Site icon Vistara News

Cyclone Mandous | ಮಾಂಡೌಸ್‌ ಎಫೆಕ್ಟ್‌; 5 ದಿನ ಭತ್ತ ಕಟಾವು ಮಾಡ್ಬೇಡಿ ಎಂದ ಕೃಷಿ ಇಲಾಖೆ

Cyclone Mandous

ಮೈಸೂರು/ಕೊಪ್ಪಳ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ (Cyclone Mandous) ಜನರು ತತ್ತರಿಸಿ ಹೋಗಿದ್ದಾರೆ, ಮತ್ತೊಂದು ಕಡೆ ಬೆಳೆ ನಾಶವಾಗುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ 5 ದಿನಗಳ ಕಾಲ ಧಾರಾಕಾರ ಮಳೆಯಾಗಲಿದ್ದು, ಈ ಸಮಯದಲ್ಲಿ ಭತ್ತ ಕಟಾವು ಮಾಡದಂತೆ ರೈತರಿಗೆ ಕೃಷಿ ಇಲಾಖೆ ಮನವಿ ಮಾಡಿದೆ.

ಮಾಂಡೌಸ್‌ ಚಂಡಮಾರುತದಿಂದಾಗಿ ರಾಜ್ಯಾದ್ಯಂತ ಐದು ದಿನ ಮಳೆ ಸುರಿಯುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ ಮೂಲಕ ಸಂದೇಶ ರವಾನೆ ಮಾಡಲಾಗುತ್ತಿದೆ.‌ ಕೃಷಿ ಕಾರ್ಮಿಕರನ್ನು ಬಳಸಿ ಭತ್ತ ಕಟಾವು ಮಾಡಿದರೆ ಹಾನಿ ಪ್ರಮಾಣ ಹೆಚ್ಚಳವಾಗಲಿದೆ. ಯಂತ್ರೋಪಕರಣ ಬಳಸಿದರೆ ಒಂದೇ ದಿನದಲ್ಲಿ ಒಕ್ಕಣೆ ಆಗಲಿದೆ. ಆದ್ದರಿಂದ ಯಂತ್ರೋಪಕರಣ ಬಳಕೆ ಮಾಡುವಂತೆ ಮೈಸೂರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಚಂದ್ರಶೇಖರ್ ಸೂಚನೆ ನೀಡಿದ್ದಾರೆ. ಮಾಂಡೌಸ್ ಚಂಡಮಾರುತದಿಂದ ಈಗ ಭತ್ತದ ಕಟಾವಿಗೆ ಹಿನ್ನಡೆ ಆಗಿದೆ.

ಕಟಾವು ಮಾಡಿದ ಮೆಣಸಿನಕಾಯಿ ಹಾಳು
ಕೊಪ್ಪಳ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಗೆ ಕಟಾವು ಮಾಡಿದ ಮೆಣಸಿನಕಾಯಿ ಹಾಳಾಗಿದೆ. ಕಟಾವು ಮಾಡಿ ಒಣಗಿಸಲು ಹಾಕಿದ ಮೆಣನಸಿಕಾಯಿ ಗುಡ್ಡೆಯಲ್ಲಿ ನೀರು ನಿಂತಿದೆ. ಒಣಮೆಣಸಿನಕಾಯಿ ಮಳೆಗೆ ಹಾಳಾಗಿ ಕೊಳೆತು ಹೋಗಿವೆ. ರೈತರಿಗೆ ಕೈಗೆ ಬಂದ ಬೆಳೆ ಕಣ್ಣೆದುರೇ ಹಾಳಾಗುತ್ತಿರುವ ಸ್ಥಿತಿ ಬಂದೊದಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ, ಯರೇಹಂಚಿನಾಳದಲ್ಲಿಯ ಮೆಣಸಿನಕಾಯಿ ಬೆಳಗಾರರಿಗೆ ಸಂಕಷ್ಟ ಎದುರಾಗಿದ್ದು, ಮಳೆಯಿಂದ ಹಾಳಾಗುತ್ತಿರುವ ಮೆಣಸಿನಕಾಯಿಗೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Cyclone Mandous | ಕೋಲಾರದಲ್ಲಿ ಮಳೆಗೆ ಕುಸಿದು ಬಿದ್ದ ಮನೆ; ಧರೆಗುರುಳಿದ ಲೈಟ್‌ ಕಂಬ, ಮರಗಳು

Exit mobile version