Site icon Vistara News

Criminal suicide | ಗಡಿಪಾರು ಆದೇಶದ ಬಳಿಕ ವಿಷ ಸೇವಿಸಿದ್ದ ಕ್ರಿಮಿನಲ್‌ ಸುಹೇಲ್‌ ಕೋಬ್ರಾ ಆಸ್ಪತ್ರೆಯಲ್ಲಿ ಸಾವು

suhel cobra

ಶಿವಮೊಗ್ಗ: ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್‌ ಇಲಾಖೆಯಿಂದ ಗಡಿಪಾರು ಆದೇಶ ಪಡೆದಿದ್ದ ಶಿವಮೊಗ್ಗ ಸುಹೇಲ್ ಕೋಬ್ರಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸುಹೇಲ್ ವಿರುದ್ದ ತೀರ್ಥಹಳ್ಳಿ ಹಾಗು ಮಾಳೂರು ಠಾಣೆಯಲ್ಲಿ ಹಲವು ಕ್ರಿಮಿನಲ್ ‌ಪ್ರಕರಣ ದಾಖಲಾಗಿದ್ದವು. ಈತನ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಇಲಾಖೆ ಎರಡು ವರ್ಷಗಳ ಅವಧಿಗೆ ಜಿಲ್ಲೆಯಿಂದ ಗಡಿಪಾರು ಮಾಡಿತ್ತು. ನವೆಂಬರ್‌ ೨೮ರಂದು ಗಡಿಪಾರು ಆದೇಶವನ್ನು ಜಾರಿ ಮಾಡಿ ಆತನ ಮನೆಗೆ ನೋಟಿಸ್‌ ಕಳುಹಿಸಲಾಗಿತ್ತು.

ಈ ಗಡಿಪಾರು ಆದೇಶಕ್ಕೆ ಬೆದರಿದ್ದ ಸುಹೇಲ್‌ ಅಂದೇ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ. ಮನೆಯವರು ವಿಷಯ ತಿಳಿದು ಆತನನ್ನು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಬಳಿಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಹೇಲ್‌ಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅಲ್ಲೂ ಕಷ್ಟ ಎಂದ ಕಾರಣ ಮಂಗಳೂರಿನ ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ಒಯ್ಯಲಾಗಿತ್ತು.

ಕೆಲವು ದಿನ ಒದ್ದಾಡಿದ ಆರೋಪಿ ನಿನ್ನೆ ರಾತ್ರಿ ೧ ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಕಳೆದುಕೊಂಡಿದ್ದಾನೆ.

Exit mobile version