Site icon Vistara News

KM Shivalinge Gowda: ಮೂಲ ಕಾಂಗ್ರೆಸ್‌ ಕಾರ್ಯಕರ್ತರ ಕಡೆಗಣನೆ; ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ

Arsikere MLA Shivalingegowda

ಹಾಸನ: ವಿಧಾನಸಭಾ ಚುನಾವಣಾ ವೇಳೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಮೂಲ ಕಾಂಗ್ರೆಸ್‌ ಕಾರ್ಯಕರ್ತರ ಕಡೆಗಣನೆ ಆರೋಪ ಕೇಳಿಬಂದಿದೆ. ಇದರಿಂದ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕನ‌ (KM Shivalinge Gowda) ವಿರುದ್ಧ ಪಕ್ಷದೊಳಗೇ ಆಕ್ರೋಶ ಭುಗಿಲೆದ್ದಿದೆ.

ಶಾಸಕ ಶಿವಲಿಂಗೇಗೌಡ ವಿರುದ್ಧ ಕೆಪಿಸಿಸಿ ಸದಸ್ಯ ಶೇಷೇಗೌಡ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿ ಅಸಮಾಧಾನ ಹೊರಹಾಕಿದ್ದಾರೆ. ಶಿವಲಿಂಗೇಗೌಡ ತಮ್ಮ ಜೋಳಿಗೆ ತುಂಬಿಸಿಕೊಳ್ಳುವುದಾದರೆ ತುಂಬಿಸಿಕೊಳ್ಳಲಿ, ಪಾಪದ ಕೊಡ ತುಂಬುವವರೆಗೆ. ಅದರೆ ಹಾಸನ‌ ಜಿಲ್ಲೆಯ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ತುಳಿದು ಬದುಕುವುದು ಬೇಡ ಎಂದು ಕಿಡಿಕಾರಿದ್ದಾರೆ.

ಶೇಷೇಗೌಡ, ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಮುಖಂಡ. ಇವರು ಶಾಸಕ ಶಿವಲಿಂಗೇಗೌಡ ವಿರುದ್ಧ ಹಾಕಿರುವ ಪೋಸ್ಟ್‌ ಇದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | Tweet war : ಸಿದ್ದರಾಮಯ್ಯ ನಕಲಿ ಸಂವಿಧಾನ ತಜ್ಞ ಎಂದ HDK, ಅವರಿಗೆ ಮಾನಸಿಕ ಸ್ಥಿಮಿತತೆ ಇಲ್ಲ ಎಂದ ಸಿಎಂ

ತಾವೇ ರಾಜ್ಯಪಾಲರಿಗೆ ಪತ್ರ ಕಳುಹಿಸಿದ್ದು ಎಂದು ಎಚ್‌ಡಿಕೆ ಒಪ್ಪಿಕೊಳ್ಳಲಿ: ಚಲುವರಾಯಸ್ವಾಮಿ

ಮಂಡ್ಯ: ರಾಜ್ಯಪಾಲರಿಗೆ ಸಲ್ಲಿಕೆಯಾದ ಪತ್ರದಲ್ಲಿ ಸಹಿ ಮಾಡಿರುವ ಏಳು ಅಧಿಕಾರಿಗಳು ನಮ್ಮ ಇಲಾಖೆಯವರಲ್ಲ. ಅವರ ನಂಬರ್ ಹಾಗೂ ವಿಳಾಸ ಸಿಕ್ಕಿಲ್ಲ. ಗವರ್ನರ್ ಆಫೀಸ್‌ಗೆ ಪತ್ರ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಹಿ ಒಂದೇ ಪೆನ್‌ನಲ್ಲಿ ಒಂದೇ ರೀತಿಯಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ನಾನೇ ಬರೆದು ಸಹಿ ಮಾಡಿ ಕಳುಹಿಸಿದ್ದೇನೆ ಎಂದರೆ ಒಪ್ಪಬಹುದು. ಐದು ಸಹಿ ನಾನೇ ಮಾಡಿದ್ದೀನಿ ಎಂದು ಎಚ್‌ಡಿಕೆ ಒಪ್ಪಿಕೊಳ್ಳಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದರು.

ಲಂಚಕ್ಕೆ ಬೇಡಿಕೆ ಆರೋಪ ಮಾಡಿ ರಾಜ್ಯಪಾಲರಿಗೆ ಪತ್ರ ವಿಚಾರಕ್ಕೆ ನಾಗಮಂಗಲದಲ್ಲಿ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಕುಮಾರಸ್ವಾಮಿಗೆ ಕನಿಷ್ಠ ಸೌಜನ್ಯ, ಜ್ಞಾನ ಹಾಗೂ ತಿಳಿವಳಿಕೆ ಇರಬೇಕು. ಮಂಡ್ಯ ಜಿಲ್ಲೆಯನ್ನು ಅವರು ದತ್ತು ತೆಗೆದುಕೊಂಡಿದ್ದಾರಾ? ಅವರು ಒಕ್ಕಲಿಗರ ಬೆಳವಣಿಗೆ ಸಹಿಸಲ್ಲವೋ, ಇನ್ನೊಬ್ಬರ ಜಾತಿ ಸಹಿಸಲ್ಲವೋ ಅವರಿಗೆ ಬಿಟ್ಟದ್ದು. ಅವರ ಬೆದರಿಕೆಗಳಿಗೆ ಇಲ್ಲಿ ಯಾರೂ ಹೆದರಿಕೊಳ್ಳುವವರಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | BBMP Bill Payment : ಬ್ಲ್ಯಾಕ್‌ಮೇಲ್‌ಗೆಲ್ಲ ಬಗ್ಗಲ್ಲ, ಕೆಲಸ ಮಾಡಿದವರಿಗೆ ಮಾತ್ರ ಬಿಲ್‌ ಪಾವತಿ: ಡಿಕೆಶಿ

ಸಚಿವರ ವಿರುದ್ಧ ಸುಳ್ಳು ದೂರು ಎಂದು ಆಕ್ರೋಶ; ಮಂಡ್ಯದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ಧ ನಕಲಿ ದೂರು ನೀಡಲಾಗಿದೆ. ನಕಲಿ ದೂಡಿನ ಪತ್ರ ಸಲ್ಲಿಸಿದವರನ್ನು ಪತ್ತೆ ಹಚ್ಚಿ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ‌‌ ನಡೆಸಿದರು.

ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕರಿಂದ 6ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಸಚಿವರ ಏಳಿಗೆ ಸಹಿಸಲು ಸಾಧ್ಯವಾಗದೆ ಕೆಲವರು ರಾಜ್ಯಪಾಲರಿಗೆ ನಕಲಿ ಪತ್ರ ಬರೆದು ಲಂಚದ ಆರೋಪ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Exit mobile version