ಚಿಕ್ಕಬಳ್ಳಾಪುರ: ಇಲ್ಲಿನ ಹಂಪಸಂದ್ರ ಡ್ಯಾಂ ಸಮೀಪ ಇರುವ ಕುಶವತಿ ನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿನಾರಾಯಣಹಳ್ಳಿ ಗ್ರಾಮದ ಸಮೀಪ ನೀರಿನಲ್ಲಿ ಮಹಿಳೆಯ ಶವವು ತೇಲಿ (Crime News) ಬಂದಿದೆ.
ಸುಮಾರು ೪೫-47 ವರ್ಷದ ಮಹಿಳೆ ಎಂದು ಅಂದಾಜಿಸಲಾಗಿದೆ. ನದಿಗೆ ಬಿದ್ದು ಮೂರು ದಿನ ಆಗಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಆದಿನಾರಾಯಣಹಳ್ಳಿ ಗ್ರಾಮದಲ್ಲಿ ಹುಚ್ಚಿಯಂತೆ ತಿರುಗುತ್ತಿದ್ದ ಅಪರಿಚಿತ ಮಹಿಳೆ ಎಂದು ಗ್ರಾಮಸ್ಥರು ಗುರುತಿಸಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | child found | ಎರಡು ದಿನದ ಮಗುವನ್ನು ಕೈಚೀಲದಲ್ಲಿ ಹಾಕಿ ಮಾರ್ಗದ ಬದಿಯಲ್ಲಿ ಬಿಟ್ಟು ಹೋದ ನಿರ್ದಯಿಗಳು!