Site icon Vistara News

Murder Case: ಬೈಕ್ ಶೋ ರೂಂನಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿ ಗ್ರಾಹಕನ ಹತ್ಯೆ

Customer killed in bike showroom in kushal nagar

ಮಡಿಕೇರಿ: ಬೈಕ್ ಸರ್ವೀಸ್‌ಗೆ ಬಂದಿದ್ದ ಗ್ರಾಹಕ‌ ಮತ್ತು ಶೋರೂಂ ಮಾಲೀಕನ ನಡುವೆ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಗ್ರಾಹನ ಕೊಲೆಯಲ್ಲಿ (Murder Case) ಅಂತ್ಯ ಕಂಡ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ.

ಮಡಿಕೇರಿಯ ನಿವಾಸಿ(23) ಸಾಜೀದ್ ಮೃತ ಯುವಕನಾಗಿದ್ದಾನೆ. ಕುಶಾಲನಗರ ಮೈಸೂರು ರಸ್ತೆಯಲ್ಲಿರುವ ಕೋಡಗನ ಮೋಟಾರ್ಸ್ ಬೈಕ್ ಶೋ ರೂಂಗೆ ಸರ್ವೀಸ್‌ಗಾಗಿ ಬಂದಿದ್ದು, ಈತ ಮಾಲೀಕನ ಚೇರ್‌ನಲ್ಲಿ ಕುಳಿತುಕೊಂಡಿದ್ದ ಎನ್ನಲಾಗಿದೆ. ಇದನ್ನು ಮಾಲೀಕ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಅಲ್ಲದೇ ಸಾಜೀದ್ ಮತ್ತು ಆತನೊಂದಿಗೆ ಇದ್ದವರು ಮಾಲೀಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಈ ಸಂದರ್ಭ ಶೋ ರೂಂ ಮಾಲೀಕ ಶ್ರೀನಿಧಿ ಹರಿತವಾದ ಆಯುಧದಿಂದ ಸಾಜೀದ್‌ನ ಎದೆಗೆ ತಿವಿದಿದ್ದಾರೆ ಎಂದು ಹೇಳಲಾಗಿದೆ. ಗಂಭೀರ ಗಾಯಗೊಂಡ ಸಾಜೀದ್‌ನನ್ನು ಹೆಚ್ಚಿನ ಚಿಕಿತ್ಸೆಗೆ‌ ಮೈಸೂರಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ‌ ಫಲಕಾರಿಯಾಗದೆ ಸಾಜಿದ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ | Murder Case : ದುಡ್ಡು ಕೊಡೋ ಎಂದವನ ಮುಖಕ್ಕೆ ಕಡಗದಿಂದ ಗುದ್ದಿ, ಚಪ್ಪಲಿಯಿಂದ ತುಳಿದು ಕೊಂದ ಸ್ನೇಹಿತ

ಸಾಜೀದ್ ಮೂಲತಃ ಮಡಿಕೇರಿ ಗಣಪತಿ ಬೀದಿ‌ ನಿವಾಸಿಯಾಗಿದ್ದು, ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ. ಕುಶಾಲನಗರ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಣಂಬೂರು ಬೀಚ್‌ನಲ್ಲಿ ತಿರುಗಾಡುತ್ತಿದ್ದ ಯುವಕ-ಯುವತಿಗೆ ಕಿರುಕುಳ, ಮೂವರ ಅರೆಸ್ಟ್‌

Moral Policing Panambur Beach Mangalore

ಮಂಗಳೂರು: ಮಂಗಳೂರು ನಗರದ (Mangalore News) ಹೊರವಲಯದಲ್ಲಿ ಪಣಂಬೂರು ಬೀಚ್‌ಗೆ (Panambur Beach) ಬಂದಿದ್ದ ಬೇರೆ ಬೇರೆ ಧರ್ಮಕ್ಕೆ ಸೇರಿದ ಯುವಕ ಮತ್ತು ಯುವತಿಯ (Harrassing man and woman) ಮೇಲೆ ನೈತಿಕ ಪೊಲೀಸ್‌ಗಿರಿ (Moral Policing) ನಡೆದಿದೆ. ಪಣಂಬೂರು ಪೊಲೀಸರು ಕೂಡಲೇ ಕ್ರಮ ಕೈಗೊಂಡು ಮೂವರನ್ನು ಬಂಧಿಸಿದ್ದಾರೆ.

ಕೇರಳ ಮೂಲದ ಯುವಕ ಮತ್ತು ಬೆಂಗಳೂರು ಮೂಲದ ಯುವತಿ ಪರಸ್ಪರ ಪರಿಚಿತರಾಗಿದ್ದು, ಜತೆಯಾಗಿ ಪಣಂಬೂರು ಬೀಚ್‌ನಲ್ಲಿ ತಿರುಗಾಡಲು ಬಂದಿದ್ದರು. ಆದರೆ, ಹೀಗೆ ಬಂದಿದ್ದ ಯುವಕ ಮುಸ್ಲಿಂ ಎಂಬ ಸಂಶಯ ಅಲ್ಲಿದ್ದ ಕೆಲವರಿಗೆ ಬಂದಿತ್ತು. ಹಾಗಾಗಿ ಅವರು ಸ್ಥಳೀಯ ಶ್ರೀರಾಮ ಸೇನೆಯ ಯುವಕರಿಗೆ ವಿಷಯ ತಿಳಿಸಿದ್ದರು. ಶ್ರೀ ರಾಮ ಸೇನೆಯ ಯುವಕರು ಬೀಚ್‌ಗೆ ಆಗಮಿಸಿ ಯುವಕ-ಯುವತಿ ಜೋಡಿಯನ್ನು ಅಡ್ಡಗಟ್ಟಿದರು.

ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದು ಏಕೆ ಒಟ್ಟಿಗೆ ಇದ್ದೀರಿ ಎಂದು ಪ್ರಶ್ನಿಸಿದರು. ನಿಮ್ಮ ಮನೆಗಳಿಗೆ ವಿಷಯ ತಿಳಿಸುವುದಾಗಿ ಬೆದರಿಸಿದರು. ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಆಗ ಅವರು ಕೂಡಾ ನಮ್ಮನ್ನು ಪ್ರಶ್ನೆ ಮಾಡಲು ನೀವು ಯಾರು ಎಂದು ತಿರುಗಿ ಪ್ರಶ್ನಿಸಿದರು.

ಇದನ್ನೂ ಓದಿ : Moral Policing : ಹಿಂದು-ಮುಸ್ಲಿಂ ಯಾರೇ ಆಗಲಿ ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ; ಸಿಎಂ, ಡಿಕೆಶಿ ವಾರ್ನಿಂಗ್

ಒಂದು ಹಂತದಲ್ಲಿ ಗಲಾಟೆಯಾಗುವ ಸನ್ನಿವೇಶ ನಿರ್ಮಾಣವಾದಾಗ ಪಣಂಬೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಅವರ ವಿಚಾರಣೆ ನಡೆಸಿ ಬಂಧಿಸಲಾಗಿದೆ. ಇವರೆಲ್ಲರೂ ಶ್ರೀರಾಮ ಸೇನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version