ಬೆಂಗಳೂರು: ಇಂದು ಬೆಂಗಳೂರು ಸೇರಿ ಹಲವೆಡೆ ಸೈಕ್ಲೋನ್ ಮಾಂಡೌಸ್‌ನ ಪರಿಣಾಮ ಮುಂದುವರಿದಿದ್ದು, ಮೋಡ ಕವಿದ ವಾತಾವರಣವಿದೆ. ಬೆಂಗಳೂರಿನ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ.
ಮೋಡ ಕವಿದ ವಾತಾವರಣದೊಂದಿಗೆ ಮಳೆ ಸಾಧ್ಯತೆ ಇದೆ. ಡಿಸೆಂಬರ್ 15ರವೆರೆಗೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಸಾಧಾರಣ ಮಳೆ ಜೊತೆಗೆ ಚಳಿಯೂ ಮುಂದುವರಿಯಲಿದೆ. ದಕ್ಷಿಣ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ ಮಳೆ ಬೆಂಗಳೂರಿಗರಿಗೆ ಕೊಂಚ ಬಿಡುವು ಕೊಟ್ಟಿದೆ. ಮೂರು ನಾಲ್ಕು ದಿನದಿಂದ ನಿರಂತರವಾಗಿ ಸುರಿಯುತ್ತಿದ್ದ ಜಿಟಿಜಿಟಿ ಮಳೆ ಸ್ವಲ್ಪ ಬ್ರೇಕ್ ನೀಡಿದ್ದು, ಚಳಿ, ಮೋಡದ ವಾತಾವರಣ ಮುಂದುವರಿದಿದೆ. ಯಾವುದೇ ಸಮಯದಲ್ಲಿ ಮತ್ತೆ ತುಂತುರು ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ | Cyclone Mandous | ಕರಾವಳಿಯಲ್ಲಿ ಮಾಂಡೌಸ್ ಅಬ್ಬರ: ಲಂಗರು ಹಾಕಿದ ಬೋಟುಗಳು