Site icon Vistara News

Murugha Shri | ಮಠದಲ್ಲಿ ಇದ್ದವರಿಂದಲೇ ನಮ್ಮ ವಿರುದ್ಧ ಷಡ್ಯಂತ್ರ; ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ!

ಮುರುಘಾಶ್ರೀ

ಬೆಂಗಳೂರು: ಜಗತ್ತಿನಲ್ಲಿ ಧರ್ಮಾಂಧರು, ಕಳ್ಳರು ಈ ರೀತಿ (ಲೈಂಗಿಕ ದೌರ್ಜನ್ಯ ಆರೋಪ) ಸನ್ನಿವೇಶ ಎದುರಿಸಿಲ್ಲ. ತಾತ್ವಿಕ ತಳಹದಿಯ ಮೇಲೆ ನಡೆದವರಿಗೆ ಕುತ್ತು ಬರುತ್ತದೆ. ಮಹಾತ್ಮ ಗಾಂಧಿ, ಬಸವಣ್ಣ, ಅವರಿಗೂ ನೋವಿನ ದಿನಗಳಿದ್ದವು. ಅಂಥ ದೊಡ್ಡ ಮಹಾನೀಯರ ಜೀವನದಲ್ಲಿ ದುರಂತ ನಡೆದಿವೆ. ಹೀಗಿರುವಾಗ ನಾವು ಕೂಡ ಇದಕ್ಕೆ ಹೊರತಲ್ಲ. ನಮ್ಮ ವಿರುದ್ಧ ಪಿತೂರಿ ನಡೆದಿದೆ. ಮಠದಲ್ಲಿ ಇದ್ದವರಿಂದಲೇ ಷಡ್ಯಂತ್ರ ನಡೆದಿದೆ. ನಾವು ಸಂಧಾನಕ್ಕೆ ಸಿದ್ಧ, ಸಮರಕ್ಕೂ ಸಿದ್ಧ…..… ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮುರುಘಾ ಶರಣರು (Murugha Shri) ಆಡಿದ ಈ ಮಾತುಗಳ ಆಡಿಯೋ ವೈರಲ್ ಆಗಿದೆ. ಆರೋಪ ಮಾಡಿದ ನಂತರ ಸ್ಪಷ್ಟನೆ ರೀತಿಯಲ್ಲಿ ಮಾತನಾಡಿರುವ ಶ್ರೀಗಳು, ತಮ್ಮ ವಿರುದ್ಧದ ಆರೋಪಗಳು ನಿರಾಧಾರ ಎಂಬಂಥ ರೀತಿಯಲ್ಲಿ ಹೇಳಿಕೊಂಡಿದ್ದಾರೆ.

ಶ್ರೀಗಳು ಮಾತನಾಡಿದ್ದೇನು?
ಗಾಳಿಪಟಕ್ಕೆ ಕೆಳಗೆ ಇದ್ದಾಗ ಗಾಳಿ ಹೊಡೆತ ಗೊತ್ತಾಗಲ್ಲ. ಆಕಾಶದೆತ್ತರಕ್ಕೆ ಹೋದಂತೆ ಗಾಳಿಯ ಹೊಡೆತವು ಗಾಳಿಪಟ್ಟಕ್ಕೆ ಆಗುತ್ತದೆ. ಸಣ್ಣವರಿಗೆ ಸಣ್ಣ ಕುತ್ತು ಬರುತ್ತವೆ. ದೊಡ್ಡವರಿಗೆ ದೊಡ್ಡ ಕುತ್ತು ಬರುತ್ತವೆ. ಕುತ್ತುಗಳು ಅಂದರೆ ಆಪತ್ತುಗಳು, ಕಿರುಕುಳಗಳು. ಸತ್ಪುರುಷರು, ಸಮಾಜ ಸುಧಾರಕರ ಕಾಲದಲ್ಲಿಯೂ ದುಷ್ಟ ಶಕ್ತಿಗಳಿದ್ದವು. ಸಾತ್ವಿಕರು ಸಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಅದಕ್ಕೆ ವ್ಯತಿರಿಕ್ತವಾದದ್ದು ನಕಾರಾತ್ಮಕ ಧೋರಣೆಗಳು.

