Site icon Vistara News

Cyber Crime | ತನ್ನ ಲವ್‌ಗೆ ಹುಳಿಹಿಂಡಿದವನ ತಂಗಿಯನ್ನೇ ಟಾರ್ಗೆಟ್‌ ಮಾಡಿದಳು; ಇನ್ಸ್ಟಾದಲ್ಲಿ ಫೋಟೊ, ನಂಬರ್‌ ಹಾಕಿದಳು!

cyber crime Fake account love matter

ಬೆಂಗಳೂರು: ಇಲ್ಲೊಬ್ಬಳು ಯುವತಿಗೆ ಪ್ರತಿನಿತ್ಯ ಅನಾಮಿಕ ವ್ಯಕ್ತಿಗಳಿಂದ ಕರೆ ಬರುತ್ತಿತ್ತು. ಕರೆ ಸ್ವೀಕರಿಸಿದ್ದೇ ಆದಲ್ಲಿ ಕೇಳಿಬರುತ್ತಿದ್ದ ಅಶ್ಲೀಲ ರೀತಿಯ ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೆ ಕಾರಣ ತಿಳಿಯದೆ ಯುವತಿ ಕಂಗೆಟ್ಟಿದ್ದಳು. ಪೊಲೀಸರಿಗೆ ದೂರು ಹೋದ ಮೇಲೆ ಅಸಲಿ ಸತ್ಯ ಬಯಲಿಗೆ ಬಂದಿದೆ. ಅಣ್ಣನ ಮೇಲಿನ ದ್ವೇಷಕ್ಕೆ ಯುವತಿಯೊಬ್ಬಳು ಈ ಕೃತ್ಯ ಎಸೆಗಿದ್ದು, ಇನ್ಸ್ಟಾಗ್ರಾಂನಲ್ಲಿ ಯುವತಿಯ ಮಾರ್ಫ್‌ಡ್‌ ಫೋಟೊ (Cyber Crime) ಹಾಗೂ ಮೊಬೈಲ್‌ ನಂಬರ್‌ ಹಾಕಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಲವ್‌ ವಿಷಯವೇ ಮೂಲ ಕಾರಣ ಎಂಬುದು ತಿಳಿದು ಬಂದಿದೆ.

ಏನಿದು ಪ್ರಕರಣ?
ಯುವತಿಯೊಬ್ಬಳಿಗೆ ಪ್ರತಿ ದಿನ ಹಲವಾರು ಕರೆಗಳು ಏಕಾಏಕಿ ಬರಲು ಪ್ರಾರಂಭ ಮಾಡಿವೆ. ಈ ವೇಳೆ ಕರೆ ಸ್ವೀಕರಿಸಿ, ಸ್ವೀಕರಿಸಿ ಸುಸ್ತಾದ ಯುವತಿಗೆ ಅತ್ತ ಕಡೆಯಿಂದ ಅಶ್ಲೀಲ ಮಾತುಗಳು ಕೇಳಿಬರಲಾರಂಭಿಸಿದೆ. ಬಳಿಕ ಭಯಗೊಂಡ ಯುವತಿಯು ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಮನೆಯವರು ಕರೆ ಸ್ವೀಕರಿಸಿದರೂ ಇಂಥ ಮಾತುಗಳನ್ನು ಕೇಳಬೇಕಾಯಿತು.

ಈ ವೇಳೆ ಯುವತಿಯ ಇನ್ಸ್ಟಾಗ್ರಾಂ ಖಾತೆಗೆ ಅಶ್ಲೀಲ ಮೆಸೇಜ್‌ಗಳು ಬರತೊಡಗಿವೆ. ಆಗ ಯುವತಿಯ ಹೆಸರಿನಲ್ಲಿಯೇ ಫೇಕ್‌ ಅಕೌಂಟ್‌ ಕ್ರಿಯೇಟ್‌ ಆಗಿರುವುದೂ ಗೊತ್ತಾಗಿದೆ. ಅದರಲ್ಲಿ ಮಾರ್ಫ್ ಮಾಡಲಾಗಿದ್ದ ಯುವತಿಯ ಅಶ್ಲೀಲ ಫೋಟೊಗಳನ್ನು ಹಾಕಿ, ಕಾಲ್ ಗರ್ಲ್ ಎಂದು ನಮೂದು ಮಾಡಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕೂಡಲೇ ಪೊಲೀಸರಿಗೆ ದೂರು ನೀಡಲಾಯಿತು.

ಇದನ್ನೂ ಓದಿ | Delhi Crime | ವಿಕೃತ ಹಂತಕ ಅಫ್ತಾಬ್‌ ನಾರ್ಕೊ ಟೆಸ್ಟ್‌ಗೆ ಕೋರ್ಟ್‌ ಅಸ್ತು, ಏನಿದು ಪರೀಕ್ಷೆ?

