ಮಡಿಕೇರಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ನಡುವಿನ ʻಲೂಟಿ ರವಿ, ಪೆದ್ದ, ಕಚ್ಚೆಹರುಕʼ ಜಗಳಕ್ಕೆ ಈಗ ಬೇರೆಯವರೂ ಎಂಟ್ರಿ ಆಗುತ್ತಿದ್ದಾರೆ. ಅತ್ತ ಚಿಕ್ಕಮಗಳೂರಿನಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಅವರು ಸಿ.ಟಿ. ರವಿ ಅವರಿಗೆ ʻಹರುಕು ಕಚ್ಚೆʼ ಕಳುಹಿಸುವ ಅಭಿಯಾನ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರೆ, ಇತ್ತ ಮಡಿಕೇರಿಯಲ್ಲಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಅವರು ಅಕ್ರಮ ಆಸ್ತಿಯ ದಾಖಲೆ ಬಿಚ್ಚಿಡುವುದಾಗಿ ಹೇಳಿದ್ದಾರೆ.
ಲಕ್ಷ್ಮಣ್ ಹೇಳಿದ್ದೇನು?
ʻʻಸಿ.ಟಿ. ರವಿ, ಕೆ.ಎಸ್. ಈಶ್ವರಪ್ಪ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಬೆಂಕಿ ಹಚ್ಚಿಸುವವರು. ಇವರೆಲ್ಲರೂ ರಾಜ್ಯದಲ್ಲಿ ಬೆಂಕಿ ಹಚ್ಚುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಕೂಡಾ ಇವರನ್ನು ಇದೇ ಕಾರಣಕ್ಕಾಗಿ ಇಟ್ಟುಕೊಂಡಿದ್ದಾರೆ. ಸಿಟಿ ರವಿ ಮಾತಾಡುವಾಗಲಂತೂ ಹಲ್ಲು ಹಿಡಿದೇ ಮಾತಾಡುವುದುʼʼ ಎಂದು ಲಕ್ಷ್ಮಣ್ ಹೇಳಿದರು.
ʻʻಸಿ.ಟಿ. ರವ ಅವರೇ, ನಿಮ್ಮ ಭಾವ ಸುಂದರೇಶನ್ ಅವರ ಹೆಸರಿನಲ್ಲಿ 800 ಕೋಟಿ ಆಸ್ತಿ ಮಾಡಿದ್ದೀರಿ. ಚಿಕ್ಕಮಗಳೂರಿನಲ್ಲಿ ಒಂದು ಸಣ್ಣ ಚರಂಡಿ ಮಾಡುವುದಾದರೂ ನಿಮ್ಮ ಭಾವನ ಹೆಸರಿನಲ್ಲಿ ಗುತ್ತಿಗೆ ನೀಡುತ್ತೀರಿ. ನೀವು 800 ಕೋಟಿ ಆಸ್ತಿ ಮಾಡಿರುವ ಬಗ್ಗೆ ನನ್ನ ಬಳಿ ದಾಖಲೆ ಇವೆ. ನಾನು ಮುಂದಿನ ದಿನಗಳಲ್ಲಿ ನಿಮ್ಮ ಬಂಡವಾಳ ಬಿಚ್ಚಿಡುತ್ತೇನೆʼʼ ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | ಕಚ್ಚೆ ಹರುಕ ವಿವಾದ: ಸಿ.ಟಿ ರವಿಗೆ ಹರಕು ಕಚ್ಚೆ ರವಾನೆ ಮಾಡುವ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕ ಸಚಿನ್ ಮೀಗಾ