ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರ ಸಾವಿನ ಸಂಖ್ಯೆ ಏರುತ್ತಲೇ ಇದೆ. ಜಿಲ್ಲೆಯ ಮಾನ್ವಿ ತಾಲೂಕಿನ ವಲ್ಕಂದಿನ್ನಿ ಗ್ರಾಮದಲ್ಲಿ ಕಲುಷಿತ ನೀರಿಗೆ ಭಾನುವಾರ (ಜು.೩) ತಡರಾತ್ರಿ ಲಕ್ಷ್ಮೀ (26) ಎಂಬ ಮಹಿಳೆ ಮೃತರಾಗಿದ್ದಾರೆ. ಕಲುಷಿತ ನೀರು ಸೇವಿಸಿದ ಪರಿಣಾಮವಾಗಿ ವಾಂತಿ-ಭೇದಿಯಿಂದ ಬಳಲುತ್ತಿದ್ದ ಇವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಈ ನಡುವೆ, ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಸಂಖ್ಯೆ 80ಕ್ಕೆ ಏರಿದೆ. ಇವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ೭ ಮಂದಿ ಸತ್ತಿದ್ದಾರೆ.
ಇದನ್ನೂ ಓದಿ | ಇಂಡಿಯಲ್ಲಿ 70ಕ್ಕೂ ಹೆಚ್ಚು ಮಂದಿಗೆ ವಾಂತಿ, ಭೇದಿ: ಕಲುಷಿತ ನೀರು ಕಾರಣ ಶಂಕೆ
ಈ ಹಿಂದೆ ಕೂಡ ಜಿಲ್ಲೆಯಲ್ಲಿ ಹಲವಾರು ಕಲುಷಿತ ನೀರು ದುರಂತ ಪ್ರಕರಣ ನಡೆದಿದ್ದವು. ಮಾನ್ವಿ ತಾಲೂಕಿನ ವಲ್ಕಂ ದಿನ್ನಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ 10 ವಿದ್ಯಾರ್ಥಿಗಳು ಸೇರಿ 30 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದವರಲ್ಲಿ, ಸರ್ಕಾರಿ ಶಾಲೆಯ ೧೦ ಮಕ್ಕಳಿಗೆ ನಿರ್ಜಲೀಕರಣ ಸಮಸ್ಯೆ ಉಂಟಾಗಿತ್ತು. ಗ್ರಾಮಕ್ಕೆ ತುಂಗಭದ್ರಾ ನದಿ ನೀರು ಸರಬರಾಜು ಆಗುತ್ತಿದೆ. ಈ ನೀರಿಗೆ ಕಲುಷಿತ ನೀರು ಸೇರಿ ಸ್ಥಳೀಯ ಜನ ವಾಂತಿ-ಭೇದಿಯಿಂದ ಬಳಲುವಂತಾಗಿದೆ.
ಇದನ್ನೂ ಓದಿ | ಕಲುಷಿತ ನೀರು ಪೂರೈಕೆ: ರಾಯಚೂರು ನಗರಸಭೆ AEE ವೆಂಕಟೇಶ ಸಸ್ಪೆಂಡ್