ಪ್ಲೇಟೋನಂಥ ಶಿಷ್ಯ ಸಿಗಲಿಲ್ಲ
ಯೇಸು ಕ್ರಿಸ್ತಗೆ ಶಿಲುಬೆಗೆ ಏರಿಸಿದ್ದು ಅವರದೇ ಧರ್ಮದವರು. ಪೈಗಂಬರ್ ಗೆ ಟಾರ್ಚರ್‌ ಮಾಡಿದ್ದು ಅದೇ ಧರ್ಮದವರು. ಬುದ್ಧನಿಗೆ ಹಂದಿಯ ಮಾಂಸದ ರಸ ಉಣಿಸಿದ್ದವರ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಎಲ್ಲರಿಗೂ ಪ್ಲೋಟೋನಂಥ ಶಿಷ್ಯ ಸಿಗಲ್ಲ. ಆದರೆ, ಸಾಕ್ರೆಟಿಸ್ ಪ್ಲೇಟೋ ಸಿಕ್ಕಿದ. ನಮಗೆ ಅಂಥ ಶಿಷ್ಯ ಸಿಗಲಿಲ್ಲ ಎಂಬ ಬೇಸರವಿದೆ. ಶಿಷ್ಯರು ಮರಣದಂಡನೆ ತಪ್ಪಿಸಲು ಯತ್ನಿಸುತ್ತಾರೆ. ಅಂಥ ಶಿಷ್ಯರು ಸಿಗಬೇಕು. ನಾನು ವ್ಯವಸ್ಥೆ ವಿರುದ್ಧ ರಾಜಿ ಮಾಡಿಕೊಂಡರೆ ಅತ್ಯಂತ ಕಳಂಕ. ಈ ನಿಸರ್ಗ ಬ್ರಹ್ಮಾಂಡ ಈ ವ್ಯವಸ್ಥೆಯನ್ನು ಮಾಡಿದೆ. ಸಾಕ್ರೆಟಿಸ್ ಅಂತಿಮ ಕಾಲದಲ್ಲಿ ವಿಷ ಕುಡಿದ ಪ್ರಸಂಗ ನೆನೆದು ಭಾವುಕರಾದರು.

ಕಳ್ಳರು, ಧರ್ಮಾಂಧರು ಪಾರಾಗುತ್ತಾರೆ
ಜಗತ್ತಿನಲ್ಲಿ ಧರ್ಮಾಂಧರು, ಕಳ್ಳರು ಈ ರೀತಿ ಸನ್ನಿವೇಶ ಎದುರಿಸಿಲ್ಲ. ತಾತ್ವಿಕ ತಳಹದಿಯ ಮೇಲೆ ನಡೆದವರಿಗೆ ಕುತ್ತು ತಪ್ಪಿದ್ದಲ್ಲ. ಗಾಂಧಿ, ಬಸವಣ್ಣ, ಅವರಿಗೂ ನೋವಿನ ದಿನಗಳಿದ್ದವು. ಅಂಥ ದೊಡ್ಡ ಮಹನೀಯರ ಜೀವನದಲ್ಲಿ ದುರಂತಗಳು ನಡೆದಿವೆ. ಹಾಗಾಗಿ ನಾವು ಕೂಡ ಇದಕ್ಕೆ ಹೊರತಲ್ಲ. ನಾವು ಸಂಧಾನಕ್ಕೂ ಸಿದ್ದ, ಸಮರಕ್ಕೂ ಸಿದ್ಧ. ಕೆಲವರು ಸಂಧಾನ ಮಾಡುತ್ತಿದ್ದಾರೆ, ಅದು ಫೇಲ್ ಆದರೆ ಸಮರ ಉಳಿಯುತ್ತದೆ. ಕೆಲವು ಸ್ವಾಮೀಜಿಗಳ ಜೀವನದಲ್ಲಿ ಇಂಥ ಘಟನೆ ನಡೆದಾಗ ಕೋರ್ಟ್ ಶುಲ್ಕ ನಾನು ಕೊಟ್ಟಿದ್ದೇನೆ. ನಾವೇ ಧೈರ್ಯ ಹೇಳಿದ್ದೂ ಇದೆ. ನಮ್ಮ ವಿರುದ್ಧಇದೊಂದು ಪಿತೂರಿ, ಒಳ ಸಂಚು ಅಷ್ಟೇ. ಮಠದಲ್ಲಿ ಇದ್ದವರೇ ಷಡ್ಯಂತ್ರ ಮಾಡಿದ್ದಾರೆ.

