Site icon Vistara News

KREDL Dividends : ರಾಜ್ಯ ಸರ್ಕಾರಕ್ಕೆ 20.96 ಕೋಟಿ ಡಿವಿಡೆಂಡ್‌ ಸಲ್ಲಿಸಿದ ಕ್ರೆಡಲ್

KREDL

ಬೆಂಗಳೂರು : ಕ್ರೆಡಲ್‌ ಸಂಸ್ಥೆಯು 2021-22ನೇ ಸಾಲಿನಲ್ಲಿ ಗಳಿಸಿದ್ದ 20.96 ಕೋಟಿ ರೂ. ಲಾಭಾಂಶವನ್ನು ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ (KREDL Dividends ) ಶುಕ್ರವಾರ ಅರ್ಪಿಸಿದರು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್‌) 2021-22ನೇ ಸಾಲಿನಲ್ಲಿ ಗಳಿಸಿದ್ದ 69.87 ಕೋಟಿ ರೂ. ಮೊತ್ತದ ನಿವ್ವಳ ಲಾಭದ ಮೇಲೆ ಶೇ.30 ಲಾಭಾಂಶ (ಡಿವೆಡೆಂಡ್)20.96 ಕೋಟಿ ರೂ. ಮೊತ್ತದ ಡಿಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಸ್ವೀಕರಿಸಿದರು.

ಇದನ್ನೂ ಓದಿ: Gruhajyoti scheme : ಉಚಿತ ವಿದ್ಯುತ್‌ಗೆ ನೀವಿನ್ನೂ ಅರ್ಜಿ ಹಾಕಿಲ್ಲವೇ? ಜುಲೈ 27 ಲಾಸ್ಟ್‌ ಡೇಟ್‌!

ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆಪಿ ರುದ್ರಪ್ಪಯ್ಯ ಉಪಸ್ಥಿತರಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕ್ರೆಡಲ್‌ನ 101ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ 2021-22ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಶೇರುದಾರರ 26ನೇ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಪವನ ವಿದ್ಯುತ್‌, ಸೌರ ವಿದ್ಯುತ್‌ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಕ್ರೆಡಲ್‌ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ 2023ರ ಏಪ್ರಿಲ್‌ ಅಂತ್ಯಕ್ಕೆ 1.55 ಲಕ್ಷ ಮೆಗಾ ವ್ಯಾಟ್‌ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನ ವಲಯ ಪ್ರಗತಿ ಸಾಧಿಸಿತ್ತು. ಇದರಲ್ಲಿ ಪವನ, ಕಿರುಜಲ ವಿದ್ಯುತ್‌, ಬಯೊಮಾಸ್‌, ಸೌರಶಕ್ತಿ ವಿದ್ಯುತ್‌ ಉತ್ಪಾದನೆ ವಲಯ ಇತ್ತು.

Exit mobile version