Site icon Vistara News

Contractor ends life : ಹೇಮಾವತಿ ನದಿಗೆ ಜಿಗಿದು ಸಿವಿಲ್‌ ಕಂಟ್ರಾಕ್ಟರ್‌ ಆತ್ಮಹತ್ಯೆ; ಎಲ್ಲಾ ಮೋಸ ಮಾಡಿದ್ರು!

Contractor suicide

ಹಾಸನ: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸಿವಿಲ್‌ ಕಂಟ್ರಾಕ್ಟರ್‌ (Civil Contractor) ಒಬ್ಬರು ನದಿಗೆ ಜಿಗಿದು ಪ್ರಾಣ (Self Harming) ಕಳೆದುಕೊಂಡಿದ್ದಾರೆ. ಹೊಳೆನರಸೀಪುರ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ಸತ್ತಾರ್ (79) ಎಂಬವರೇ ಆತ್ಮಹತ್ಯೆ ಗೆ ಶರಣಾದವರು. ಅವರು ಹೊಳೆಗೆ ಜಿಗಿಯಲು ಯತ್ನಿಸುತ್ತಿರುವ ದೃಶ್ಯ ವೈರಲ್‌ ಆಗಿದೆ.

ಸತ್ತಾರ್‌ ಅವರು ಜಿಗಿಯಲು ಯತ್ನಿಸುತ್ತಿರುವ ಕ್ಷಣಗಳು

ಸತ್ತಾರ್‌ ಅವರು ಕ್ಲಾಸ್‌ ವನ್‌ ಕಾಂಟ್ರಾಕ್ಟರ್‌ ಆಗಿದ್ದು ಸಾಕಷ್ಟು ಜನಪ್ರಿಯರಾಗಿದ್ದಾರೆ. ಈ ಭಾಗದಲ್ಲಿ ಹಲವು ಸರ್ಕಾರಿ ಕಾಮಗಾರಿಗಳನ್ನು ಅವರೇ ನಡೆಸಿದ್ದರು. ಆದರೆ, ಇತ್ತೀಚೆಗೆ ಅವರು ವೈಯಕ್ತಿಕ ಸಮಸ್ಯೆಗಳಿಂದ ನೊಂದಿದ್ದರು ಎಂದು ಹೇಳಲಾಗಿದೆ. ಅವರು ಹಲವರಿಗೆ ಹಣ ನೀಡಿದ್ದು, ಅದನ್ನು ವಾಪಸ್‌ ಕೊಡದೆ ಮೋಸ ಮಾಡಿದ್ದಾರೆ ಎಂಬ ಕೊರಗು ಅವರಿಗೆ ಇತ್ತು ಎನ್ನಲಾಗಿದೆ.

ವ್ಯಾವಹಾರಿಕವಾಗಿಯೂ ಅವರು ಸಾಕಷ್ಟು ಹಣ ಹೂಡಿಕೆ ಮಾಡಿದ್ದರು. ಆದರೆ, ಬೇರೆಯವರಿಗೆ ಕೊಟ್ಟ ಹಣ ವಾಪಸ್‌ ಬಾರದ ಹಿನ್ನೆಲೆಯಲ್ಲಿ ಅವರು ತೊಂದರೆಗೆ ಒಳಗಾಗಿದ್ದರು. ಹೀಗಾಗಿ ಕಳೆದ ಕೆಲವು ಸಮಯದಿಂದ ಚಿಂತೆಯಲ್ಲಿದ್ದರು ಎನ್ನಲಾಗಿದೆ.

Search for dead body in Hemavati

ಈ ನಡುವೆ, ಗುರುವಾರ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಅವರು ಹೇಮಾವತಿ ನದಿಯ ಹಳೆ ಸೇತುವೆ ಬಳಿಗೆ ಬಂದು ಅಲ್ಲಿಂದ ನೀರಿಗೆ ಹಾರಿದ್ದಾರೆ. ಅವರು ತುಂಬಾ ಹೊತ್ತು ಅಲ್ಲೇ ಕುಳಿತು ಸೇತುವೆಯ ಕಂಬಿಗಳ ಮೇಲೆ ಹತ್ತಿ ಇಳಿಯುತ್ತಿದ್ದರು. ಆದರೆ, ಯಾರಿಗೂ ಇವರು ಆತ್ಮಹತ್ಯೆಯ ಪ್ರಯತ್ನದಲ್ಲಿದ್ದಾರೆ ಎಂಬ ಸಂಶಯ ಬಂದಿರಲಿಲ್ಲ.

ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಅದರ ಪೂರ್ವದ ಕ್ಷಣಗಳು ಒಂದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅವರ ಕೊನೆಯ ಕ್ಷಣಗಳು ತುಂಬ ಬೇಸರ ಮೂಡಿಸುತ್ತವೆ.

Search for dead body in Hemavati

ಒಂದು ದಿನವಾದರೂ ಸಿಗದ ಶವ

ಸತ್ತಾರ್‌ ಅವರು ಹೇಮಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡು ಒಂದು ದಿನವಾದರೂ ಶವ ಮಾತ್ರ ಇನ್ನೂ ಸಿಕ್ಕಿಲ್ಲ. ಅವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.

ಇದನ್ನೂ ಓದಿ : Love story : ಪಿಯು ಹುಡುಗನ ಜತೆ ಹೈಸ್ಕೂಲ್‌ ಟೀಚರ್‌ ಲವ್!; ಭಾವಿ ಗಂಡನ ಕೈಲೇ ಸಿಕ್ಕಿಬಿದ್ರು!

ಹೇಮಾವತಿ ನದಿಯಲ್ಲಿ ಭಾರಿ ಎನ್ನುವಷ್ಟು ನೀರಿಲ್ಲವಾದರೂ ಕೆಲವು ಕಡೆ ಹರಿವಿದೆ. ಇದೀಗ ಅವರ ಶವ ಎಲ್ಲಿ ಸಿಕ್ಕಿ ಹಾಕಿಕೊಂಡಿದೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಕುಂದಾಪುರದಿಂದ ಮುಳುಗು ತಜ್ಞರನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

Exit mobile version