Site icon Vistara News

Road accident | ಕುಂದಾಪುರ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಸಿಮೆಂಟ್‌ ಲಾರಿ, ಮೂರು ಗಂಟೆ ಹೆದ್ದಾರಿ ಸಂಚಾರ ವ್ಯತ್ಯಯ

Cement lorry

ಉಡುಪಿ: ಕೊಚ್ಚಿನ್‌-ಮುಂಬಯಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕುಂದಾಪುರ ಸಂಗಂ ಜಂಕ್ಷನ್ ಬಳಿ ತಡರಾತ್ರಿ ಸಿಮೆಂಟ್‌ ಕಂಟೇನರ್‌ ಒಂದು ರಸ್ತೆಗೆ ಅಡ್ಡಲಾಗಿ ((Road accident)) ಉರುಳಿಬಿದ್ದಿದೆ. ಅಪಘಾತದಿಂದಾಗಿ 3 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು.

ಕೊಪ್ಪಳದಿಂದ ಸುಮಾರು 50 ಟನ್ ಸಿಮೆಂಟ್ ಹೊತ್ತು ಬರುತ್ತಿದ್ದ ಕಂಟೇನರ್ ಮಂಗಳೂರು ಯಾರ್ಡ್‌ಗೆ ಹೋಗುತ್ತಿತ್ತು. ಈ ನಡುವೆ ಚಾಲಕನ ನಿಯಂತ್ರಣ ತಪ್ಪಿ ಅದು ಪಲ್ಟಿಯಾಗಿದೆ. ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದ ಕಂಟೇನರ್‌ ಬಳಿಕ ಬಲಬದಿಯ ಹೆದ್ದಾರಿಗೆ ಪಲ್ಟಿಯಾಗಿದೆ. ಚಾಲನ ಪಾನಮತ್ತನಾಗಿ ಇದ್ದುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಪ್ರಾಥಮಿಕವಾಗಿ ಅಂದಾಜಿಸಿದ್ದಾರೆ.

ಈ ನಡುವೆ ಈ ಕಂಟೇನರ್‌ ಎದುರಿನಿಂದ ಬರುತ್ತಿದ್ದ ಕಾರಿಗೂ ಬಡಿದಿದ್ದು, ಅದು ಕೂಡಾ ಜಖಂ ಆಗಿದೆ. ಸ್ಥಳೀಯರ ಸಹಕಾರದಿಂದ ಮೂರು ಕ್ರೇನ್ ಗಳನ್ನು ಬಳಸಿ ಕಂಟೇನರ್‌ಗಳನ್ನು ಮೇಲೆತ್ತುವ ಕಾರ್ಯಾಚರಣೆ ನಡೆಯಿತು. ಅಷ್ಟು ಹೊತ್ತು ಸಂಚಾರ ವ್ಯತ್ಯಯ ಉಂಟಾಗಿತ್ತು. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident: ರಸ್ತೆ ಬದಿಯ ಶೆಡ್‌ ಮೇಲೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಪಲ್ಟಿ; ಮಹಿಳೆ ಸಾವು, ನಾಲ್ವರು ಗಂಭೀರ

Exit mobile version