Site icon Vistara News

ಬೊಮ್ಮಾಯುಲ್ಲಾ ಖಾನ್, ಗಡ್ಕರಿ ಶೇಕ್: ಸಿದ್ರಾಮುಲ್ಲಾ ಖಾನ್‌ ಎಂದ ಸಿ.ಟಿ. ರವಿಗೆ ಕಾಂಗ್ರೆಸ್‌ ತಿರುಗೇಟು

congress-renames-bjp-leader-in-the-line-of-sidramulla-khan

ಬೆಂಗಳೂರು: ಅಲ್ಪಸಂಖ್ಯಾತರಿಗೇ ಮಣೆ ಹಾಕುವ ಹಾಗೂ ಟಿಪ್ಪು ಜಯಂತಿ ಆಚರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್‌ ಎಂದಿದ್ದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

ಬಿಜೆಪಿ ನಾಯಕರಿರುವ ಮೂರು ಫೋಟೊಗಳನ್ನು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಂ ಟೋಪಿ ಧರಿಸಿ ನಿಂತಿರುವ ಫೋಟೊಕ್ಕೆ, “ಇವರನ್ನು “ಬೊಮ್ಮಾಯುಲ್ಲಾ ಖಾನ್” ಎಂದು ಕರೆಯಬಹುದೇ” ಎಂದು ಪ್ರಶ್ನಿಸಿದೆ.

ಅದೇ ರೀತಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮುಸ್ಲಿಂ ಟೋಪಿ ಧರಿಸಿರುವ ಚಿತ್ರದಲ್ಲಿ, “ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ” ಎಂದಿದೆ.

ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹಾಗೂ ಕಂದಾಯ ಸಚಿವ ಆರ್‌. ಅಶೋಕ್‌ ಟಿಪ್ಪು ಪೇಟ ಧರಿಸಿ ನಿಂತಿರುವ ಫೋಟೊ ಅಪ್‌ಲೋಡ್‌ ಮಾಡಿ, “ಇವರಿಗೆ “ಜಬ್ಬಾರ್ ಖಾನ್” “ಅಶ್ವಾಖ್ ಇನಾಯತ್ ಖಾನ್” ಎಂದು ಹೆಸರಿಡುತ್ತೀರಾ ಸಿ.ಟಿ. ರವಿ ಅವರೇ?” ಎಂದು ಪ್ರಶ್ನಿಸಿದೆ.

ಚಿಕ್ಕಮಗಳೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದ ಸಿ.ಟಿ. ರವಿ, ಸಿದ್ರಾಮುಲ್ಲಾ ಖಾನ್‌ ಎಂದಿದ್ದರು. ಆನಂತರ ಮಾತನಾಡಿ, ಸಿದ್ರಾಮುಲ್ಲಾ ಖಾನ್‌ ಎನ್ನುವುದು ಬೈಗುಳ ಅಲ್ಲ, ಅವರ ವ್ಯಕ್ತಿತ್ವಕ್ಕೆ ನೀಡಿರುವ ಬಿರುದು ಎಂದು ಸಮರ್ಥನೆ ಮಾಡಿಕೊಂಡಿದ್ದರು.

ಇದನ್ನೂ ಓದಿ | CT Ravi vs Siddaramaiah | ಸಿದ್ರಾಮುಲ್ಲಾ ಖಾನ್‌ ಹೇಳಿಕೆಗೆ ಬಿಜೆಪಿ ಸಮರ್ಥನೆ, ಮತ್ತೇನು ಮೀರ್‌ ಸಾದಕ್‌ ಅನ್ನಬೇಕಾ?

Exit mobile version