Site icon Vistara News

Cyber Crime: ಪಾರ್ಟ್‌ ಟೈಂ ಜಾಬ್‌ ಆಮಿಷ; ಲಿಂಕ್‌ ಕ್ಲಿಕ್ಕಿಸಿ ಕಾಸು ಲೂಟಿ, ಹೋಯಿತು ಕೋಟಿ ಕೋಟಿ!

Cyber fraud cases on the rise in Bengaluru

ಬೆಂಗಳೂರು: ಮನೆಗಳ್ಳರ ಕಾಟ ಒಂದು ಕಡೆಯಾದರೆ, ಸೈಬರ್‌ ವಂಚಕರ (Cyber Crime) ಮೋಸದಾಟ ಮತ್ತೊಂದು ಕಡೆ. ಡ್ರಗ್ಸ್ ಜಾಲಕ್ಕಿಂತ ಆಳವಾಗಿ ಬೇರೂರಿರುವುದು ಸೈಬರ್ ಕ್ರೈಂ. ಬೆರಳ ತುದಿಯಲ್ಲೇ ಸಿಗುವ ಟೆಕ್ನಾಲಜಿಯನ್ನು ದುರ್ಬಳಕೆ ಮಾಡಿಕೊಂಡು, ವಂಚನೆಗೆ ಹೊಸ ಹೊಸ ವಿಧಾನಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಈಗ ಎರಡು ರೀತಿಯಲ್ಲಿ ಸೈಬರ್‌ ಕ್ರೈಂ ಮಾಡಲಾಗುತ್ತಿದೆ. ಅದುವೇ ಜಾಬ್ ಆಫರ್ ಹಾಗೂ ಕೋರಿಯರ್ ಕೇಸ್‌ಗಳು.

ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಪ್ರಕಾರ ಜನವರಿಯಿಂದ ಈವರೆಗೆ ಒಟ್ಟು 16,300 ದೂರುಗಳು ದಾಖಲಾಗಿವೆ. ಈ ಮೊದಲು ವಂಚಕರು ತಾವು ಬ್ಯಾಂಕ್‌ ಅಧಿಕಾರಿಗಳೆಂದು ಹೇಳಿ ಒಟಿಪಿ ಪಡೆದು ಕ್ಷಣಾರ್ಧದಲ್ಲಿ ಖಾತೆಯನ್ನು ಖಾಲಿ ಮಾಡುತ್ತಿದ್ದರು. ಕೋವಿಡ್ ಬಳಿಕ ಚೈನೀಸ್ ಆ್ಯಪ್‌ಗಳ ಕಾಟ ಶುರುವಾಯಿತು. ನಂತರ ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಒಂದಷ್ಟು ದಿನ ವಂಚಿಸಿದ್ದಾರೆ. ಜನರು ಇದು ಫ್ರಾಡ್ ಎಂದು ಅರಿವಾಗಿ ಅದರಿಂದ ದೂರವಾಗುವಷ್ಟರಲ್ಲಿ ಮತ್ತೊಂದು ಹೊಸ ಉಪಾಯ ಹುಡುಕಿ ವಂಚನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Murder Case : ಕಗ್ಗತ್ತಲಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪೈಂಟರ್‌ನ ಕೊಲೆ!

ಸದ್ಯ ಸೈಬರ್‌ ಕ್ರೈಂನಲ್ಲಿ ಟ್ರೆಂಡ್‌ನಲ್ಲಿರುವುದು ಕೋರಿಯರ್‌ ಕೇಸ್‌ಗಳು. ಮುಂಬೈ ಡಿಸಿಪಿ ಎಂದು ಕರೆ ಮಾಡುವ ವಂಚಕರು, ನಿಮ್ಮ ಹೆಸರಿನಲ್ಲಿ ಪಾರ್ಸಲ್‌ ಬಂದಿದೆ. ಅದರಲ್ಲಿ ಡ್ರಗ್ಸ್‌ ಜತೆಗೆ ಲೆಕ್ಕವಿಲ್ಲದಷ್ಟು ಗೋಲ್ಡ್‌ ಬಿಸ್ಕತ್ತು ಸಿಕ್ಕಿದೆ. ಈ ಕೇಸ್‌ ಕ್ಲಿಯರ್ ಮಾಡಬೇಕಾದರೆ ಇಂತಿಷ್ಟು ಹಣ ನೀಡಬೇಕು, ಇಲ್ಲದಿದ್ದರೆ ನಿಮ್ಮ ಬ್ಯಾಂಕ್‌ ಅಕೌಂಟ್‌ ಫ್ರಿಜ್‌ ಆಗುತ್ತದೆ ಎಂದು ಹೆದರಿಸಿ ಹಣ ಲೂಟಿ ಮಾಡುತ್ತಾರೆ.

