ಬೆಂಗಳೂರು: ಖಾಸಗಿ ಕಾಲೇಜಿನ ಯುವತಿಯೊಬ್ಬಳು (18) ಬೆಲ್ಲಿ ಫ್ಯಾಟ್ ರೆಡ್ಯೂಸ್‌ಗಾಗಿ (Belly Fat Reduce) ಕಾಸ್ಟೆಟಿಕ್ ಸೆಂಟರ್‌ಗೆ (Cosmetic Centre) ಹೋಗಿದ್ದಾಳೆ. ಅಲ್ಲಿ ಅರೆ ನಗ್ನವಾಗಿದ್ದ ಆಕೆಯ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ (cc camera) ರೆಕಾರ್ಡ್ ಆಗಿದೆ ಎಂದು ಆರೋಪಿಸಿ ಠಾಣೆ ಮೆಟ್ಟಿಲೇರಿದ್ದಾಳೆ.
ಕಳೆದ ಮೇ 20ರಂದು ಮಧ್ಯಾಹ್ನ 2.30ರ ಸುಮಾರಿಗೆ ಯುವತಿ ತನ್ನ ಅಣ್ಣನ ಜತೆ ಬೆಲ್ಲಿ ಫ್ಯಾಟ್ ರೆಡ್ಯೂಸ್ ಮಾಡಿಸಿಕೊಳ್ಳುವ ಸಲುವಾಗಿ ನವರಂಗ್ ಬಳಿಯಿರುವ ಡಾ. ಡಾ. ಶೆಟ್ಟಿಸ್ ಕಾಸ್ಟೆಟಿಕ್ ಸೆಂಟರ್‌ಗೆ ಹೋಗಿದ್ದಾಳೆ. ಈ ವೇಳೆ ವೈದ್ಯ ಡಾ.ಶೆಟ್ಟಿ ಇದ್ದ ಪರೀಕ್ಷಾ ಕೊಠಡಿಗೆ ಯುವತಿ ಭೇಟಿ ನೀಡಿದ್ದಾರೆ. ಆಗ ಅಲ್ಲಿ ವೈದ್ಯರೊಂದಿಗೆ ಇಬ್ಬರು ನರ್ಸ್ ಪರೀಕ್ಷಿಸಿದ್ದು, ವೈದ್ಯರ ಸಲಹೆಯ ಮೇರೆಗೆ ಧರಿಸಿದ್ದ ಟಾಪ್‌ನ್ನು ತೆಗೆದಿದ್ದಾರೆ.
ವೈದ್ಯರ ಪರೀಕ್ಷೆ ಮುಗಿಸಿ ನಂತರ ಹೊರ ಬರುವಾಗ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಇರುವುದನ್ನು ನೋಡಿದ್ದಾಳೆ. ಮನೆಗೆ ವಾಪಸ್ ಆಗಿದ್ದ ಯುವತಿಗೆ ಬಟ್ಟೆ ತೆಗೆದಿರುವುದು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿರಬಹುದಾ ಎಂಬ ಅನುಮಾನ ಮೂಡಿದೆ. ಹೀಗಾಗಿ ಕೂಡಲೇ ಆಕೆ ತನ್ನ ಅಣ್ಣನಿಗೆ ವಿಚಾರ ತಿಳಿಸಿದ್ದಾಳೆ.
ಯುವತಿಯ ಅಣ್ಣ ಆಸ್ಪತ್ರೆಗೆ ಫೋನ್ ಮಾಡಿ ಸಿಸಿ ಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ, ಆಪರೇಷನ್ ರೂಮಿನಲ್ಲಿ ಸಿಸಿ ಟಿವಿ ಅಳವಡಿಸಲು ಅಧಿಕಾರ ಇದ್ದು, ಸರ್ಕಾರದ ಆದೇಶ ಇದೆ. ವಿಡಿಯೊವನ್ನು ಡಿಲೀಟ್ ಮಾಡಲು ಆಗುವುದಿಲ್ಲ ಎಂದು ಸಬೂಬು ನೀಡಿದ್ದಾರೆ.
ಇದನ್ನೂ ಓದಿ: Video Viral: ಒಂದು ಟಿಸಿಗೆ ಬರೀ ನೂರೇ ರೂಪಾಯಿ, ಕಾಸು ಕೊಟ್ರಷ್ಟೇ ಇಲ್ಲಿ ಕಮಾಯಿ; ಈತ ದುರ್ಗದ ಲಂಚ ಪುರುಷ!
ಸದ್ಯ ಯುವತಿ ಖಾಸಗಿತನಕ್ಕೆ ಧಕ್ಕೆ ಬಂದ ಕಾರಣ ಆಸ್ಪತ್ರೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಪರೀಕ್ಷಾ ಕೊಠಡಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ IT ಆ್ಯಕ್ಟ್ 2008 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