ರಾಯಚೂರು: ರೈತರು ನೈಸರ್ಗಿಕ ಕಾರಣಗಳಿಂದಾಗಿ ಸಂಕಷ್ಟದಲ್ಲಿರುವ ಕಾಲದಲ್ಲೇ ದುಷ್ಕರ್ಮಿಗಳೂ ಆಟವಾಡಿ ಬದುಕನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳುತ್ತಾರೆ. ರಾಯಚೂರು ತಾಲೂಕಿನಲ್ಲಿ ನಡೆದಿರುವುದು ಇದೇ. ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ರಾಶಿ ಹಾಕಲಾಗಿದ್ದ ಹತ್ತಿಗೆ ಕಿಡಿಗೇಡಿಗಳು ಕೊಳ್ಳಿ ಇಟ್ಟಿದ್ದು (Cotton burnt), ದೊಡ್ಡ ಪ್ರಮಾಣದ ಹತ್ತಿ ಸುಟ್ಟು ಕರಕಲಾಗಿದೆ.
ಮೌಲಾಲಿ, ನಬಿಸಾಬ್, ಸುರೇಶ್ ಹಾಗೂ ತಿಪ್ಪಣ್ಣರಿಗೆ ಸೇರಿದ ಹತ್ತಿ ಇದಾಗಿದ್ದು, ಅವರು ಒಳ್ಳೆಯ ಬೆಲೆ ಬಂದಾಗ ಮಾರೋಣ ಎಂದು ಯೋಚಿಸಿ ಜತೆಯಾಗಿ ಸಂಗ್ರಹಿಸಿಟ್ಟಿದ್ದರು. ಸುಮಾರು 500 ಕ್ವಿಂಟಲ್ ಹತ್ತಿ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದೆ.
ಈ ರೈತರು ಇತ್ತೀಚೆಗೆ ಹತ್ತಿ ಬಿಡಿಸಿ ಇಟ್ಟಿದ್ದರು. ಆದರೆ, ಕುಸಿತ ಕುಸಿತ ಇರುವುದರಿಂದ ಒಳ್ಳೆಯ ಬೆಲೆ ಬಂದಾಗ ಮಾರೋಣ ಎಂದು ನಾಲ್ವರೂ ಸೇರಿ ಒಂದೇ ಕಡೆ ಹತ್ತಿಯನ್ನ ಕೂಡಿಟ್ಟಿದ್ದರು. ಒಂದೇ ಹೊಲದಲ್ಲಿ ನಾಲ್ಕೂ ಜನರ ಹತ್ತಿ ಸಂಗ್ರಹವಿತ್ತು. ಸುಮಾರು ೫೦೦ ಕ್ವಿಂಟಾಲ್ ಆಗಬಹುದು ಎಂದು ಅಂದಾಜಿಸಲಾಗಿದೆ.
ಮಂಗಳವಾರ ಬೆಳಗ್ಗೆ ಹತ್ತಿ ಏಕಾಏಕಿ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರಾದರೂ ಅಷ್ಟು ಹೊತ್ತಿಗೆ ಎಲ್ಲವೂ ಸುಟ್ಟು ಹೋಗಿತ್ತು. ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Suicide Case: ಹೆಂಡ್ತಿ ಬಿಟ್ಟು ಪ್ರಿಯತಮೆ ಜತೆ ಪರಾರಿಯಾದವನು ಶವವಾಗಿ ಪತ್ತೆ; ಕುಟುಂಬಸ್ಥರಿಂದ ಕೊಲೆ ಶಂಕೆ