ಇದು ಒಂದು ರೀತಿ ದಂಧೆಯಾದರೆ ಮತ್ತೊಂದು ಹೆಚ್ಚು ಟ್ರೆಂಡ್‌ನಲ್ಲಿರುವುದು ಜಾಬ್ ಆಫರ್. ನಿಮ್ಮ ಮೊಬೈಲ್‌ಗೆ ಲಿಂಕ್ ಕಳಿಸಿ ಪಾರ್ಟ್ ಟೈಂ ಜಾಬ್ ಇದೆ . ಟಾಸ್ಕ್‌ಗಳನ್ನು ಪೂರ್ತಿ ಮಾಡಿದರೆ ಕೂತಲ್ಲೆ ದುಡ್ಡು ಮಾಡಬಹುದೆಂದು ಆಮಿಷವೊಡುತ್ತಾರೆ. ಲಿಂಕ್‌ ಕ್ಲಿಕ್‌ ಮಾಡಿದವರಿಗೆ ಮೊದಲು ಇಂತಿಷ್ಟು ಹಣವನ್ನು ಅಕೌಂಟ್‌ಗೆ ಹಾಕಿ ನಂಬಿಕೆಯನ್ನು ವಂಚಕರು ಗಿಟ್ಟಿಸಿಕೊಳ್ಳುತ್ತಾರೆ.

ನಂತರ ಇನ್ವೆಷ್ಟ್ ಮಾಡಿ ಡಬಲ್ ಹಣ ಬರುತ್ತೆ ಎಂದು ಆಸೆ ತೋರಿಸುತ್ತಾರೆ. ಆಸೆಗೆ ಬಿದ್ದ ಜನರು ಹಣ ಡಬಲ್‌ ಆಗುತ್ತೆ ಎಂದು ಲಕ್ಷಗಟ್ಟಲೆ ಹೂಡಿಕೆ ಮಾಡುತ್ತಾರೆ. ಹೀಗೆ ಲಕ್ಷ ಲಕ್ಷ ಹಣ ಸಿಕ್ಕಾಗಲೇ ಸೈಬರ್ ವಂಚಕರ ಅಸಲಿ ಆಟ ಶುರುವಾಗುತ್ತದೆ. ಬಂದಷ್ಟು ಬರಲಿ ಎಂದು ದೋಚಿಕೊಳ್ಳುವ ವಂಚಕರು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಕೊಳ್ಳುತ್ತಾರೆ. ಈ ಸಂಬಂಧ ಈವರೆಗೆ ಒಟ್ಟು 5,300 ದೂರು ಬಂದಿವೆ. ಎಂಟು ವಿಭಾಗದಲ್ಲಿ ದಾಖಲಾದ ಪ್ರಕರಣಗಳನ್ನು ನೋಡುವಾದರೆ,

ವೈಟ್ ಫೀಲ್ಡ್ ವಿಭಾಗ – 2,500
ಉತ್ತರ ವಿಭಾಗ – 2,400
ಈಶಾನ್ಯ ವಿಭಾಗ – 2,200
ಆಗ್ನೇಯ ವಿಭಾಗ – 2,100
ಕೇಂದ್ರ ವಿಭಾಗ – 1,980
ದಕ್ಷಿಣ ವಿಭಾಗ – 1,750
ಪೂರ್ವ ವಿಭಾಗ – 1,700
ಪಶ್ಚಿಮ ವಿಭಾಗ – 1,560

ಸಾರ್ವಜನಿಕರು ಯಾರಾದರೂ ಫೋನ್‌ ಕರೆ ಮಾಡಿದರೆ ಒಟಿಪಿ ನೀಡುವುದು, ಗೊತ್ತಿಲ್ಲದ ಲಿಂಕ್‌ಗಳನ್ನು ಕ್ಲಿಕ್‌ ಮಾಡುವುದು ಮಾಡಬಾರದು. ಇದರಿಂದ ಸೈಬರ್ ವಂಚನೆಗೆ ಕಡಿವಾಣ ಹಾಕಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version