ಧಾರವಾಡ: ಜಿಲ್ಲೆಯ ಅಣ್ಣಿಗೇರಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಣ್ಣಿಗೇರಿ ತಾಲೂಕಿನ (Dharwad News) ನಲವಡಿ ಗ್ರಾಮದ ದೇವನಗೌಡ ಪಾಟೀಲ್ (52) ಮೃತರು.
ಅಣ್ಣಿಗೇರಿಯಲ್ಲಿ ಗುರುವಾರ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಕಾರ್ಯಕರ್ತ ದೇವನಗೌಡ ಪಾಟೀಲ್‌ಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆಯೇ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ | Black panther : ಕಡ್ಲೆ ಗ್ರಾಮದಲ್ಲಿ ಇಟ್ಟ ಬೋನಿನಲ್ಲಿ ಬಿದ್ದದ್ದು ಸಾಮಾನ್ಯ ಚಿರತೆಯಲ್ಲ, ಅದು ಕರಿ ಚಿರತೆ!
ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಶಿಕ್ಷಕನಿಗೆ 6 ವರ್ಷ ಜೈಲು
ಚಿತ್ರದುರ್ಗ: ಶಾಲಾ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾದ ಮುರುಡಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ನರಸಿಂಹಸ್ವಾಮಿಗೆ 6 ವರ್ಷ ಕಠಿಣ ಸಜೆ ಹಾಗೂ 30 ಸಾವಿರ ದಂಡ ವಿಧಿಸಿ ಚಿತ್ರದುರ್ಗ ಜಿಲ್ಲೆ 2ನೇ ಅಪರ ಹಾಗೂ ಸತ್ರ ನ್ಯಾಯಲಯ ಮಹತ್ವದ ತೀರ್ಪು ನೀಡಿದೆ.
2020ರಲ್ಲಿ ಶಾಲಾ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಆರೋಪಿ, ಮುರುಡಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಆರೋಪಿ ನರಸಿಂಹಸ್ವಾಮಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಬಾಲಕಿ ಚಿತ್ರದುರ್ಗಕ್ಕೆ ಬಂದಿದ್ದಾಗ ಘಟನೆ ನಡೆದಿತ್ತು. ಮುರುಘಾ ಮಠದ ವಸತಿ ಗೃಹದಲ್ಲಿ ಆರೋಪಿ ಶಿಕ್ಷಕ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಘಟನೆ ಕುರಿತು ರಾಂಪುರ ಪೊಲೀಸ್ ಠಾಣೆಯಲ್ಲಿ 354, 376 ಅಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ | Lokayukta Raid: ರಾಯಚೂರಿನಲ್ಲಿ 45 ಸಾವಿರ ರೂ. ಲಂಚ ಸ್ವೀಕಾರ; ನಗರಸಭೆ ಅಭಿಯಂತರ ಲೋಕಾಯುಕ್ತ ಬಲೆಗೆ
ಐಪಿಸಿ ಸೆಕ್ಷನ್ 354 ಅಡಿ ಆರೋಪಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ, ಪೋಕ್ಸೊ ಕಾಯ್ದೆಯಡಿ 5 ವರ್ಷ ಕಠಿಣ ಸಜೆ, 20 ಸಾವಿರ ದಂಡ ವಿಧಿಸಿ ನ್ಯಾಯಾಧೀಶೆ ಬಿ.ಕೆ ಕೋಮಲ ತೀರ್ಪು ನೀಡಿದ್ದಾರೆ.