Site icon Vistara News

ಡೆತ್‌ನೋಟ್‌ ಬರೆದಿಟ್ಟು 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ; ಮನನೊಂದಿದ್ದು ಯಾಕೆ?

suicide case

ಬೆಂಗಳೂರು: ಡೆತ್‌ ನೋಟ್ (Death Note) ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಆರ್. ಆಯಿಶಾ ಮೃತ ದುರ್ದೈವಿ.

ಬಿನ್ನಿ ಮಿಲ್ ಸಮೀಪ ಇರುವ ಪೊಲೀಸ್ ಕ್ವಾರ್ಟರ್ಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳ್ಳಾರಿ ಮೂಲದ ಆಯಿಶಾ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಎಸ್‌.ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಳು ಎಂದು ತಿಳಿದು ಬಂದಿದೆ. ಇನ್ನು ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಯಾರೂ ಕಾರಣ ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದಿದೆ. ನಾನೇ ಸ್ವ ಇಚ್ಛೆಯಿಂದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್‌ನೋಟ್‌ ಬರೆದಿದ್ದಾಳೆ.

ಬಿ.ಆರ್. ಆಯಿಶಾ ಮತ್ತು ಡೆತ್‌ನೋಟ್‌

ಡೆತ್‌ನೋಟ್‌ನಲ್ಲಿ ಏನಿದೆ?

ನಾನು ನನ್ನ ಕುಟುಂಬಕ್ಕೆ ಹಾಗೂ ಬೀಮೇಶ್ ನಾಯಕ್ ಮೇಲೆ‌ ದೂರು ನೀಡಿದ್ದೆ. ನಾನು ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟಿದ್ದೇನೆ. ಬೀಮೇಶ್ ನಾಯಕ್ ತುಂಬ ಸೂಕ್ಷ್ಮ ಮತ್ತು ಮುಗ್ದ ವ್ಯಕ್ತಿ ಆಗಿದ್ದಾನೆ. ಅವರ ಮತ್ತು ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇರುವುದಿಲ್ಲ. ನಾನು ಮಾಡಿದ ಈ ಸುಳ್ಳು ಕೇಸಿನಿಂದಾಗಿ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ, ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಭೀಮೇಶ್ ನಾಯಕ್ ನನ್ನ ಆತ್ಮೀಯ ಸ್ನೇಹಿತ, ಆ್ಯಮ್ ವೆರಿ ಸಾರಿ.. ಐ ಲವ್ ಯೂ ಸೋ ಮಚ್ ಭೀಮೇಶ್ ಎಂದು ಪತ್ರದಲ್ಲಿ ಬರೆದಿದ್ದಾಳೆ.

ಈ ನನ್ನ ಆತ್ಮಹತ್ಯೆಗೂ, ಬೀಮೇಶ್ ನಾಯಕನಿಗೂ ಯಾವುದೇ ಸಂಬಂಧ ಇಲ್ಲ. ಬೀಮೇಶ್ ಮಾಮ ಇವತ್ತು ನೀ ಆಫೀಸಿಗೆ ಹೋದಾಗ ಹಾಲು‌ ಕಾಯಿಸಿದರೂ ಕುಡಿಯದೆ ಹೋಗಿರುವೆ. ಥ್ಯಾಂಕ್ ಯೂ ಸೋ ಮಚ್ ಬೀಮೇಶ್ ನನ್ನನ್ನು ಕ್ಷಮಿಸಿದ್ದಕ್ಕೆ, ನೀನು ತುಂಬ ದೊಡ್ಡ ವ್ಯಕ್ತಿ. ಆ ದೇವರು ನಿನಗೆ ಒಳ್ಳೆಯದು ಮಾಡಲಿ ಮುದ್ದು. ನೀ ಇನ್ನೂ ಸ್ಟ್ರಾಂಗ್ ಆಗಿ ಚೆನ್ನಾಗಿ ತಿನ್ನು, ನಾನು ನಿನ್ನ ಜತೆ ತುಂಬಾ ಖುಷಿಯಾಗಿದ್ದೆ. ಆ ಸಂತೋಷ ಎಲ್ಲ ನನಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.. I will miss you, May god bless you Dear, ನಮ್ಮ ಅಪ್ಪನಿಗೆ SORRY ಹೇಳು ಬೀಮೇಶ್, I am very sorry ಬೀಮೇಶ್ ನಿನ್ನನ್ನು ಜೈಲಿಗೆ ಕಳಿಸಿದ್ದಕ್ಕೆ. ಇಂತಿ‌ ನಿನ್ನ ಪ್ರೀತಿಯ ಆಯಿಶಾ ಬಿ.ಆರ್ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಿಐಡಿ ಸಬ್‌ ಇನ್ಸ್‌ಪೆಕ್ಟರ್‌ಗೆ ಕಂಟಕ