ಸುದ್ದಿ ಕೇಳಿ ಇಲ್ಲಿಗೆ ಬಂದಿದ್ದೀರಿ
ಮುಂಜಾನೆಯ ಸುದ್ದಿ ಕೇಳಿ ನೀವೆಲ್ಲಾ ಇಲ್ಲಿ ಬಂದಿದ್ದೀರಾ. ನಮಗಿಂತ ನಿಮಗೆ ತುಂಬಾ ನೋವಾಗಿದೆ. ಸರ್ವಜಾತಿ, ಧರ್ಮದವರು ಇಲ್ಲಿದ್ದೀರಿ. ಮುರುಘಾ ಶರಣರ ಬದುಕಿನ ಆತ್ಯಂತಿಕವಾದ ಕಿರುಕುಳ ಇದು. ಸಣ್ಣಪುಟ್ಟವು ಇರುತ್ತವಲ್ಲ. ನಮ್ಮಂತವರ ಜೊತೆಯೇ ಜಗಳ ಮಾಡಬೇಕು, ಬೇರೆಯವರ ಜೊತೆ ಜಗಳದಲ್ಲಿ ಏನೂ ಸಿಗಲ್ಲ. ಮಠದಲ್ಲಿ ನಡೆಯುತ್ತಿರುವುದು ಅಧಿಕಾರಕ್ಕಾಗಿ ಸಂಘರ್ಷ.

ಎಲ್ಲದಕ್ಕೂ ಸಿದ್ಧ
ನಾವು ಸಂಧಾನಕ್ಕೂ ಸಿದ್ದ, ಸಮರಕ್ಕೂ ಸಿದ್ಧ. ಕೆಲವರು ಸಂಧಾನ ಮಾಡುತ್ತಿದ್ದಾರೆ, ಅದು ಫೇಲ್ ಆದರೆ ಸಮರ ಉಳಿಯುತ್ತದೆ. ಕೆಲವು ಸ್ವಾಮೀಜಿಗಳ ಜೀವನದಲ್ಲಿ ಇಂಥ ಘಟನೆ ನಡೆದಾಗ ಕೋರ್ಟ್ ಶುಲ್ಕ ನಾನು ಕೊಟ್ಟಿದ್ದೇನೆ. ನಾವೇ ಧೈರ್ಯ ಹೇಳಿದ್ದೂ ಇದೆ. ನಮ್ಮ ವಿರುದ್ಧಇದೊಂದು ಪಿತೂರಿ, ಒಳ ಸಂಚು ಅಷ್ಟೇ. ಮಠದಲ್ಲಿ ಇದ್ದವರೇ ಷಡ್ಯಂತ್ರ ಮಾಡಿದ್ದಾರೆ.

ಇದನ್ನೂ ಓದಿ | ಚಿತ್ರದುರ್ಗ ಮುರುಘಾಶರಣರಿಂದ ಲೈಂಗಿಕ ದೌರ್ಜನ್ಯ ಆರೋಪ; ವೈದ್ಯಕೀಯ ತಪಾಸಣೆಗೆ ಇಬ್ಬರು ಬಾಲಕಿಯರು

Exit mobile version