Site icon Vistara News

Cyber Crime : ಎಚ್‌ಡಿ ಕುಮಾರಸ್ವಾಮಿ ಬಳಿಕ ಈಗ ರಾಜ್ಯಪಾಲರ ಮೇಲೆ ಸೈಬರ್‌ ವಂಚಕರ ಕಣ್ಣು!

karnataka governor Thawar Chand Gehlot

ಬೆಂಗಳೂರು: ಕರ್ನಾಟಕ‌ದ ರಾಜ್ಯಪಾಲರಿಗೂ ಸೈಬರ್ ವಂಚಕರ ಹಾವಳಿ ತಪ್ಪಿಲ್ಲ. ಕಳೆದ ಆಗಸ್ಟ್‌ 26ರಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಫೇಸ್‌ ಬುಕ್‌ ಪೇಜ್‌ ಹ್ಯಾಕ್‌ ಆಗಿತ್ತು. ಕುಮಾರಸ್ವಾಮಿಯವರ ಫೇಸ್‌ಬುಕ್‌ ಪೇಜ್‌ನಲ್ಲಿ ಎದೆ ಸೀಳು ಪ್ರದರ್ಶಿದ ಯುವತಿಯ (Girl photo) ಫೋಟೊವೊಂದು ಕಾಣಿಸಿಕೊಂಡಿತು. ಬಳಿಕ ಇದು ಕಿಡಿಗೇಡಿ ಹ್ಯಾಕರ್​ಗಳ ಕೃತ್ಯ ಎಂಬುದು ಬಹಿರಂಗಗೊಂಡಿತ್ತು. ಸದ್ಯ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ಸೈಬರ್‌ ವಂಚಕರು ತೆರೆದಿದ್ದಾರೆ.

ರಾಜ್ಯಪಾಲರ ಫೋಟೊ ಹಾಗೂ ಹೆಸರು ದುರ್ಬಳಕೆ ಮಾಡಿಕೊಂಡಿರುವ ಕಾರಣಕ್ಕೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಅವರು ದೂರು ದಾಖಲಿಸಿದ್ದಾರೆ. ನಕಲಿ ಖಾತೆ ತೆರೆದು ದುರುಪಯೋಗಪಡಿಸಿಕೊಳ್ಳುತ್ತಿರುವ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಎಚ್​ ಡಿ ಕುಮಾರಸ್ವಾಮಿ ಫೇಸ್​ಬುಕ್​ ಪೇಜ್​​ನಲ್ಲಿ ಎದೆ ಸೀಳು ತೋರಿಸಿದ ಯುವತಿಯ ಚಿತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್​ ವರಿಷ್ಠ ಎಚ್​ ಡಿ ಕುಮಾರಸ್ವಾಮಿ (HD Kumaraswamy) ಅವರ ಫೇಸ್​ಬುಕ್​ ಪೇಜ್​ನಲ್ಲಿ (Facebook page) ಏಕಾಏಕಿ ಎದೆ ಸೀಳು ಪ್ರದರ್ಶಿದ ಯುವತಿಯ (Girl photo) ಫೋಟೊವೊಂದು ಕಾಣಿಸಿಕೊಂಡಿತು. ಆ ಹುಡುಗಿಯ ಚಹರೆಯು ನಮ್ಮ ದೇಶದವಳು ಅಲ್ಲ ಎಂಬುದು ಸ್ಪಷ್ಟವಾಗಿ ಗುರುತಿಸುವಂತಿತ್ತು. ಏನಾಯಿತೆಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಆತಂಕ ವ್ಯಕ್ತಪಡಿಸುವಷ್ಟರಲ್ಲಿ ಅದು ಕಿಡಿಗೇಡಿ ಹ್ಯಾಕರ್​ಗಳ ಕೃತ್ಯ ಎಂಬುದು ಬಹಿರಂಗಗೊಂಡಿತು. ತಕ್ಷಣವೇ ಅವರು ಫೇಸ್​ಬುಕ್​ಗೆ ವರದಿ ನೀಡಿ ತಮ್ಮ ಪ್ರೊಫೈಲ್​ ಫೋಟೊವನ್ನು ಮರುಸ್ಥಾಪಿಸಿದ್ದಾರೆ. ಅಲ್ಲಿಗೆ ಪ್ರಕರಣ ಸುಖಾಂತ್ಯಗೊಂಡಿದೆ. ಅಭಿಮಾನಿಗಳು ಸೇರಿದಂತೆ ನೋಡುಗರ ಬಳಗದ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: Leopard Death : ಪತ್ರಕರ್ತನ ಮೇಲೆ ದಾಳಿ ಮಾಡಿದ್ದ ಚಿರತೆ ನಿಗೂಢ ಸಾವು!

