Site icon Vistara News

Cyclone Biparjoy: ಬಿಪರ್‌ಜಾಯ್‌ ಬಿರುಗಾಳಿ ಅಬ್ಬರ, 3 ದಿನದಲ್ಲಿ ಮುಂಗಾರು ತೀವ್ರ; ಜಲಕಂಟಕ ಫಿಕ್ಸ್

Monsoon 2024

Monsoon to hit Kerala, parts of northeast India in next 24 hours: IMD

ಬೆಂಗಳೂರು/ನವದೆಹಲಿ: ಗುಜರಾತ್‌ ಕರಾವಳಿ ಮೂಲಕ ಗಂಟೆಗೆ ಸುಮಾರು 135-150 ಕಿ.ಮೀ ವೇಗದಲ್ಲಿ ಬಿಪರ್‌ಜಾಯ್‌ (Cyclone Biparjoy) ಚಂಡಮಾರುತವು ಗುರುವಾರ ಸಂಜೆ (ಜೂನ್‌ 15) ಭಾರತವನ್ನು ಪ್ರವೇಶಿಸಲಿದ್ದು, ಭಾರಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದರ ಬೆನ್ನಲ್ಲೇ, ಜುಲೈ 18ರಿಂದ ದೇಶದಲ್ಲಿ ಮುಂಗಾರು ಮಳೆಯು ತೀವ್ರ ಸ್ವರೂಪ ಪಡೆಯಲಿದ್ದು, ಹೆಚ್ಚಿನ ರಾಜ್ಯಗಳಿಗೆ ಜಲಕಂಟಕ ಎದುರಾಗಲಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದಿಂದ ತೀವ್ರ ಪ್ರಮಾಣದಲ್ಲಿ ಬಿಪರ್‌ಜಾಯ್‌ ಚಂಡಮಾರುತ ಅಪ್ಪಳಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಸೌರಾಷ್ಟ್ರ, ಕಛ್‌ ಸೇರಿ ಗುಜರಾತ್‌ನ ಹಲವು ಕರಾವಳಿ ಪ್ರದೇಶಗಳಿಂದ ಸುಮಾರು 74 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಜೋರು ಗಾಳಿ ಬೀಸುವುದು ಆರಂಭವಾದ ಕಾರಣ 76 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ನೌಕಾಪಡೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಪಡೆಗಳು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿವೆ.

ಡ್ರೋನ್‌ ಕಣ್ಣಲ್ಲಿ ಬಿಪರ್‌ಜಾಯ್‌ ಚಂಡಮಾರುತ

ಯಾವ ರಾಜ್ಯಗಳಲ್ಲಿ ಭಾರಿ ಮಳೆ?

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬಿಪರ್‌ಜಾಯ್‌ ಚಂಡಮಾರುತದ ಕಾರಣ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ, ದಮನ್‌ ದಿಯು, ಲಕ್ಷದ್ವೀಪ ಹಾಗೂ ದಾದರ್‌ ಸೇರಿ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದೆ.

ಗುಜರಾತ್‌ನಲ್ಲಿ ಬೆಳಗ್ಗೆಯಿಂದಲೇ ಬಿರುಗಾಳಿ

ಇದನ್ನೂ ಓದಿ: Weather Report : ಬಿಪರ್‌ ಜಾಯ್‌ ಎಫೆಕ್ಟ್;‌ ಕರಾವಳಿಯಲ್ಲಿ ಭಾರಿ ಮಳೆ ನಿರೀಕ್ಷೆ, 5 ದಿನ ಸಮುದ್ರಕ್ಕೆ ಇಳೀಬೇಡಿ

ಜೂನ್‌ 18ರಿಂದ ಮುಂಗಾರು ತೀವ್ರ

ಬಿಪರ್‌ಜಾಯ್‌ ಚಂಡಮಾರುತದ ಭೀತಿ ಬೆನ್ನಲ್ಲೇ ಜೂನ್‌ 18ರಿಂದ ಮುಂಗಾರು ಮಳೆ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವಾರ ತಡವಾಗಿ ಅಂದರೆ, ಜೂನ್‌ 8ರಂದು ದೇಶಕ್ಕೆ ಮುಂಗಾರು ಪ್ರವೇಶವಾಗಿದೆ. ಇದು ದೇಶದ ಬಹುತೇಕ ಭಾಗಗಳಲ್ಲಿ ಜೂನ್‌ 18ರಿಂದ ತೀವ್ರಗೊಳ್ಳಲಿದೆ. ಈಗಾಗಲೇ ದೇಶದಲ್ಲಿ ಬಿಪರ್‌ಜಾಯ್‌ ಭೀತಿ ಇದ್ದು, ಇದರ ಜತೆಗೆ ಮುಂಗಾರು ಮಳೆಯೂ ತೀವ್ರವಾದರೆ ಜನರಿಗೆ ಭಾರಿ ಪ್ರಮಾಣದಲ್ಲಿ ತೊಂದರೆಯಾಗಲಿದೆ ಎಂದು ಎಚ್ಚರಿಸಲಾಗಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version