Site icon Vistara News

Cow Smugglers : ಮಿಡ್‌ ನೈಟ್‌ ಗೋವು ಕಳ್ಳರನ್ನು ಚೇಸ್‌ ಮಾಡಿದ ಗ್ರಾಮಸ್ಥರು!

cow theft in nelamangala

ನೆಲಮಂಗಲ: ನೆಲಮಂಗಲ ಆಸುಪಾಸಿನಲ್ಲಿ ಗೋವು ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮನೆ ಮುಂದಿದ್ದ ಜಾನುವಾರು ಕಳ್ಳರ ಪಾಲಾಗುತ್ತಿದ್ದವು. ಇದು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಸಾಲಸೋಲ ಮಾಡಿ ಹಸುಗಳನ್ನು ಖರೀದಿಸಿದರೆ, ಕಳ್ಳರು ಕದ್ದು ಹೋಗುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಹೀಗಾಗಿ ಗ್ರಾಮದಲ್ಲಿ ಯುವಕರೇ ಸೇರಿ ಕಳ್ಳರನ್ನು ಬಗ್ಗು ಬಡಿಯಲು ಮುಂದಾಗಿದ್ದರು. ಅದರಂತೆ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಟ್ಟಪ್ಪನ ಪಾಳ್ಯದಲ್ಲಿ ತಡರಾತ್ರಿ ಗೋವುಗಳ ಕದ್ದು ಕಳ್ಳರು ಎಸ್ಕೇಪ್‌ ಆಗುತ್ತಿದ್ದರು. ಈ ಬಗ್ಗೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕಳ್ಳರನ್ನು ಚೇಸ್‌ ಮಾಡಿ ಗೋವುಗಳನ್ನು ರಕ್ಷಿಸಿದ್ದಾರೆ.

ಖತರ್ನಾಕ್‌ ಕಳ್ಳರು ತಮ್ಮ ಕೃತ್ಯಕ್ಕೆ ಟಿಟಿ ವಾಹನವನ್ನು ಬಳಸುತ್ತಿದ್ದರು. ಟಿಟಿ ವಾಹನದೊಳಗೆ ಎಲ್ಲ ಸೀಟ್‌ಗಳನ್ನು ತೆಗೆದು, ಹೊರಗಿನವರಿಗೆ ಅನುಮಾನಬಾರದಂತೆ ಕರ್ಟನ್‌, ಲೈಟಿಂಗ್ಸ್‌ ಎಲ್ಲವನ್ನು ಹಾಕುತ್ತಿದ್ದರು. ತಿಂಗಳ ನಡುವೆ ಮಧ್ಯರಾತ್ರಿಯಂದು ಬರುವ ಇವರು ಕೈಯಲ್ಲಿ ಚಾಕು ಹಿಡಿದು ಮನೆ ಹೊರಗೆ ಕಟ್ಟಿಹಾಕುತ್ತಿದ್ದ ಹಸುಗಳನ್ನು ಎಳೆದುಕೊಂಡು ಟಿಟಿಯೊಳಗೆ ತುಂಬಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: Robbery Case : ಫಾರ್ಮಸಿಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದವನು ಅರೆಸ್ಟ್‌

ಟಿಟಿ ವಾಹನದಲ್ಲಿ ಗೋವುಗಳ ಕದ್ದು ಹೋಗುತ್ತಿದ್ದ ಕಳ್ಳರು, ಜತೆಗೆ ಚೂರಿ ಪತ್ತೆ

ಹೀಗೆ ಕಳೆದ ರಾತ್ರಿ ಜಗದೀಶ್ ಹಾಗು ವಸಂತ ಎಂಬಾರಿಗೆ ಸೇರಿದ್ದ ಗೋವುಗಳನ್ನು ಕದ್ದು ಪರಾರಿ ಆಗುವಾಗ, ಗ್ರಾಮಸ್ಥರು ಸುತ್ತುವರೆದಿದ್ದಾರೆ. ಗ್ರಾಮಸ್ಥರಿಗೆ ಚಾಕು ಚೋರಿ ತೋರಿಸಿ ಬೆದರಿಸಿದ್ದಾರೆ. ಈ ವೇಳೆ ಟಿಟಿ ವಾಹನಕ್ಕೆ ಗ್ರಾಮಸ್ಥರು ಕಲ್ಲು ತೂರಾಟ ಮಾಡಿದ್ದಾರೆ. ಬಳಿಕ ತೋಟವೊಂದರಲ್ಲಿ ಗೋವುಗಳಿಂದ ಟಿಟಿ ವಾಹನವನ್ನು ನಿಲ್ಲಿಸಿ ಪರಾರಿ ಆಗಿದ್ದಾರೆ.

ಈ ಹಿಂದೆಯೂ ಈ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಗೋವುಗಳ ಕಳ್ಳತನವಾಗಿದೆ. ಗೋವು ಕದ್ದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರಾ ಅಥವಾ ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದರಾ ಎಂಬುದು ತಿಳಿದು ಬಂದಿಲ್ಲ. ಪೊಲೀಸರಿಗೆ ಎಷ್ಟೇ ಒತ್ತಾಯಿಸಿದರೂ ಕಳ್ಳರನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಕಳ್ಳರ ಕೃತ್ಯವೆಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version