Site icon Vistara News

Karnataka Election 2023: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು ಎಂದ ಜಗದೀಶ್ ಶೆಟ್ಟರ್

karnataka politics cm dcm travels to delhi with cabinet expansion discussion

ಕೊಪ್ಪಳ, ಕರ್ನಾಟಕ: ಸ್ವಾಭಿಮಾನಕ್ಕೆ ಧಕ್ಕೆಯಾಯಿತು ಎಂದ ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಕೊಪ್ಪಳದಲ್ಲಿ ಕಾಂಗ್ರೆಸ್ ಪರವಾಗಿ ಸೋಮವಾರ ಭರ್ಜರಿ ಪ್ರಚಾರ ಕೈಗೊಂಡರು. ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಈ ಹಿಂದೆ ಬಿಜೆಪಿ ಮುಖಂಡನಾಗಿ ಬಂದಿದ್ದನ್ನು ನೋಡಿದ್ದೀರಿ. ಈಗ ನಾನು ಕಾಂಗ್ರೆಸ್ ಮುಖಂಡರಾಗಿ ಬಂದಿರೋದಕ್ಕೆ ನಿಮಗೆ ಆಶ್ಚರ್ಯವಾಗಿರಬಹುದು. ನಾನು ಕಾಂಗ್ರೆಸ್ ಮುಖಂಡನಾಗಿ ಬಂದಿರೋದಕ್ಕೆ ಬಿಜೆಪಿ ನಾಯಕರು ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರು ಹೇಳಿದರು(Karnataka Election 2023).

ರಾಜ್ಯ ಭಾರತೀಯ ಜನತಾ ಪಾರ್ಟಿ ಕೆಲವರ ಕಪಿಮುಷ್ಠಿಯಲ್ಲಿ ಬಿಜೆಪಿ ಸಿಲುಕಿಕೊಂಡಿದೆ. ನಮ್ಮ ತಂದೆಯವರ ಕಾಲದಿಂದಲೂ ನಾವು ಜನಸಂಘದಲ್ಲಿದ್ದೇವೆ. ಕೊನೆ ಕ್ಷಣದಲ್ಲಿ ಏನಾಯಿತೋ ಗೊತ್ತಿಲ್ಲ. ನಮಗೆ ಅನ್ಯಾಯ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ಜಗದೀಶ್ ಶೆಟ್ಟರ್ ಕೂಡುಗೆ ಕೂಡ ಇದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.

ನಾನು ಅಧಿಕಾರ, ಸ್ಥಾನ ಮಾನಕ್ಕಾಗಿ ನಾನು ಪಕ್ಷಾಂತರ ಮಾಡಲಿಲ್ಲ. ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿ ಎಂದು ಕೊನೆ ಕ್ಷಣದಲ್ಲಿ ನನಗೆ ಹೇಳಿದರು. ನನ್ನ ಮೇಲೆ ಒಂದೂ ಕಳಂಕವಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದಿತು. ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಸಿಡಿದೇಳುವ ಕೆಲಸ ಮಾಡಿದೆ. 7 ನೇ ಬಾರಿ ಬಿಜೆಪಿಯಿಂದ ನಾನು ಆಯ್ಕೆಯಾಗಿದ್ದರೆ ನಾನು ಸಿನೀಯರ್ ಲೀಡರ್ ಆಗುತ್ತಿದ್ದೆ. ಹೀಗಾಗಿ ನನ್ನ ಚಿವುಟುವ ಪ್ರಯತ್ನ ಮಾಡಿದರು ಎಂದು ಜಗದೀಶ್ ಶೆಟ್ಟರ್ ಅವರು ಹೇಳಿದರು.

ಬಿಜೆಪಿಯಲ್ಲಿ ಹಿಡನ್ ಅಜೆಂಡಾ ಇದೆ. ತಾವು ಹೇಳಿದಂತ ವ್ಯಕ್ತಿಗಳನ್ನು ಖುರ್ಚಿಯಲ್ಲಿ ಕೂಡಿಸುವುದಾಗಿದೆ. ಗೌರವಯುತವಾಗಿ ನಡೆಸಿಕೊಂಡರೆ ಸಾಕು ಎಂಬ ಒಂದೇ ಕಂಡಿಷನ್ ನೊಂದಿಗೆ ಕಾಂಗ್ರೆಸ್ ಸೇರಿದಾಗ ಹೇಳಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ 140 ಸೀಟ್ ಗೆದ್ದು ಅಧಿಕಾರಕ್ಕೆ ಬರೋದು ನಿಶ್ಚಿತ. ಬಿಜೆಪಿಯ ಗುಲಾಮಗಿರಿಗೆ ಸೆಡ್ಡು ಹೊಡೆದು ಬಂದಿದ್ದೀರಿ ಎಂದು ನನಗೆ ಅನೇಕರು ಫೋನ್ ಮಾಡಿ ಹೇಳುತ್ತಿದ್ದಾರೆ. 30 ವರ್ಷದ ತಪಸ್ಸಿನ ಫಲವಾಗಿ ಜಗದೀಶ್ ಶೆಟ್ಟರ್ ಒಬ್ಬ ನಾಯಕನಾಗಿ ಬೆಳೆದಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Karnataka Election: ಬಿಜೆಪಿಯಿಂದ ಜಗದೀಶ್ ಶೆಟ್ಟರ್‌ 27 ಬೆಂಬಲಿಗರ ಉಚ್ಚಾಟನೆ

ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ್ ಅವರನ್ನು ಗೆಲ್ಲಿಸುವುದು ಅತಿ ಅವಶ್ಯವಿದೆ. ಬಿಜೆಪಿಯವರು ಕುಟುಂಬ ರಾಜಕಾರಣ ಬೇಡ ಅಂತಾರೆ. ಸಂಗಣ್ಣ ಕರಡಿ ಅವರನ್ನು ಸಮಾಧಾನ ಮಾಡಿ ಅವರ ಸೊಸೆಗೆ ಟಿಕೇಟ್ ಕೊಡ್ತಾರೆ. ಬಿಜೆಪಿಯ ನೈತಿಕತೆಯನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಐದು ಗ್ಯಾರಂಟಿ ಕೊಟ್ಟಿದೆ. ಅಧಿಕಾರಕ್ಕೆ ಬಂದರೆ ಈಡೇರಿಸುತ್ತೇವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಹೇಳಿದರು.

Exit mobile version