Site icon Vistara News

Crocodile attack: ರಾಯಚೂರಿನಲ್ಲಿ ಬಾಲಕನ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್‌

Crocodile attack on boy in Raichur

ರಾಯಚೂರು: ತಾಲೂಕಿನ ಕೊರ್ತಕುಂದ ಗ್ರಾಮದ ಕೃಷ್ಣಾ ನದಿಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನ ಮೇಲೆ ಮೊಸಳೆ ದಾಳಿ (Crocodile attack) ಮಾಡಿದ್ದು, ಕೈಯನ್ನು ಗಾಯಗೊಳಿಸಿದೆ. ಇದೇ ವೇಳೆ ಸಮೀಪದಲ್ಲಿದ್ದ ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಲಕ ಪ್ರಾಣಾಪಾದಿಂದ ಪಾರಾಗಿದ್ದಾನೆ. ಆದರೆ, ಪಕ್ಕದಲ್ಲೇ ನೀರು ಕುಡಿಯುತ್ತಿದ್ದ ಎಮ್ಮೆಯನ್ನು ಮೊಸಳೆ ಹೊತ್ತೊಯ್ದಿದೆ.

೯ ವರ್ಷದ ಪವನ್ ಮೊಸಳೆ ದಾಳಿಗೆ ಒಳಗಾದ ಬಾಲಕನಾಗಿದ್ದಾನೆ. ಕೊರ್ತಕುಂದ ಗ್ರಾಮದ ತಿಮ್ಮಪ್ಪ ಜಾತ್ರೆ ನಿಮಿತ್ತ ಅಜ್ಜಿ ಮನೆಗೆ ಪವನ್‌ ಬಂದಿದ್ದ. ಈ ವೇಳೆ ಕುಟುಂಬಸ್ಥರೊಂದಿಗೆ ಪವನ್‌ ನದಿಗೆ ತೆರಳಿದ್ದಾನೆ. ನದಿ ದಡದಲ್ಲಿ ಮಹಿಳೆಯರು ಬಟ್ಟೆ ತೊಳೆಯುತ್ತಿದ್ದರು. ಕುಟುಂಬಸ್ಥರು ನೀರಿನಲ್ಲಿ ಕೈಕಾಲು ತೊಳೆದುಕೊಂಡಿದ್ದಾರೆ.

ಆದರೆ, ಪವನ್‌ ನೀರಿನಲ್ಲಿ ಆಟವಾಡುತ್ತಾ ಸ್ವಲ್ಪ ಮುಂದಕ್ಕೆ ಹೋಗಿದ್ದಾನೆ. ಅಲ್ಲದೆ, ನದಿಯಲ್ಲಿ ಎಮ್ಮೆಯೊಂದು ಸಹ ನೀರು ಕುಡಿಯುತ್ತಾ ನಿಂತಿತ್ತು. ಆಗ ನದಿಯಲ್ಲಿದ್ದ ಎರಡು ಮೊಸಳೆಗಳು ಹೊಂಚುಹಾಕಿ ಏಕಾಏಕಿ ದಾಳಿ ನಡೆಸಿವೆ. ಮೊದಲಿಗೆ ಎಮ್ಮೆ ಮೇಲೆ ದಾಳಿ ನಡೆಸಿದ ಒಂದು ಮೊಸಳೆ ಅದನ್ನು ಕಚ್ಚಿಕೊಂಡಿದೆ. ಆಗ ಎಮ್ಮೆಯ ಕಿರುಚಾಟ ಕೇಳಿ ಅಲ್ಲಿಯೇ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಎಚ್ಚೆತ್ತುಕೊಂಡಿದ್ದಾರೆ. ಪವನ್‌ ಮೇಲೆ ಇನ್ನೊಂದು ಮೊಸಳೆ ದಾಳಿ ನಡೆಸುತ್ತಿದ್ದಂತೆ ಜೋರಾಗಿ ಕಿರುಚಿಕೊಂಡ ಮಹಿಳೆಯರು ಆತನನ್ನು ತಕ್ಷಣವೇ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Election: ವಿಧಾನಸಭೆಗೆ ಸ್ಪರ್ಧಿಸುವೆನೆಂದು ಪತ್ರ ಬರೆದ ಎಂಎಲ್‌ಸಿ ಆಯನೂರು ಮಂಜುನಾಥ್;‌ ಈಶ್ವರಪ್ಪಗೆ ಅಡ್ಡಗಾಲು?

ಅಷ್ಟರಲ್ಲಿ ಪವನ್‌ ಕೈಯನ್ನು ಮೊಸಳೆ ಬಲವಾಗಿ ಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಪವನ್‌ ಕೈಗೆ ಸ್ವಲ್ಪ ಹೆಚ್ಚೇ ಗಾಯಗಳಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಪವನ್‌ಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version