Site icon Vistara News

Coronavirus: ಕೋವಿಡ್‌ ಆರ್ಭಟ ಎದುರಿಸಲು ರಾಜ್ಯದ ಆಸ್ಪತ್ರೆಗಳು ಸನ್ನದ್ಧ; ಹೇಗಿತ್ತು ಅಣಕು ಕಾರ್ಯಾಚರಣೆ?

#image_title

ಬೆಂಗಳೂರು: ರಾಜ್ಯ ಸೇರಿ ದೇಶದಲ್ಲಿ ನಿಧಾನವಾಗಿ ಕೋವಿಡ್‌ ಕೇಸ್‌ ಹೆಚ್ಚಳವಾಗುತ್ತಿದೆ. ಈಗಾಗಲೇ ಸಾಂಕ್ರಾಮಿಕ ಕೋವಿಡ್‌ ಹೊಡೆತಕ್ಕೆ (Coronavirus) ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮತ್ತೊಂದು ಅಲೆಯ ಭೀತಿ ಹೆಚ್ಚಾಗಿದ್ದು, ಇದನ್ನು ಎದುರಿಸಲು ವಾರಿಯರ್ಸ್‌ ಜತೆಗೆ ಆರೋಗ್ಯ ಇಲಾಖೆ ಸನ್ನದ್ಧವಾಗಿವೆ. ಇದರ ಭಾಗವಾಗಿ ರಾಜ್ಯಾದ್ಯಂತ ಸೋಮವಾರ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.

ರಾಜ್ಯದಲ್ಲಿ ಕೋವಿಡ್‌ ರೂಪಾಂತರ ತಳಿಯು ಉಲ್ಬಣಿಸುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್ ಆಗಿದ್ದು, ಮೊದಲ- ಎರಡನೇ ಅಲೆಯಲ್ಲಿ ಐಸಿಯು ಬೆಡ್‌, ಆಕ್ಸಿಜನ್ ಇಲ್ಲದೆ ಜನರು ನರಳುವಂತಾಗಿದ್ದರಿಂದ ಅಂತ ಪರಿಸ್ಥಿತಿ ಮರುಕಳಿಸಬಾರದು ಎಂಬ ಎಚ್ಚರಿಕೆ ವಹಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿರುವ ಎಲ್ಲ ಆಸ್ಪತ್ರೆಗಳು ಕೋವಿಡ್‌ ಅಲೆ ಎದುರಿಸಲು ಸಿದ್ಧವಾಗುತ್ತಿದ್ದು, ಎರಡು ದಿನದ ಮಾಕ್‌ ಡ್ರಿಲ್‌ಗೆ ಸಜ್ಜಾಗಿದೆ.

ಆಸ್ಪತ್ರೆಯಲ್ಲಿ ಏಕಕಾಲಕ್ಕೆ ಸೋಂಕಿತರು ಬಂದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು? ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್, ವೈದ್ಯಕೀಯ ಸಿಬ್ಬಂದಿ ಲಭ್ಯತೆಗಳ ಬಗ್ಗೆ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು.‌ ಬೆಂಗಳೂರಿನ ಆಸ್ಪತ್ರೆಗಳಾದ ಸಿವಿ ರಾಮನ್ ಆಸ್ಪತ್ರೆ, ಕೆಸಿ ಜನರಲ್‌, ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ಬೌರಿಂಗ್‌ ಆಸ್ಪತ್ರೆ ಸೇರಿದಂತೆ ಜಯನಗರ ಸಾರ್ವಜನಿಕ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆಯಲ್ಲಿ ಮಾಕ್‌ ಡ್ರಿಲ್‌ ನಡೆಸಲಾಯಿತು.

ಸಿವಿ ರಾಮನ್‌ ಆಸ್ಪತ್ರೆಯಲ್ಲಿ ಮಾಕ್‌ ಡ್ರಿಲ್‌ ವೀಕ್ಷಿಸುತ್ತಿರುವುದು

ವಿವಿಧ ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್‌

ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಈ ಹಿಂದಿನ ಅನುಭವದ ಆಧಾರದಲ್ಲಿ ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಮಾಕ್‌ ಡ್ರಿಲ್‌ ಅವುಗಳಲ್ಲಿ ಒಂದು. ಇದು ನಮ್ಮ ಸಿದ್ಧತೆ ಎಷ್ಟು ಎಂದು ಪರಿಶೀಲಿಸಲು ನೆರವಾಗುತ್ತದೆ. ಇದು ನಮ್ಮ ಕೊರತೆಗಳನ್ನು ಕಂಡುಕೊಳ್ಳಲು, ಅವುಗಳನ್ನು ಸರಿಪಡಿಸಲು ನೆರವಾಗಲಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಯಂತೆ ರಾಜ್ಯಾದ್ಯಂತ ಮಾಕ್‌ ಡ್ರಿಲ್‌ ಅಥವಾ ಅಣುಕು ಪ್ರದರ್ಶನವನ್ನು ನಡೆಸಲಾಯಿತು.

ಹೇಗೆ ಇರಲಿದೆ ಮಾಕ್‌ ಡ್ರಿಲ್‌?

ನಿಗದಿಪಡಿಸಲಾದ ಆಸ್ಪತ್ರೆಗೆ ಅಣಕು ರೋಗಿಯನ್ನು ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಯಿಂದ ಹಿಡಿದು ಆಕ್ಸಿಜನ್‌, ಐಸಿಯುವರೆಗೂ ಎಲ್ಲ ಪ್ರಕ್ರಿಯೆಗಳನ್ನು ನೆರವೇರಿಸುವ ಮೂಲಕ ಈ ಕಾರ್ಯಾಚರಣೆ ನಡೆಯುತ್ತದೆ.

ಇದನ್ನೂ ಓದಿ: Bangalore Airport: ಮಲೇಶಿಯಾ ಪ್ರಯಾಣಿಕರ ಒಳಉಡುಪಿನಲ್ಲಿತ್ತು ಫಳ ಫಳ ಹೊಳೆಯುವ ಚಿನ್ನ!

ಎಲ್ಲಾ ಜಿಲ್ಲೆಗಳ ಆರೋಗ್ಯ ಸೌಲಭ್ಯಗಳ ಲಭ್ಯತೆ, ಪ್ರತ್ಯೇಕ ಹಾಸಿಗೆಗಳ ಸಾಮರ್ಥ್ಯ, ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳು, ಐಸಿಯು ಹಾಸಿಗೆಗಳು, ವೆಂಟಿಲೇಟರ್ ಬೆಂಬಲಿತ ಹಾಸಿಗೆಗಳು, ವೈದ್ಯರು, ದಾದಿಯರು, ಅರೆವೈದ್ಯರು, ಆಯುಷ್ ವೈದ್ಯರ ಅತ್ಯುತ್ತಮ ಲಭ್ಯತೆ ಮುಂತಾದ ಅಂಶಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆಯುತ್ತದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರ ಮುಂಚೂಣಿ ಕಾರ್ಯಕರ್ತರು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ.

Exit mobile version