ಬೆಂಗಳೂರು/ಬೆಳಗಾವಿ: ನೋವೆಲ್ ಕೊರೊನಾ ವೈರಸ್ (Coronavirus) ಚೀನಾದಲ್ಲಿ ಬಹುವೇಗವಾಗಿ ಹರಡುತ್ತಿದೆ. ರಾಜ್ಯದಲ್ಲಿ ಸದ್ಯ ಸೋಂಕಿನ ತೀವ್ರತೆ ಕಡಿಮೆ ಇದ್ದರೂ, ಹೊಸ ತಳಿಯ ಹರಡುವಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಒಮಿಕ್ರಾನ್‌ನ ಉಪತಳಿ BF.7 ಸೋಂಕು ಹರಡುವ ಭೀತಿ ಇದ್ದು, ಇದರ ತೀವ್ರತೆ ತಪ್ಪಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಸಚಿವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸೋಮವಾರ ಮಧ್ಯಾಹ್ನ ಸಭೆ ನಡೆಸಲಿದ್ದಾರೆ.
ಬೆಳಗಾವಿಯಲ್ಲಿ ಸಭೆ ನಡೆಯಲಿದ್ದು, ಕೋವಿಡ್ ಹತೋಟಿಗೆ ತರಲು ಮುಂಜಾಗ್ರತಾ ಕ್ರಮವಹಿಸಲು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಎಂ ಚರ್ಚೆ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ವೈರಸ್ ಏಕಕಾಲಕ್ಕೆ ಸ್ಫೋಟಗೊಳ್ಳುವ ಅಪಾಯ ಇದೆ. ಹೀಗಾಗಿ ಬೆಂಗಳೂರಿಗೆ ಪ್ರತ್ಯೇಕ ಗೈಡ್‌ಲೈನ್ಸ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಯಾವೆಲ್ಲ ರೂಲ್ಸ್ ಮಾಡಬಹುದು?
– ಜನ ಸೇರುವ ಪ್ರದೇಶಗಳು, ಹೋಟೆಲ್, ಪಬ್, ಮಾರುಕಟ್ಟೆ, ಸ್ಲಂಗಳ ಮೇಲೆ ತೀವ್ರ ನಿಗಾ ಇಡಲು ತಯಾರಿ.
– ಬೆಂಗಳೂರಿನಲ್ಲಿ ಕೋವಿಡ್ ಸೆಂಟರ್‌ಗಳು ರೀ ಓಪನ್.
– ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ನಿರ್ಮಾಣಕ್ಕೆ ಸಿದ್ಧತೆ.
– ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ.
– ಸಿಬ್ಬಂದಿ ಹಾಗೂ ವೈದ್ಯರನ್ನು ಸ್ಟ್ಯಾಂಡ್ ಬೈನಲ್ಲಿ ಇಟ್ಟುಕೊಳ್ಳುವುದು.
– ವಿದೇಶಿ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ.
– ಬೂಸ್ಟರ್ ಡೋಸ್ ಸರ್ಟಿಫಿಕೇಟ್ ಕಡ್ಡಾಯದ ಆದೇಶ ಹೊರಡಿಸುವ ಬಗ್ಗೆ ಚಿಂತನೆ.
– ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕ್ವಾರಂಟೈನ್‌ಗೆ ಪ್ರತ್ಯೇಕ ವ್ಯವಸ್ಥೆ.
– ಕೋವಿಡ್ ತಪಾಸಣಾ ಕೌಂಟರ್‌ಗಳನ್ನು ಹೆಚ್ಚುವರಿಯಾಗಿ ತೆರೆಯುವ ಬಗ್ಗೆ ಚಿಂತನೆ.
– ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳಿಂದ ಬಂದ ಪ್ರಯಾಣಿಕರ ಮೇಲೆ ನಿಗಾ.
ನ್ಯೂ ಇಯರ್‌ಗೆ ಬೀಳುತ್ತಾ ಬ್ರೇಕ್?
ನ್ಯೂ ಇಯರ್ ಸೆಲೆಬ್ರೇಷನ್‌ಗೆ ಲಗಾಮು ಹಾಕುವ ಸಾಧ್ಯತೆ ಇದೆ. ಸೋಂಕು ಜನಸಂದಣಿಯಲ್ಲಿ ಬಹುಬೇಗವಾಗಿ ಹರಡುತ್ತದೆ. ಪಾರ್ಟಿ ವೇಳೆ ಜನ ಗುಂಪು ಸೇರುತ್ತಾರೆ. ಇದಕ್ಕಾಗಿ ಸಮಯವನ್ನು ನಿಗದಿ ಮಾಡಬಹುದು. ಮಾರ್ಕೆಟ್, ಮಾಲ್, ದೇವಸ್ಥಾನ, ಪಾರ್ಕ್‌ಗಳಲ್ಲಿ ಜನ ಗುಂಪುಗೂಡದಂತೆ ಸೂಚಿಸಬಹುದು.
ಯಾವುದಕ್ಕೆ ನಿರ್ಬಂಧ- ವಿನಾಯಿತಿ ಇರಲಿದೆ?
ಕಡ್ಡಾಯ ಲಸಿಕೆಗೆ ಬಗ್ಗೆ ರೂಲ್ಸ್ ಜಾರಿ ಮಾಡುವ ಸಾಧ್ಯತೆ ಇದ್ದು, ಬೂಸ್ಟರ್ ಡೋಸ್ ಉತ್ತೇಜನಕ್ಕೆ ಕ್ರಮ ವಹಿಸಲಾಗುತ್ತದೆ. ಬೂಸ್ಟರ್ ಡೋಸ್ ಇಲ್ಲದಿದ್ದರೆ ಮಾಲ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ಪ್ರವೇಶ ನಿರಾಕರಿಸಬಹುದು. ವಿದೇಶದಿಂದ ಬರುವ ಅಪಾರ್ಟ್‌ಮೆಂಟ್ ನಿವಾಸಿಗಳ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಬಹುದು. ವ್ಯಾಪಾರ ವಹಿವಾಟು ಯಥಾಸ್ಥಿತಿ ಇರಲಿದೆ.
ಇದನ್ನೂ ಓದಿ | Coronavirus | ಚೀನಾದಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ಬಂದ ವ್ಯಕ್ತಿಗೆ ಕೊರೊನಾ