Site icon Vistara News

Corona threat | ಹೊರದೇಶದಲ್ಲಿ ಕೋವಿಡ್‌ ಹೆಚ್ಚಳ: ರಾಜಧಾನಿಯಲ್ಲಿ ಮತ್ತೆ ಮಾಸ್ಕ್‌ ಕಡ್ಡಾಯಕ್ಕೆ ಬಿಬಿಎಂಪಿ ಚಿಂತನೆ

Covid

ಬೆಂಗಳೂರು: ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಕೇಂದ್ರ ಸರಕಾರ ರಾಜ್ಯಗಳಿಗೆ ಅದಲ್ಲೂ ಮುಖ್ಯವಾಗಿ ಮಹಾನಗರಗಳಲ್ಲಿನ ಕೋವಿಡ್‌ ಪರಿಸ್ಥಿತಿಯ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಕೇಂದ್ರ ಆರೋಗ್ಯ ಸಚಿವರು ಈ ನಿಟ್ಟಿನಲ್ಲಿ ಸಭೆಯನ್ನೂ ನಡೆಸಿದ್ದಾದೆ. ಇದರ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಾಸ್ಕ್‌ ಕಡ್ಡಾಯವಾಗುವುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಮಂಗಳವಾರದ ಅಂಕಿ ಅಂಶಗಳನ್ನು ಪರಿಗಣಿಸುವುದಾದರೆ ರಾಜ್ಯದಲ್ಲಿ 1272 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರವೊಂದರಲ್ಲೇ 1228 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಪ್ರತಿದಿನ ೧೫ರಿಂದ ೨೦ ಪ್ರಕರಣಗಳು ದಾಖಲಾಗುತ್ತಿದ್ದು, ಇವುಗಳಲ್ಲಿ ಹೆಚ್ಚಿನವು ರಾಜಧಾನಿಯಲ್ಲೇ ದಾಖಲಾಗುತ್ತಿವೆ. ಸದ್ಯ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 0.5೭ರಷ್ಟಿದೆ.

ಬಿಬಿಎಂಪಿ ಈಗಾಗಲೇ ಮಾಸ್ಕ್‌ ಕಡ್ಡಾಯದ ಬಗ್ಗೆ ಕೋವಿಡ್‌ ಸಲಹಾ ಸಮಿತಿ ಜತೆಗೆ ಚರ್ಚೆ ನಡೆಸಿದೆ. ಹೊರದೇಶಗಳಲ್ಲಿ ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಬರುವವರ ಮೇಲೆ ನಿಗಾ ವಹಿಸುವ ಬಗ್ಗೆ ಮೊದಲ ಗಮನ ನೀಡಲಾಗುತ್ತಿದೆ. ಇದರ ಜತೆಗೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜನ ಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಮುಂದೇನು ಎನ್ನುವ ನಿಟ್ಟಿನಲ್ಲಿ ಬಿಬಿಎಂಪಿ ಚಿಂತನೆ ನಡೆದಿದೆ.

ಮಾಸ್ಕ್‌ ಕಡ್ಡಾಯದ ವಿಚಾರದಲ್ಲಿ ಹಂತ ಹಂತದ ಹೆಜ್ಜೆಗಳನ್ನು ಇಡಲು ಬಿಬಿಎಂಪಿ ಯೋಚಿಸುತ್ತಿದೆ. ಮೊದಲ ಹಂತದಲ್ಲಿ ಯಾವುದೇ ಫೈನ್ ಇಲ್ಲದೇ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ ಮಾರ್ಕೆಟ್, ಮಾಲ್, ಥಿಯೇಟರ್‌, ಪಾರ್ಕ್ ಸೇರಿದಂತೆ ಬಹುತೇಕ ಜಾಗದಲ್ಲಿ ಮಾಸ್ಕ್ ಕಡ್ಡಾಯಗೊಳ್ಳಲಿದೆ. ಅದರ ಜತೆಗೆ ಮೆಟ್ರೋ, ಬಸ್, ವಿಮಾನ ಯಾನಕ್ಕೂ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆ ಇದೆ.

ಹಾಗಿದ್ದರೆ ಬೇರೇನೇನು ಕ್ರಮ ಸಾಧ್ಯತೆ?
ಕೋವಿಡ್‌ ಪ್ರಕರಣಗಳ ಮೇಲೆ ನಿಗಾ ಇಡುವುದಕ್ಕಾಗಿ ಏನೇನು ಕ್ರಮ ಕೈಗೊಳ್ಳಬಹುದು ಎಂಬ ನಿಟ್ಟಿನಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಡಾ ತ್ರಿಲೋಕ್ ಚಂದ್ರ ಅವರ ನೇತೃತ್ವದಲ್ಲಿ ಒಂದು ಸಭೆ ನಡೆದಿದೆ. ಬುಧವಾರ ಸಂಜೆ ಉನ್ನತ ಮಟ್ಟದ ಮತ್ತೊಂದು ಸಭೆ ನಡೆಯಲಿದೆ.

-ಆರಂಭಿಕ ಹಂತದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಡಲು ತೀರ್ಮಾನ ಮಾಡಿದೆ. ಅಂದರೆ ಬರುವ -ಪ್ರಯಾಣಿಕರ ಪೈಕಿ ರ‍್ಯಾಂಡಮ್‌ ಆಗಿ ಶೇ. ೨ರಷ್ಟು ಜನರ ಟೆಸ್ಟ್‌ ಮಾಡಲಾಗುತ್ತದೆ.
-ಜನನಿಬಿಡ ಪ್ರದೇಶಗಳಲ್ಲಿ ಕಟ್ಡು ನಿಟ್ಟಿನ ನಿಯಮ ಜಾರಿ ಮತ್ತು ಜನ ಸೇರುವುದನ್ನು ತಡೆಯಲು ಕ್ರಮ
– ಅದ್ದೂರಿ ಹೊಸ ವರ್ಷದ ಆಚರಣೆಗೂ ಈ ಬಾರಿ ಬ್ರೇಕ್ ಸಾಧ್ಯತೆ
– ಈಗಾಗಲೇ ಕೇಂದ್ರ ಸರ್ಕಾರ ಮಾರ್ಗ ಸೂಚಿ ಬಿಡುಗಡೆ ಮಾಡಿದಂತೆ ಜಿನೋಮಿಕ್ ಸೀಕ್ವೆನ್ಸ್ ಬಗ್ಗೆ ಗಮನ

ಇದನ್ನೂ ಓದಿ | Covid-19 | ಚೀನಾದಲ್ಲಿ ಕೋವಿಡ್ ಉಲ್ಬಣಕ್ಕೆ ಒಮಿಕ್ರಾನ್ ಬಿಎಫ್.9 ವೇರಿಯಂಟ್ ಕಾರಣ!

Exit mobile version