ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಅಣಕ ಮಾಡುವ ದಿಸೆಯಲ್ಲಿ “ಪೇ ಸಿಎಂ, 40 ಪರ್ಸೆಂಟ್ ಆ್ಯಕ್ಸೆಪ್ಟೆಡ್” ಎಂಬ ಪೋಸ್ಟರ್ (Poster Politics) ಅಂಟಿಸಿದವರನ್ನು ಬಂಧಿಸಿ, ಪ್ರಕರಣವನ್ನು ಸಿಸಿಬಿಗೆ ವಹಿಸಿದ ಬೆನ್ನಲ್ಲೇ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಮತ್ತೊಂದು ತಿರುಗೇಟು ನೀಡಿದೆ. ಪೇಟಿಎಂ ಪೇಮೆಂಟ್‌ನಲ್ಲಿ ಸರ್ಕಾರದ ಭ್ರಷ್ಟಾಚಾರವನ್ನು ಸಾರುವ ಚಿತ್ರಗಳನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ.
ಗುತ್ತಿಗೆದಾರರಿಂದ ಶೇ.೪೦ರಷ್ಟು ಕಮಿಷನ್, ಪಿಎಸ್‌ಐ ನೇಮಕಾತಿ, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆ ಸೇರಿ ಹಲವು ಪ್ರಕರಣಗಳಲ್ಲಿ ಸರ್ಕಾರ ಇಂತಿಷ್ಟು ಲಂಚ ಪಡೆದಿದೆ ಎಂಬುದನ್ನು ಸಾರುವ ಪೇಟಿಎಂ ಪೋಸ್ಟರ್‌ಗಳನ್ನು ಹರಿಬಿಡಲಾಗಿದೆ. ಸರ್ಕಾರ ಯಾವ ಪ್ರಕರಣದಲ್ಲಿ ಎಷ್ಟು ದುಡ್ಡು ಹೊಡೆದಿದೆ ಎಂಬುದನ್ನು ಪೇಟಿಎಂ ಪೇಮೆಂಟ್ ಪೋಸ್ಟರ್‌ಗಳು ಸಾರುತ್ತಿವೆ. ಆದಾಗ್ಯೂ, ಪೇಸಿಎಂ ಪೋಸ್ಟರ್ ಬೆನ್ನಲ್ಲೇ ಬಿಜೆಪಿಯು ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕ ಬಿಡುಗಡೆ ಮಾಡಿದೆ. ಇದಾದ ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್ ಮತ್ತಷ್ಟು ಪೋಸ್ಟರ್‌ಗಳನ್ನು ಬಿಟ್ಟಿದೆ.
ಇದನ್ನೂ ಓದಿ | Poster Politics | PAYCM ಪೋಸ್ಟರ್‌ಗೆ ಕೇಸ್ ಜಡಿದಿದ್ದ ಬಿಜೆಪಿಯಿಂದ ಈಗ ಸ್ಕ್ಯಾಮ್ ರಾಮಯ್ಯ ಪುಸ್ತಕ ಬಿಡುಗಡೆ