ಕಲಬುರಗಿ: ಇಲ್ಲಿನ ಮರಳು ಟಿಪ್ಪರ್ ಚಾಲಕನಿಂದ ಹಣ ವಸೂಲಿ ಮಾಡಿದ ಆರೋಪದಡಿ (Crime News) ಜೇವರ್ಗಿ ಪಿಎಸ್ಐ ಮತ್ತು ಕಾನ್ಸ್‌ಟೇಬಲ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪೇದೆ ಆನಂದ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯಾದಗಿರಿ ಜಿಲ್ಲೆಯ ಹಣಮಂತರಾಯ ಎಂಬುವವವರು ಟಿಪ್ಪರ್ ಚಾಲಕರಾಗಿದ್ದು, ಜೇವರ್ಗಿಯಿಂದ ಮರಳು ತುಂಬಿಕೊಂಡು ಹೋಗಲು ಬಂದಿದ್ದರು. ಈ ವೇಳೆ ಪೇದೆ ಆನಂದ್, ಹಣಮಂತರಾಯನನ್ನು ತಡೆದು 64 ಸಾವಿರ ರೂ. ವಸೂಲಿ ಮಾಡಿದ್ದು, ಜತೆಗೆ ಕುತ್ತಿಗೆಯಲ್ಲಿದ್ದ 15 ಗ್ರಾಂ ಚಿನ್ನದ ಸರ ಕಸಿದುಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಇತ್ತ ಹಣ ವಸೂಲಿ ಮಾಡುವಾಗ ಕಿರುಚಾಡಿದರೆ ಕೊಲೆ ಮಾಡುವುದಾಗಿ ಪೊಲೀಸ್ ಕಾನ್ಸ್‌ಟೇಬಲ್ ಆನಂದ್ ಚಾಕು ತೋರಿಸಿ ಬೆದರಿಕೆಯನ್ನು ಹಾಕಿದ್ದರಂತೆ. ಹೀಗಾಗಿ ಈ ಸಂಬಂಧ ಹಣಮಂತರಾಯ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | ರಾಜ್ಯಪಾಲರನ್ನು ಶೂಟ್ ಮಾಡಿ ಕೊಲ್ಲಲು ಉಗ್ರನನ್ನು ಕಳಿಸುತ್ತೇವೆ ಎಂದ ತಮಿಳುನಾಡು ಡಿಎಂಕೆ ನಾಯಕ