ಭಾನುವಾರ ಬೆಳಗ್ಗೆ 8.30 ರ ಸುಮಾರಿಗೆ ಸಿರ್ಸಿ ಸರ್ಕಲ್ ಬಳಿಯ ಪೊಲೀಸ್ ಕ್ವಾರ್ಟರ್ಸ್‌ನ ವೃಷಭಾವತಿ ಬ್ಲಾಕ್‌ನ ಏಳನೇ ಮಹಡಿಯಿಂದ ಬಿದ್ದು ಆಯಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳ್ಳಾರಿ ಮೂಲದ ಆಯಿಶಾ ಮಂಗಳೂರಲ್ಲಿ ಓದುತ್ತಿದ್ದವಳು ಈಗ ಬೆಂಗಳೂರಿಗೆ ಬಂದು ಮೃತಪಟ್ಟಿದ್ದಾಳೆ. ಇದೇ ಸಾವು ಈಗ ಹತ್ತಾರು ಅನುಮಾನ ಹುಟ್ಟು ಹಾಕಿದ್ದು, ಪೊಲೀಸ್ ಸಬ್ ಇನ್ಸ್ ಪೆಕ್ಟರ್‌ಗೆ ಕಂಟಕವಾಗುತ್ತಿದೆ.

ಎರಡ್ಮೂರು ವರ್ಷದ ಹಿಂದೆ ಸಿಐಡಿನಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಭೀಮೇಶ್ ನಾಯಕ್‌ರ ಪರಿಚಯವಾಗಿತ್ತು. ಇದೇ ಪರಿಚಯ ಪ್ರೇಮಕ್ಕೆ ತಿರುಗಿ ನಂತರ ಮನಸ್ತಾಪ ಕೂಡ ಉಂಟಾಗಿತ್ತು. ಆಕೆಯೇ ಭೀಮೇಶ್ ಮೇಲೆ ದೂರು ನೀಡಿದ್ದಳು. ಪೋಕ್ಸೋ ಕೇಸ್‌ನಲ್ಲಿ ಭೀಮೇಶ್ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದರು. ಇಷ್ಟೆಲ್ಲಾ ಆದರೂ ಆತ ಜೈಲಿನಿಂದ ಹೊರಬಂದ ಮೇಲೆ ಮತ್ತೆ ಇಬ್ಬರೂ ಒಂದಾಗಿದ್ದರು.

ಆಗಾಗ ಆಯಿಶಾ ಮಂಗಳೂರಿನಿಂದ ಬೆಂಗಳೂರಿನ ಸಿರ್ಸಿ ಸರ್ಕಲ್ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್‌ನ ಭೀಮೇಶ್ ಮನೆಗೆ ಬಂದು ಉಳಿದುಕೊಳ್ಳುತ್ತಿದ್ದಳು. ಹೀಗೆ ಕಳೆದ ಏಪ್ರಿಲ್ 24ರಂದು ಬೆಂಗಳೂರಿಗೆ ಬಂದಿದ್ದ ಆಯಿಶಾ, ನೇರವಾಗಿ ಭೀಮೇಶ್ ಇದ್ದ ಕ್ವಾರ್ಟರ್ಸ್‌ಗೆ ಹೋಗಿದ್ದಳು. ಭಾನುವಾರ (ಏ.30) ಬೆಳಗ್ಗೆ 8.30ಕ್ಕೆ ಭೀಮೇಶ್ ಊರಿಗೆ ತೆರಳಲು ಸಜ್ಜಾಗಿದ್ದ ಈ ವೇಳೆ ಆಕೆ ಕೂಡ ಹೊರಡುವುದಾಗಿ ಹೇಳಿ ಬಳಿಕ ನಾನು ಬರುವುದಿಲ್ಲ ಎಂದು ಮನೆಗೆ ಹೋಗಿದ್ದಾಳೆ. ನಂತರ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Karnataka Election 2023: ಮಂಡ್ಯದಲ್ಲಿ ಬುಲ್ಡೋಜರ್‌ ತಂದು ನೆಲಸಮ ಮಾಡ್ತೇನೆ ಅಂದರಾ ಯೋಗಿ?: ಎಚ್.ಡಿ. ಕುಮಾರಸ್ವಾಮಿ

ಯುವತಿ ಸಾಯುವ ಮುನ್ನ ಆಕೆಯ ಕೈ ಮೇಲೆ ಭೀಮೇಶ್‌ನ ಹೆಸರು ಮತ್ತು ಆತನ ಫೋನ್ ನಂಬರ್ ಅನ್ನು ಕೂಡ ಬರೆದುಕೊಂಡಿದ್ದಾಳೆ. ಸದ್ಯ ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version