ ಮುಖ ಇರಿಸಿಕೊಂಡು ಜನರ ಬಳಿಗೆ ಎಂಬ ಸಂದಿಗ್ಧತೆಯಲ್ಲಿ ಸಿಲುಕಿರುವ ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದೀರಿ. ನಮ್ಮ ನಾಯಕರ ಬಗ್ಗೆ ನಮಗೆ ಹೆಮ್ಮೆ, ಅಭಿಮಾನವಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಇದೇ ಸಂದರ್ಭದಲ್ಲಿ ಹೇಳಿದರು.