Site icon Vistara News

Cow Slaughter: ಕಾಫಿ ತೋಟದಲ್ಲಿ ಗೋವುಗಳ ಹತ್ಯೆ; ಅನುಮಾನ ಬಾರದಂತೆ ಮಣ್ಣಿನಡಿ ಕಳೇಬರ ಹೂತು ಹಾಕಿದ ಪಾಪಿಗಳು

ಕೊಡಗಿನಲ್ಲಿ ಗೋ ಹತ್ಯೆ

ಮಡಿಕೇರಿ: ಗೋ ಹತ್ಯೆ (Cow Slaughter) ನಿಷೇಧವಾಗಿದ್ದರೂ ಕೊಡಗು ಜಿಲ್ಲೆಯಲ್ಲಿ ಗೋವುಗಳ ಹತ್ಯೆ ಮಾತ್ರ ನಿಂತಿಲ್ಲ. ಇಲ್ಲಿನ ಸೋಮವಾರಪೇಟೆ ತಾಲೂಕಿನ ಗರಗಂದೂರು ‘ಬಿ’ ಸಮೀಪದ ಹಾರಂಗಿ ಬ್ಯಾಕ್ ವಾಟರ್‌ನ ತೋಟದಲ್ಲಿ ಗೋ ಹತ್ಯೆಯ ಕುರುಹು ಪತ್ತೆಯಾಗಿದೆ.

ಗ್ರಾಮದ ಲತೀಫ್ ಎಂಬಾತನ ಕಾಫಿ ತೋಟದಲ್ಲಿ ಎರಡು ದಿನಗಳ ಹಿಂದೆ 2 ಗೋವುಗಳ ಹತ್ಯೆ ನಡೆಸಿ ಬಳಿಕ ಕಳೇಬರವನ್ನು ಮಣ್ಣಿನಡಿ ಹೂತು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳಕ್ಕೆ ಹಿಂದು ಜಾಗರಣ ವೇದಿಕೆಯ ಹೊಸತೋಟ ಮತ್ತು ಮಾದಾಪುರ ಭಾಗದ ಕಾರ್ಯಕರ್ತರು ಭೇಟಿ ನೀಡಿ ಘಟನೆಯನ್ನು ಖಂಡಿಸಿದ್ದಾರೆ.

ಅಲ್ಲದೆ ಪೊಲೀಸರನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿದಾಗ, ಗೋವಿನ ಚರ್ಮ ಹಾಗೂ ಉದರದೊಳಗಿನ ಭಾಗಗಳನ್ನು ಮಣ್ಣಿನಡಿ ಹೂತು ಹಾಕಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಪಶುವೈದ್ಯರನ್ನು ಕರೆಸಿ ಹೆಚ್ಚಿನ ತನಿಖೆ ನಡೆಸಲಾಯಿತು.

ಕೊಡಗು ಜಿಲ್ಲೆಯಲ್ಲಿ ಪದೇ ಪದೆ ಗೋಹತ್ಯೆ, ಗೋಮಾಂಸ ಮಾರಾಟ, ಗೋವುಗಳ ಅಕ್ರಮ ಕಳ್ಳಸಾಗಾಣಿಕೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಅವುಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದೆಯೆಂದು ಹಿಂದು ಜಾಗರಣ ವೇದಿಕೆಯ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Murder Case: ಗರ್ಭಿಣಿ ಪತ್ನಿಯ ಶೀಲ ಶಂಕಿಸಿ ಉಸಿರುಗಟ್ಟಿಸಿ ಕೊಂದಿದ್ದ ಪಾಪಿ ಪಶ್ಚಿಮ ಬಂಗಾಳದಲ್ಲಿ ಸೆರೆ

ಪ್ರಕರಣದ ಸಮಗ್ರ ತನಿಖೆ ನಡೆಸಿ ಗೋಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ತಪ್ಪಿದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಗೋಹತ್ಯೆ ಪ್ರಕರಣದ ಬಗ್ಗೆ ಸ್ಥಳೀಯ ಸುಂಟಿಕೊಪ್ಪ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version