ತನಿಖೆ ವೇಳೆ ಯುವತಿ ಕೃತ್ಯ ಬೆಳಕಿಗೆ
ಯುವತಿಯು ತನ್ನ ಇನ್ಸ್ಟಾ ಖಾತೆಯನ್ನು ಪ್ರೈವೇಟ್‌ ಮಾಡಿಕೊಂಡರೂ ಫೇಕ್ ಅಕೌಂಟ್‌ನಿಂದ ಯುವತಿಯ ನೈಜ ಅಕೌಂಟ್‌ಗೆ ಅಸಭ್ಯ ಮೆಸೇಜ್‌ಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಫೋಟೊಗಳು ಅಪ್ಲೋಡ್‌ ಆಗುತ್ತಿದ್ದ ಐಪಿ ಅಡ್ರೆಸ್‌ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಜತೆಗೆ ಅಕೌಂಟ್‌ ಫಾಲೋವರ್ಸ್‌, ಫಾಲೋವಿಂಗ್‌ ಖಾತೆಗಳನ್ನೂ ಪರಿಶೀಲಿಸಿದ್ದಾರೆ. ಈ ಎಲ್ಲ ನಿಟ್ಟಿನಲ್ಲಿಯೂ ತನಿಖೆ ನಡೆಸಿದಾಗ ಫೇಕ್‌ ಅಕೌಂಟ್‌ ಸಿಕ್ಕಿಬಿದ್ದಿತ್ತು. ಅದನ್ನು ಯುವತಿಯೊಬ್ಬಳು ಮಾಡುತ್ತಿದ್ದಳು ಎಂಬುದೂ ತಿಳಿದುಬಂದಿದೆ.

ಬಿಕಾಂ ವಿದ್ಯಾರ್ಥಿನಿಯ ಕೃತ್ಯ
ಬಿಕಾಂ ಓದುತ್ತಿದ್ದ ಯುವತಿಯೇ ಈ ರೀತಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಳು. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗಿ ಈ ಕೃತ್ಯಕ್ಕೆ ಅಸಲಿ ಕಾರಣ ತಿಳಿದುಬಂದಿದೆ. ತನ್ನ ಪ್ರೀತಿಯ ವಿಷಯಕ್ಕಾಗಿ ಈ ರೀತಿ ಮಾಡಬೇಕಾಯಿತು. ಇಷ್ಟೆಲ್ಲ ಅವಾಂತರಕ್ಕೆ ಆ ಯುವತಿಯ ಅಣ್ಣನೇ ಕಾರಣ ಎಂದು ಹೇಳಿದ್ದಾಳೆ.

ಬಿಕಾಂ ಓದುತ್ತಿದ್ದ ಈ ಯುವತಿಯು ಒಬ್ಬನನ್ನು ಪ್ರೀತಿ ಮಾಡುತ್ತಿದ್ದಳು. ಇಬ್ಬರ ನಡುವಿನ ಲವ್‌ ಸ್ಟೋರಿ ಬಹಳ ಉತ್ತಮವಾಗಿಯೇ ಸಾಗಿತ್ತು. ಆದರೆ, ಇದೇ ವೇಳೆ ಈಕೆ ಬಗ್ಗೆ ಪ್ರಿಯಕರನಿಗೆ ಆತನ ಸ್ನೇಹಿತನೊಬ್ಬ ತಪ್ಪು ತಪ್ಪಾಗಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಆಕೆಯ ನಡತೆ ಸರಿ ಇಲ್ಲ ಎಂಬೆಲ್ಲ ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಪ್ರಿಯಕರ, ತನ್ನ ಸ್ನೇಹಿತ ಹೇಳಿದ್ದನ್ನೆಲ್ಲ ಹೇಳಿ ಬ್ರೇಕಪ್‌ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಸಿಟ್ಟಿಗೆದ್ದ ಯುವತಿಯು ತನ್ನ ಲವ್‌ಗೆ ಹುಳಿಹಿಂಡಿದವನಿಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ನಿರ್ಧರಿಸಿದ್ದು, ಇದೇ ಕಾರಣಕ್ಕಾಗಿ ಪ್ರೀತಿಗೆ ಕಲ್ಲು ಹಾಕಿದವನ ತಂಗಿಯನ್ನು ಟಾರ್ಗೆಟ್‌ ಮಾಡಿದ್ದಾಳೆಂಬ ವಿಚಾರವು ತನಿಖೆ ವೇಳೆ ತಿಳಿದುಬಂದಿದೆ. ಈಶಾನ್ಯ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯುವತಿಯ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ | Delhi Crime | ಹೆಣ ಇಡಲು ಫ್ರಿಡ್ಜ್‌, ದುರ್ನಾತ ತಡೆಯಲು ಅಗರಬತ್ತಿ, ಟಿವಿ ಶೋ ನೋಡಿ ಕ್ರೈಂ, ಅಫ್ತಾಬ್‌ ಅಮೀನ್‌ ಕರಾಳ ಮುಖ

Exit mobile version