ಪ್ರತಿಷ್ಠರ ಸಾಮಾಜಿಕ ಜಾಲತಾಣದ ಖಾತೆಗಳ ಬಗ್ಗೆ ಹ್ಯಾಕರ್​ಗಳಿಗೊಂದು ಕಣ್ಣಿರುತ್ತದೆ. ಪ್ರತಿಷ್ಠಿತ ವ್ಯಕ್ತಿಗಳ ಸೋಶಿಯಲ್​ ಮೀಡಿಯಾ ಅಕೌಂಟ್​ಗಳನ್ನು ಹ್ಯಾಕ್​ ಮಾಡಿಕೊಂಡು ಹಣಕ್ಕಾಗಿ ಬೇಡಿಕೆ ಇಡುವುದು ಹ್ಯಾಕರ್​ಗಳ ಪ್ರವೃತ್ತಿಯಾಗಿರುತ್ತದೆ. ಅಶ್ಲೀಲ ಹಾಗೂ ತಮಗೆ ಸಂಬಂಧಪಡದ ಫೋಟೋ ಬಂದಾಗ ಮುಜುಗರಕ್ಕೆ ಒಳಗಾಗುವ ವ್ಯಕ್ತಿಗಳು ಸಮಸ್ಯೆಯಿಂದ ಪರಿಹಾರ ಪಡೆಯಲು ಕೇಳಿದಷ್ಟು ಹಣ ಕೊಡುತ್ತಾರೆ ಎಂಬುದೇ ಆನ್​ಲೈನ್​ ಕಳ್ಳರ ಸಂಚು.

ಕೊಂಚ ನುಸುಳಲು ಅವಕಾಶ ಸಿಕ್ಕರೂ ಹ್ಯಾಕ್ ಮಾಡಿ ಒತ್ತೆಯಿಟ್ಟು ಹಣಕ್ಕೆ ಬೇಡಿಕೆ ಇಡುತ್ತಾರೆ. ಹಿತೈಷಿಗಳ ಕರೆ ಹಾಗೂ ಮಾನಸಿಕ ಕಿರುಕುಳವನ್ನು ಸಹಿಸಲು ಸಾಧ್ಯವಾಗದ ಕಾರಣ ಪ್ರತಿಷ್ಠಿತ ವ್ಯಕ್ತಿಗಳು ಹಣ ನೀಡಿದ ಹಲವಾರು ಪ್ರಕರಣಗಳಿವೆ. ಅಂತೆಯೇ ಕುಮಾರಸ್ವಾಮಿ ಅವರ ಖಾತೆಗೂ ಹ್ಯಾಕರ್​ಗಳು ನುಗ್ಗಿ ಕೋಲಾಹಲ ಸೃಷ್ಟಿಸಲು ಯತ್ನಿಸಿದ್ದಾರೆ. ಆದರೆ, ಉಪದ್ರವಿಗಳ ಯೋಜನೆಯನ್ನು ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳ ನಿರ್ವಹಣಾ ತಂಡ ವಿಫಲಗೊಳಿಸಿದೆ. ಸೂಕ್ತ ಮಾರ್ಗದ ಮೂಲಕ ಖಾತೆಯನ್ನು ಸರಿಪಡಿಸಿಕೊಂಡಿದೆ.

ಮಾಜಿ ಸಿಎಂ ಅವರ ಖಾತೆಯಲ್ಲೂ ಹುಡುಗಿಯೊಬ್ಬಳ ಚಿತ್ರವನ್ನು ಹಾಕಿ ಬೆದರಿಸಲು ಯತ್ನಿಸಿರಬಹುದು ಎನ್ನಲಾಗಿದೆ. ಆದರೆ, ಕುಮಾರಸ್ವಾಮಿ ಅವರ ಜಾಲತಾಣ ನಿರ್ವಹಣಾ ತಂಡವನ್ನು ತಕ್ಷಣ ಅಲರ್ಟ್​ ಆಗಿ ಖಾತೆಯನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಲು ಯಶಸ್ವಿಯಾಗಿದೆ. ಕುಮಾರಸ್ವಾಮಿ ಅವರು ಫೇಸ್​ಬುಕ್​ ಖಾತೆ ಬ್ಲೂ ಟಿಕ್​ ಹೊಂದಿದೆ. ಹೀಗಾಗಿ ಫೇಸ್​ಬುಕ್​ ತಂಡವು ಇಂತಹ ಖಾತೆಗಳ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡುತ್ತವೆ. ಹೀಗಾಗಿ ಕುಮಾರಸ್ವಾಮಿ ಅವರ ಖಾತೆಯನ್ನು ತಕ್ಷಣದಲ್ಲೇ ಹ್ಯಾಕರ್​ಗಳ ಕಡೆಯಿಂದ ವಾಪಸ್​ ಪಡೆಯಲು ಸಾಧ್ಯವಾಗಿದೆ ಎನ್ನಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version